ಸೀರೆ ಉಟ್ಟು ಫುಟ್ಬಾಲ್ ಪಂದ್ಯ ಆಡಿದ ಮಹಿಳೆಯರು ..: ವೀಕ್ಷಿಸಿ

ಮಹಿಳೆಯರು ಸೀರೆಯುಟ್ಟು ಫುಟ್ಬಾಲ್ ಆಡಿರುವ ವೀಡಿಯೋ ಸೊಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಮಧ್ಯ ಪ್ರದೇಶದ ಗ್ವಾಲಿಯರ್ ಮಹಾನಗರದ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯರ ಸಂಘದ ವತಿಯಿಂದ ಈ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ಕಾರ್ಯಕ್ರಮಕ್ಕೆ ‘ಗೋಲ್ ಇನ್ ಸಾರಿ’ (goal in saree) ಎಂದು ಹೆಸರಿಡಲಾಗಿತ್ತು. ಅಂದರೆ ಸೀರೆಯುಟ್ಟು ಫುಟ್ಬಾಲ್ (football) ಆಡುವುದು ಎಂದಾಗಿದೆ. ಸೀರೆಯುಟ್ಟು ಆಡುವುದು ಇಲ್ಲಿ ಕಡ್ಡಾಯವಾಗಿತ್ತು.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಬಣ್ಣಬಣ್ಣದ ಸೀರೆಯಲ್ಲಿ ಮಹಿಳೆಯರು ಫುಟ್ಬಾಲ್ ಆಡಿದ್ದಾರೆ. ಅವರು ಉತ್ಸಾಹದಿಂದ ಚೆಂಡನ್ನು ಒದೆಯುವುದನ್ನು ನೋಡಬಹುದು. ಸೀರೆಯುಟ್ಟು ಗೋಲು ಹೊಡೆಯುವ ಮಹಿಳೆಯರಿಗೆ ಸಭಿಕರು ಜೋರಾಗಿ ಚಪ್ಪಾಳೆ ತಟ್ಟಿದರು.
ಸದ್ಯ ಈ ಪಂದ್ಯಾವಳಿ ಕಾರ್ಯಕ್ರಮದ ದೃಶ್ಯವನ್ನು ಸೆರೆಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಲಾಗಿದೆ. ಸೀರೆಯುಟ್ಟು ಫುಟ್ಬಾಲ್ ಆಡಿದ ತಂಡಗಳಲ್ಲಿ 20 ರಿಂದ ವರ್ಷ 50 ರ ವರ್ಷ ವಯಸ್ಸಿನ ವರೆಗಿನ ಮಹಿಳೆಯರೂ ಇದ್ದರು. ಈ ಮಹಿಳೆಯರ ಎನರ್ಜಿ, ಆಡುವ ಉತ್ಸಾಹ ಅಚ್ಚರಿ ತರುವಂತಿದೆ.

ಪ್ರಮುಖ ಸುದ್ದಿ :-   ಶಿಂಧೆ ಬಣದ ಶಿವಸೇನೆ ಸೇರಿದ ಬಾಲಿವುಡ್‌ ನಟ ಗೋವಿಂದ : 14 ವರ್ಷಗಳ ವನವಾಸದ ನಂತರ ರಾಜಕೀಯಕ್ಕೆ

ಈ ವೀಡಿಯೊವನ್ನು ಬ್ರಜೇಶ ರಜಪೂತ್ ಎಂಬುವರು ತಮ್ಮ ಟ್ವಿಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವೈರಲ್ ವೀಡಿಯೊದ ಫುಟ್ಬಾಲ್‌ ಆಟವನ್ನು ಬೆಂಡ್ ಇಟ್ ಲೈಕ್ ಬೆಕಮ್ ಚಲನಚಿತ್ರದೊಂದಿಗೆ ಹೋಲಿಕೆ ಮಾಡಲಾಗುತ್ತಿದೆ, ಇದು ಸಾಂಪ್ರದಾಯಿಕ ಭಾರತೀಯ ಕುಟುಂಬದ ಅಸಮ್ಮತಿಯ ಹೊರತಾಗಿಯೂ ಫುಟ್‌ಬಾಲ್ ಆಡುವ ಕನಸು ಕಾಣುವ ಯುವತಿಯ ಕತೆಯನ್ನು ಒಳಗೊಂಡಿದೆ.

ಆದರೆ ಬೆಂಡ್ ಇಟ್ ಲೈಕ್ ಬೆಕಮ್ ಚಲನಚಿತ್ರಕ್ಕೂ ವೈರಲ್ ವೀಡಿಯೊಕ್ಕೂ ವ್ಯತ್ಯಾಸವೆಂದರೆ ಈ ವೀಡಿಯೊದಲ್ಲಿ ಮಹಿಳೆಯರು ಸೀರೆಯಲ್ಲಿ ಫುಟ್‌ಬಾಲ್ ಆಡುವಾಗ ಅವರು ಜನರ ಬೆಂಬಲ ಮತ್ತು ಪ್ರೋತ್ಸಾಹದೊಂದಿಗೆ ಅವರು ಆನಂದಿಸುತ್ತ ಆತ್ಮವಿಶ್ವಾಸದಿಂದ ಆಡುತ್ತಾರೆ.
ಮಹಿಳೆಯರ ಮೋಜಿನ ಆಟ ನೋಡಿದ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸೀರೆಯಲ್ಲಿ ಫುಟ್ಬಾಲ್‌ ಆಡುವುದು ಬಹಳ ಕಷ್ಟದಾಯಕ. ಆದರೆ ಈ ಮಹಿಳೆಯರು ಉತ್ಸಾಹದಿಂದ ಹಾಗೂ ಚುರುಕಾಗಿ ಓಡಾಡಿ ಆಡಿದ್ದಕ್ಕೆ ಅನೇಕರು ಪ್ರಶಂಸಿಸಿದ್ದಾರೆ.

ಪ್ರಮುಖ ಸುದ್ದಿ :-   ರೈಲು ನಿಲ್ದಾಣದಲ್ಲಿ ವ್ಯಕ್ತಿಯ ಸಾವಿನ ರಹಸ್ಯ ಭೇದಿಸಿದ ರೈಲು ಪ್ರಯಾಣಿಕನ ಮೊಬೈಲ್‌ ಸೆಲ್ಫಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement