ನವದೆಹಲಿ: ಮೊಸರು ಪ್ಯಾಕೆಟ್‌ಗಳನ್ನು ಹಿಂದಿಯಲ್ಲಿ “ದಹಿ” ಎಂದು ಪ್ರಿಂಟ್ ಮಾಡುವಂತೆ ಭಾರತದ ಆಹಾರ ಸುರಕ್ಷತಾ ಪ್ರಾಧಿಕಾರದ ನಿರ್ದೇಶನವನ್ನು ಗುರುವಾರ ಬದಲಾಯಿಸಲಾಗಿದೆ. ಇದು ಹಿಂದಿಯೇತರರ ಮೇಲೆ ಹಿಂದಿಯನ್ನು ಹೇರುವ ಪ್ರಯತ್ನ ಎಂದು ದಕ್ಷಿಣ ರಾಜ್ಯಗಳಲ್ಲಿ ವಿರೋಧ ವ್ಯಕತವಾದ ಬೆನ್ನಲ್ಲೇ ನಿರ್ದೇಶನವನ್ನು ಹಿಂಪಡೆಯಲಾಗಿದೆ. ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರವು ಇಂಗ್ಲಿಷ್‌ನ ಕರ್ಡ್ ಜೊತೆಗೆ ದಹಿ, ಮೊಸರು, ತಯಿರ್ ಎಂದು ಬರೆದುಕೊಳ್ಳಿ ಎಂದು ಹೇಳಿದೆ.
ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ತಮಿಳುನಾಡಿನ ಹಾಲು ಉತ್ಪಾದಕರ ಒಕ್ಕೂಟಕ್ಕೆ ನಿರ್ದೇಶನ ನೀಡಿದ್ದು, ತಮ್ಮ ಮೊಸರು ಪ್ಯಾಕೆಟ್‌ಗಳ ಲೇಬಲ್‌ಗಳನ್ನು ಇಂಗ್ಲಿಷ್‌ನಲ್ಲಿ “ಕರ್ಡ್” ಮತ್ತು ತಮಿಳಿನಲ್ಲಿ “ತಾಯಿರ್” ನಿಂದ “ದಹಿ” ಎಂದು ಬದಲಾಯಿಸುವಂತೆ ಸೂಚಿಸಿತ್ತು. “ಹಿಂದಿಯಲ್ಲಿ. ಈ ನಿರ್ದೇಶನವು ಬೆಣ್ಣೆ ಮತ್ತು ಚೀಸ್‌ನಂತಹ ಇತರ ಡೈರಿ ಉತ್ಪನ್ನಗಳಿಗೂ ಅನ್ವಯಿಸುತ್ತದೆ. ಹಿಂದೆ ಹೇರಿಕೆ ವಿವಾದವು ತೀವ್ರಗೊಳ್ಳುತ್ತಿರುವಂತೆ ಎಫ್‌ಎಸ್‌ಎಸ್‌ಎಐ ತಾನು ನಿರ್ದೇಶನವನ್ನು ಬದಲಾಯಿಸುತ್ತಿರುವುದಾಗಿ ಹೇಳಿದೆ.
ಮೊಸರಿನ ಪ್ಯಾಕೆಟ್‌ಗಳ ಮೇಲೆ ದಹಿ ಎಂದು ಪ್ರಿಂಟ್ ಮಾಡುವಂತೆ ನೀಡಿದ ನಿರ್ದೇನಕ್ಕೆ ತಮಿಳುನಾಡು ಮತ್ತು ಕರ್ನಾಟಕದ ಹಾಲು ಉತ್ಪಾದಕರಿಂದ ತೀವ್ರ ವಿರೋಧ ವ್ಯಕ್ತವಾಯಿತು. ಅವರು ತಮ್ಮ ಪ್ರಾದೇಶಿಕ ಭಾಷೆಗಳನ್ನು ಬಳಸುವುದನ್ನು ಮುಂದುವರಿಸಲು ಕೋರಿ ಅವರು ಎಫ್‌ಎಸ್‌ಎಸ್‌ಎಐ (FSSAI)ಗೆ ಪತ್ರ ಬರೆದಿದ್ದರು. ಮೊಸರು ಎಂಬುದು ಯಾವುದೇ ಭಾಷೆಯಲ್ಲಿ ಬಳಸಬಹುದಾದ ಸಾಮಾನ್ಯ ಪದವಾಗಿದೆ ಮತ್ತು “ದಹಿ” ಎಂಬುದು ಮೊಸರು ರುಚಿ ಮತ್ತು ವಿನ್ಯಾಸದಲ್ಲಿ ಭಿನ್ನವಾಗಿರುವ ಒಂದು ನಿರ್ದಿಷ್ಟ ಉತ್ಪನ್ನವಾಗಿದೆ ಎಂದು ಅವರು ಉಲ್ಲೇಖಿಸಿದ್ದರು.
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ನಿರ್ದೇಶನವನ್ನು ಹಿಂದಿ ಹೇರಿಕೆಯ ಪ್ರಕರಣ ಎಂದು ಟೀಕಿಸಿದರು . ಟ್ವೀಟ್‌ನಲ್ಲಿ ಅವರು “ ಹಿಂದಿ ಹೇರಿಕೆಯ ನಿರ್ಲಜ್ಜ ಒತ್ತಾಯಗಳು ಹಿಂದಿಯಲ್ಲಿ ಮೊಸರು ಪ್ಯಾಕೆಟ್‌ಗೂ ಹಣೆಪಟ್ಟಿ ಕಟ್ಟುವಂತೆ ನಿರ್ದೇಶಿಸುವ ಮಟ್ಟಕ್ಕೆ ಬಂದಿವೆ, ನಮ್ಮದೇ ರಾಜ್ಯಗಳಲ್ಲಿ ತಮಿಳು ಮತ್ತು ಕನ್ನಡವನ್ನು ಹಿಮ್ಮೆಟ್ಟಿಸುತ್ತದೆ. ಇದಕ್ಕೆ ಹೊಣೆ ಹೊತ್ತವರನ್ನು ದಕ್ಷಿಣದಿಂದ ಶಾಶ್ವತವಾಗಿ ಹೊರಹಾಕಲಾಗುತ್ತದೆ ಎಂದು ಎಚ್ಚರಿಸಿದ್ದರು.
ಬಿಜೆಪಿಯ ತಮಿಳುನಾಡು ಮುಖ್ಯಸ್ಥ ಕೆ ಅಣ್ಣಾಮಲೈ ಅವರು ಈ ನಿರ್ದೇಶನ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪ್ರಾದೇಶಿಕ ಭಾಷೆಗಳಿಗೆ ಉತ್ತೇಜನ ನೀಡುವ ನೀತಿಗೆ ಅನುಗುಣವಾಗಿಲ್ಲ ಎಂದು ಹೇಳಿ ನಿರ್ದೇಶನವನ್ನು ಹಿಂಪಡೆಯಲು ಒತ್ತಾಯಿಸಿದ್ದರು. ಕರ್ನಾಟಕದಲ್ಲಿ ಪ್ರತಿಪಕ್ಷಗಳಿಂದ ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಎಚ್.ಡಿ.ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನಾಯಕರು ಹಿಂದಿ ಹೇರಿಕೆ ಎಂದು ಟೀಕಿಸಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ