ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಟುಶನ್ಗೆ ತೆರಳಿದ್ದ ಹತ್ತನೇ ತರಗತಿಯ ವಿದ್ಯಾರ್ಥಿಯೊಬ್ಬನ ಶಬವ ನದಿಯಲ್ಲಿ ಪತ್ತೆಯಾದ ಘಟನೆ ಕಡಬ ತಾಲೂಕಿನ ಕೋಡಿಂಬಾಳ ಸಮೀಪದ ಗುಂಡಿಮಜಲು ಗ್ರಾಮದಲ್ಲಿ ನಡೆದ ವರದಿಯಾಗಿದೆ
10ನೇ ತರಗತಿಯ ಪರೀಕ್ಷೆಗಳು ಶುಕ್ರವಾರದಿಂದ (ಮಾರ್ಚ್ 31) ಪ್ರಾರಂಭವಾಗಲಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪ್ರಾಥಮಿಕ ತನಿಖೆಯಲ್ಲಿ, 15 ವರ್ಷದ ಅದ್ವೈತ್ ಶೆಟ್ಟಿ ಪರೀಕ್ಷೆಯ ಒತ್ತಡದಿಂದಾಗಿ ನದಿಗೆ ಹಾರಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ..
ಪೊಲೀಸರ ಪ್ರಕಾರ, ಎಸ್ಎಸ್ಎಲ್ಸಿ (10ನೇ ತರಗತಿ) ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಯು ಬುಧವಾರ ಸಂಜೆ ನಾಪತ್ತೆಯಾಗಿದ್ದ. ಪೋಷಕರು ಮತ್ತು ಸಂಬಂಧಿಕರು ರಾತ್ರಿಯಿಡೀ ಹುಡುಕಾಡಿದ್ದಾರೆ. ಆದರೆ, ಬಾಲಕ ಸಿಕ್ಕಿರಲಿಲ್ಲ. ನಂತರ ಇಂದು, ಗುರುವಾರ ಬೆಳಗ್ಗೆ ನಾಕೂರು ಗಯಾ ಪ್ರದೇಶದ ಬಳಿ ಕುಮಾರಧಾರಾ ನದಿಯ ದಡದಲ್ಲಿ ವಿದ್ಯಾರ್ಥಿಯ ಶಾಲಾ ಬ್ಯಾಗ್ ಪತ್ತೆಯಾಗಿತ್ತು. ಹೀಗಾಗಿ ನದಿಯಲ್ಲಿ ಬಿದ್ದಿರುವ ಶಂಕೆ ವ್ಯಕ್ತವಾಗಿದ್ದರಿಂದ ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿ ನದಿಯಲ್ಲಿ ಹುಡುಕಾಟ ನಡೆಸಿದ ನಂತರ ಶವ ಪತ್ತೆಯಾಗಿದೆ. ನಂತರ ಅನ್ನು ನೀರಿನಿಂದ ಹೊರ ತೆಗೆಯಲಾಯಿತು.


ನಿಮ್ಮ ಕಾಮೆಂಟ್ ಬರೆಯಿರಿ