ವೀಡಿಯೊ: ಪ್ರಜಾಧ್ವನಿ ಯಾತ್ರೆ ವೇಳೆ ಬಸ್‌ ಮೇಲಿಂದ ಹಣ ಎಸೆದ ಡಿ.ಕೆ. ಶಿವಕುಮಾರ…!

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ ಮಂಡ್ಯ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ತೊಡಗಿದ್ದು, ರ್ಯಾಲಿಯಲ್ಲಿ ಜನರ ಮೇಲೆ ಹಣ ಎಸೆದಿದ್ದಾರೆ. ವಿಡಿಯೋದಲ್ಲಿ ಶಿವಕುಮಾರ ಅವರು ಮಂಡ್ಯ ತಾಲೂಕಿನ ಬೇವಿನಹಳ್ಳಿ ಬಳಿ ಪ್ರಜಾಧ್ವನಿ ಯಾತ್ರೆಯಲ್ಲಿ ಬಸ್‌ ಮೇಲಿಂದ ಜಾನಪದ ಕಲಾವಿದರಿಗೆ ಹಣವನ್ನು ಎರಚುವುದು ಕಂಡುಬಂದಿದೆ.
ಮಂಡ್ಯ ತಾಲೂಕಿನ ಹಾಗೂ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೇವಿನಹಳ್ಳಿ ಗ್ರಾಮದಲ್ಲಿ ಮಂಗಳವಾರ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಂಡಿಸಿದ್ದೇಗೌಡ ಪರವಾಗಿ ಬೇವಿನಹಳ್ಳಿಯಲ್ಲಿ ಬಸ್‌ ಮೇಲಿಂದಲೇ ರೋಡ್‌ ಶೋ ಮೂಲಕ ಚುನಾವಣಾ ಪ್ರಚಾರ ಮಾಡುತ್ತಿದ್ದಾಗ ಈ ವಿದ್ಯಮಾನ ನಡೆದಿದೆ.

ವೀಡಿಯೊದಲ್ಲಿ, ಶಿವಕುಮಾರ, ಬಸ್‌ನ ಮೇಲೆ ನಿಂತಿದ್ದು, ನೋಟುಗಳನ್ನು ಎಸೆಯುವ ಮೊದಲು ಕರೆನ್ಸಿ ನೋಟುಗಳನ್ನು ಹಿಡಿಯಲು ತಿರುಗುತ್ತಿರುವುದು ಕಂಡುಬಂದಿದೆ. ಬೇವಿನಹಳ್ಳಿ ಬಸ್‌ ನಿಲ್ದಾಣದ ಬಳಿ ಹಲವು ಜಾನಪದ ಕಲಾತಂಡಗಳು ಣಿಯುತ್ತಿದ್ದವು. ಇದನ್ನು ನೊಡಿದ ಡಿ.ಕೆ. ಶಿವಕುಮಾರ ಬಸ್‌ ಮೇಲಿಂದಲೇ ನೋಟಿನ ಕಂತೆಯನ್ನು ಬಿಡಿಸಿ ಕಲಾ ತಂಡಗಳತ್ತ ಎಸೆದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ಬಸ್‌ ಮೇಲಿಂದಲೇ ರೋಡ್‌ ಶೋ ಮೂಲಕ ಜನರತ್ತ ಕೈಬೀಸಿ ಮಾತನಾಡುತ್ತಾ ಸಾಗುತ್ತಿದ್ದ ವೇಳೆ ಡಿ.ಕೆ. ಶಿವಕುಮಾರ್‌ 500 ರೂ. ಮುಖಬೆಲೆಯ ಹಲವು ನೋಟುಗಳನ್ನು ಎರಚಿದ್ದಾರೆ ಎಂದು ಹೇಳಲಾಗಿದೆ. ಜಾನಪದ ಕಲಾವಿದರಿಗೆ ಈ ಹಣ ಎರಚಲಾಗಿದೆ ಎಂದು ಕಾಂಗ್ರೆಸ್‌ ನಾಯಕರು ಹೇಳುತ್ತಿದ್ದರೂ, ಆದರೆ, ಕಲಾತಂಡಗಳ ಮೇಲೆ ಹಣವನ್ನು ಬಸ್‌ ಮೇಲಿಂದ ಎರಚಿರವುದು ಈಗ ಚರ್ಚೆಗೆಗ ಕಾರಣವಾಗಿದೆ.
ಡಿ.ಕೆ. ಶಿವಕುಮಾರ ಅವರು ಮೇ ತಿಂಗಳ ಚುನಾವಣೆಯಲ್ಲಿ ಪಕ್ಷ ಬಹುಮತ ಪಡೆದರೆ ಮುಖ್ಯಮಂತ್ರಿ ಹುದ್ದೆಯ ಮಹತ್ವಾಕಾಂಕ್ಷಿಗಳಲ್ಲಿ ಒಬ್ಬರಾಗಿದ್ದಾರೆ.

ಪ್ರಮುಖ ಸುದ್ದಿ :-   ‘ಕಾಮಿಡಿ ಕಿಲಾಡಿಗಳು-3’ ವಿಜೇತ ರಾಕೇಶ ಪೂಜಾರಿ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement