ಟೋಲ್‌ ಸಂಗ್ರಹ ಆರಂಭವಾದ 17 ದಿನದಲ್ಲೇ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ಹೈವೇ ಟೋಲ್ ದರ ಶೇಕಡಾ 22ರಷ್ಟು ಹೆಚ್ಚಳ…!

ಬೆಂಗಳೂರು :ಮಾರ್ಚ್‌ 14ರಿಂದ ಆರಂಭವಾಗಿದ್ದ ಮೈಸೂರು – ಬೆಂಗಳೂರು ಎಕ್ಸ್‌ಪ್ರೆಸ್ ಹೈವೇ ಟೋಲ್‌ ಶುಲ್ಕವನ್ನು ಮತ್ತೆ ಹೆಚ್ಚಳ ಮಾಡಲಾಗಿದೆ. ಟೋಲ್‌ ದರ ಹೆಚ್ಚಳಕ್ಕೆ ವಿರೋಧ ವ್ಯಕ್ತವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಟೋಲ್‌ ದರವನ್ನು ಶೇಕಡಾ 22ರಷ್ಟು ಹೆಚ್ಚಳ ಮಾಡಿದ್ದು ಏಪ್ರಿಲ್ 1ರಿಂದ ಜಾರಿಯಾಗಲಿದೆ.
ಟೋಲ್ ಹೊಸ ದರದ ವಿವರಗಳು
ಕಾರು/ವ್ಯಾನ್/ಜೀಪ್ ಗಳ ಸಂಚಾರ:
ಏಕಮುಖದ ಸಂಚಾರಕ್ಕೆ ಶುಲ್ಕವನ್ನು 135 ರೂ.ದಿಂದ 165 ರೂ.ಗೆ ಹೆಚ್ಚಳ.-ಶುಲ್ಕವನ್ನು 30 ರೂ. ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರಕ್ಕೆ ಶುಲ್ಕವನ್ನು 205 ರೂ.ಗಳಿಂದ 250 ರೂ.ಗಳಿಗೆ ಹೆಚ್ಚಿಳ-ಶುಲ್ಕವನ್ನು 45 ರೂ. ಹೆಚ್ಚಿಸಲಾಗಿದೆ.
ಲಘು ವಾಹನಗಳು/ಮಿನಿ ಬಸ್ ಸಂಚಾರ:
ಏಕಮುಖ ಸಂಚಾರಕ್ಕೆ ಶುಲ್ಕ 220 ರೂ.ಗಳಿಂದ 270 ರೂ.ಗಳಿಗೆ ಹೆಚ್ಚಳ-ಅಂದರೆ ಶುಲ್ಕವನ್ನು 50 ರೂ. ಹೆಚ್ಚಿಸಲಾಗಿದೆ. ದ್ವಿಮುಖ ಸಂಚಾರಕ್ಕೆ ಇದ್ದ ಶುಲ್ಕ 330 ರೂ.ಗಳಿಂದ 405 ರೂ.ಗಳಿಗೆ ಹೆಚ್ಚಳ- ಶುಲ್ಕವನ್ನು 75 ರೂ. ಹೆಚ್ಚಿಸಲಾಗಿದೆ.
ಟ್ರಕ್/ ಬಸ್/ಎರಡು ಆಕ್ಸೆಲ್ ವಾಹನಗಳು:
ಏಕಮುಖ ಸಂಚಾರಕ್ಕೆ ಇದ್ದ ಶುಲ್ಕ 460 ರೂ.ಗಳಿಂದ 565 ರೂ.ಗಳಿಗೆ ಹೆಚ್ಚಳ-ಶುಲ್ಕವನ್ನು 165 ರೂ. ಹೆಚ್ಚಳ ಮಾಡಲಾಗಿದೆ. ದ್ವಿಮುಖ ಸಂಚಾರಕ್ಕೆ ಶುಲ್ಕ 690 ರೂ.ಗಳಿಂದ 850 ರೂ. ಗಳಿಗೆ ಹೆಚ್ಚಳ-ಶುಲ್ಕವನ್ನು 160 ರೂ.ಗಳನ್ನು ಹೆಚ್ಚಿಸಲಾಗಿದೆ.
ಮೂರರಿಂದ ಆರು ಆಕ್ಸೆಲ್ ಗಳಿರುವ ವಾಣಿಜ್ಯ ವಾಹನಗಳು:
ಏಕಮುಖ ಸಂಚಾರಕ್ಕೆ ಇದ್ದ ಶುಲ್ಕ 500 ರೂ.ಗಳಿಂದ 615 ರೂ.ಗಳಿಗೆ ಹೆಚ್ಚಳ- ಶುಲ್ಕವನ್ನು 115 ರೂ.ಗಳನ್ನು ಹೆಚ್ಚಳ ಮಾಡಲಾಗಿದೆ. ಇದೇ ವಾಹನಗಳ ದ್ವಿಮುಖ ಸಂಚಾರಕ್ಕೆ ಇದ್ದ ಶುಲ್ಕ 750 ರೂ.ಗಳಿಂದ 925 ರೂ.ಗಳಿಗೆ ಹೆಚ್ಚಳ- ಶುಲ್ಕವನ್ನು 175 ರೂ.ಗಳಿಗೆ ಹೆಚ್ಚಿಸಲಾಗಿದೆ.
ಭಾರೀ ಕಟ್ಟಡ ನಿರ್ಮಾಣ ವಾಹಗನಳು/ಅರ್ಥ್ ಮೂವರ್ಸ್‌/4-6 ಆಕ್ಸೆಲ್ ವಾಹನಗಳು
ಏಕಮುಖ ಸಂಚಾರದ ಶುಲ್ಕ 720 ರೂ.ಗಳಿಂದ 885 ರೂ.ಗಳಿಗೆ ಹೆಚ್ಚಳ- ಶುಲ್ಕವನ್ನು 165 ರೂ. ಹೆಚ್ಚಳ ಮಾಡಲಾಗಿದೆ. ದ್ವಿಮುಖ ಸಂಚಾರದ ಶುಲ್ಕ 1080 ರೂ.ಗಳಿಂದ 1,330 ರೂ.ಗಳಿಗೆ ಹೆಚ್ಚಳ- ಶುಲ್ಕವನ್ನು 250 ರೂ. ಹೆಚ್ಚಿಸಲಾಗಿದೆ.
ಏಳು ಅಥವಾ ಅದಕ್ಕಿಂತ ಆ್ಯಕೆಲ್ಸ್ ಇರುವಂಥ ವಾಹನಗಳು
ಏಕಮುಖ ಸಂಚಾರ ಶುಲ್ಕ 880 ರೂ.ಗಳಿಂದ 1,080 ರೂ.ಗಳಿಗೆ ಹೆಚ್ಚಳ. – ಶುಲ್ಕವನ್ನು 200 ರೂ. ಹೆಚ್ಚಳ ಮಾಡಲಾಗಿದೆ. ದ್ವಿಮುಖ ಸಂಚಾರಕ್ಕೆ ಇದ್ದ ಶುಲ್ಕ 1315 ರೂ.ಗಳಿಂದ 1,620 ರೂ.ಗಳಿಗೆ ಹೆಚ್ಚಳ- ಶುಲ್ಕವನ್ನು 305 ರೂ. ಹೆಚ್ಚಿಸಲಾಗಿದೆ.

ಪ್ರಮುಖ ಸುದ್ದಿ :-   ಶ್ರೀರಂಗಪಟ್ಟಣ: ಐಸ್‌ ಕ್ರೀಂ ತಿಂದ ಬಳಿಕ ಅವಳಿ ಮಕ್ಕಳ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement