ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ದೋಷಾರೋಪಣೆ ; ಮುಂದಿನ ವಾರ ಶರಣಾಗುವ ಸಾಧ್ಯತೆ

ನ್ಯೂಯಾರ್ಕ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರದ ಆರಂಭದಲ್ಲಿ ಮ್ಯಾನ್‌ಹ್ಯಾಟನ್ ಡಿಸ್ಟ್ರಿಕ್ಟ್ ಅಟಾರ್ನಿ (ಡಿಎ) ಕಚೇರಿಗೆ ಶರಣಾಗುವ ಸಾಧ್ಯತೆಯಿದೆ ಎಂದು ಅವರ ವಕೀಲ ಜೋ ಟಕೋಪಿನಾ ಎನ್‌ಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ.
ಅಮೆರಿಕದ ಮಾಜಿ ಅಧ್ಯಕ್ಷರ ಕಾನೂನು ತಂಡವು ಪ್ರಾಸಿಕ್ಯೂಟರ್‌ಗಳೊಂದಿಗೆ ಸಂಪರ್ಕದಲ್ಲಿದೆ ಮತ್ತು ಅವರ ವಿಚಾರಣೆಯು ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ ಎಂದು ಪರಿಸ್ಥಿತಿಯ ಬಗ್ಗೆ ತಿಳಿದಿರುವ ಬಹು ಮೂಲಗಳು ತಿಳಿಸಿವೆ.
2016 ರ ಅಧ್ಯಕ್ಷೀಯ ಚುನಾವಣೆಗೆ ಮುಂಚಿತವಾಗಿ ಪೋರ್ನ್‌ಸ್ಟಾರ್ ಸ್ಟಾರ್ಮಿ ಡೇನಿಯಲ್ಸ್‌ಗೆ ಪಾವತಿಸಿದ ಹಣದ ಬಗ್ಗೆ ನ್ಯೂಯಾರ್ಕ್ ಗ್ರ್ಯಾಂಡ್ ಜ್ಯೂರಿ ಗುರುವಾರ ಡೊನಾಲ್ಡ್ ಟ್ರಂಪ್ ಅವರ ವರುದ್ಧ ದೋಷಾರೋಪಣೆ ಮಾಡಿದ್ದಾರೆ.
ಆದಾಗ್ಯೂ, ಈ ಪ್ರಕರಣದಲ್ಲಿ ಅವರು ದೋಷಿ ಎಂದು ಸಾಬೀತಾದರೂ, 2024 ರ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್ ಅವರ ಪ್ರಯತ್ನವನ್ನು ಅನರ್ಹಗೊಳಿಸಲಾಗುವುದಿಲ್ಲ. ಟ್ರಂಪ್ ಕಳೆದ ವರ್ಷ ನವೆಂಬರ್‌ನಲ್ಲಿ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ್ದರು.

ಟ್ರಂಪ್ ಅವರ ಶರಣಾಗತಿಗೆ ವ್ಯವಸ್ಥೆ ಮಾಡಲು ಅವರು ಈಗಾಗಲೇ ಅವರ ವಕೀಲರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಡಿಎ ವಕ್ತಾರರು ತಿಳಿಸಿದ್ದಾರೆ. “ಸುಪ್ರೀಂ ಕೋರ್ಟ್ ದೋಷಾರೋಪಣೆಯೊಂದರ ವಿಚಾರಣೆಗಾಗಿ ಮ್ಯಾನ್‌ಹ್ಯಾಟನ್ ಡಿಎ ಕಚೇರಿಗೆ ಶರಣಾಗುವುದರ ವಿಚಾರ ನಾವು ಟ್ರಂಪ್ ಅವರ ವಕೀಲರನ್ನು ಸಂಪರ್ಕಿಸಿದ್ದೇವೆ, ಅದು ಸೀಲ್‌ನಲ್ಲಿ ಉಳಿದಿದೆ” ಎಂದು ವಕ್ತಾರರನ್ನು ಉಲ್ಲೇಖಿಸಿ ಎನ್‌ಬಿಸಿ ನ್ಯೂಸ್‌ ವರದಿ ಮಾಡಿದೆ.
ಸುರಕ್ಷಿತ ಶರಣಾಗತಿಯನ್ನು ಖಚಿತಪಡಿಸಿಕೊಳ್ಳಲು, ನ್ಯೂಯಾರ್ಕ್‌ನಲ್ಲಿರುವ ಸಿಕ್ರೆಟ್‌ ಸರ್ವೀಸ್‌ ಅಧಿಕಾರಿಗಳು ಟ್ರಂಪ್ ಅವರ ಸಾರಿಗೆ ಮತ್ತು ಭದ್ರತಾ ಅಗತ್ಯಗಳಿಗಾಗಿ ಅವರ ಕಾನೂನು ತಂಡದೊಂದಿಗೆ ಸಂಯೋಜಿಸಲಿದ್ದಾರೆ.
2016 ರ ಅಧ್ಯಕ್ಷೀಯ ಚುನಾವಣೆಗೆ ಮುನ್ನ ಅಶ್ಲೀಲ ತಾರೆ ಸ್ಟಾರ್ಮಿ ಡೇನಿಯಲ್ಸ್‌ಗೆ ಟ್ರಂಪ್‌ ಅವರ ಪರ್ಸನಲ್‌ ವಕೀಲರು ಹಣ ಪಾವತಿಸಿದ ಬಗ್ಗೆ ವರ್ಷಗಳ ಸುದೀರ್ಘ ತನಿಖೆಯ ನಂತರ ಟ್ರಂಪ್ ವಿರುದ್ಧ ಆರೋಪ ಹೊರಬಿದ್ದಿದೆ. ಸ್ಟಾರ್ಮಿ ಡೇನಿಯಲ್ಸ್‌ಗೆ $1,30,000 ಪಾವತಿ ಮಾಡಿದ ಬಗ್ಗೆ ತನಿಖೆ ಮಾಡಿದ ನಂತರ ಅವರನ್ನು ದೋಷಾರೋಪಣೆ ಮಾಡಲು ಗ್ರ್ಯಾಂಡ್ ಜ್ಯೂರಿ ವೋಟ್‌ ಮಾಡಿದ್ದಾರೆ.
ಟ್ರಂಪ್ ಅವರು ತಮ್ಮ ವಿರುದ್ಧದ ತನಿಖೆಯನ್ನು “ರಾಜಕೀಯ ಕಿರುಕುಳ” ಎಂದು ಕರೆದಿದ್ದಾರೆ ಮತ್ತು ಅವರು ತಾವು “ಸಂಪೂರ್ಣವಾಗಿ ನಿರಪರಾಧಿ” ಎಂದು ಹೇಳಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement