ನವದೆಹಲಿ: ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಮೊಘಲ್ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಅಧ್ಯಾಯಗಳನ್ನು ತೆಗೆದುಹಾಕುವ ಮೂಲಕ 12 ನೇ ತರಗತಿಯ ಇತಿಹಾಸ ಪಠ್ಯಕ್ರಮವನ್ನು ಪರಿಷ್ಕರಿಸಿದೆ. ಪಠ್ಯಕ್ರಮದಲ್ಲಿನ ಬದಲಾವಣೆಗಳು ಸಿಬಿಎಸ್‌ಇ (CBSE), ಉತ್ತರ ಪ್ರದೇಶ ಮತ್ತು ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಅನುಸರಿಸುವ ಇತರ ರಾಜ್ಯ ಮಂಡಳಿಗಳು ಸೇರಿದಂತೆ ಎಲ್ಲಾ ಬೋರ್ಡ್‌ಗಳಿಗೆ ಅನ್ವಯಿಸುತ್ತವೆ. ಹೊಸ ಪಠ್ಯಕ್ರಮವು 2023-24ರ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ.
ನವೀಕರಿಸಿದ ಪಠ್ಯಕ್ರಮದ ಪ್ರಕಾರ, ಎನ್‌ಸಿಇಆರ್‌ಟಿ ‘ರಾಜರು ಮತ್ತು ಕ್ರಾನಿಕಲ್ಸ್‌ಗೆ ಸಂಬಂಧಿಸಿದ ಅಧ್ಯಾಯಗಳು ಮತ್ತು ಮೊಘಲ್ ಕೋರ್ಟ್ಸ್ (C. 16 ಮತ್ತು 17 ನೇ ಶತಮಾನಗಳು)’ ಇತಿಹಾಸ ಪುಸ್ತಕ ‘ಥೀಮ್ಸ್ ಆಫ್ ಇಂಡಿಯನ್ ಹಿಸ್ಟರಿ-ಭಾಗ II’ ವಿಷಯಗಳನ್ನು ಎನ್‌ಸಿಇಆರ್‌ಟಿ ತೆಗದುಹಾಕಿದೆ.
ಎನ್‌ಸಿಇಆರ್‌ಟಿಯು 12ನೇ ತರಗತಿಯ ಸಿವಿಕ್ಸ್ ಪುಸ್ತಕ (Civics book)ವನ್ನು ನವೀಕರಿಸಿದೆ, ‘ವಿಶ್ವ ರಾಜಕೀಯದಲ್ಲಿ ಅಮೆರಿಕದ ಪ್ರಾಬಲ್ಯ’ ಮತ್ತು ‘ಶೀತಲ ಸಮರದ ಯುಗ’ದಂತಹ ಅಧ್ಯಾಯಗಳನ್ನು ತೆಗೆದುಹಾಕಿದೆ. ಹೆಚ್ಚುವರಿಯಾಗಿ, 12 ನೇ ತರಗತಿಯ ‘ಸ್ವಾತಂತ್ರ್ಯದ ನಂತರ ಭಾರತದಲ್ಲಿ ರಾಜಕೀಯ’ ಪಠ್ಯಪುಸ್ತಕವು ಇನ್ನು ಮುಂದೆ ‘ಜನಪ್ರಿಯ ಚಳುವಳಿಗಳ ಉದಯ’ ಮತ್ತು ‘ಒಂದು ಪಕ್ಷದ ಪ್ರಾಬಲ್ಯದ ಯುಗ’ ಕುರಿತು ಅಧ್ಯಾಯಗಳನ್ನು ಒಳಗೊಂಡಿರುವುದಿಲ್ಲ.
ಎನ್‌ಸಿಇಆರ್‌ಟಿ ನವೀಕರಿಸಿದ ಪಠ್ಯಕ್ರಮದ ಪ್ರಕಾರ 11 ನೇ ತರಗತಿಯ ಪಠ್ಯಪುಸ್ತಕ ‘ವಿಶ್ವ ಇತಿಹಾಸದಲ್ಲಿ ಥೀಮ್‌ಗಳು (Themes of Indian History-Part II)’, ‘ಸೆಂಟ್ರಲ್ ಇಸ್ಲಾಮಿಕ್ ಲ್ಯಾಂಡ್ಸ್,’ ಕನ್ಫ್ರಂಟೇಶನ್ ಆಫ್ ಕಲ್ಚರ್ಸ್ (‘Confrontation of cultures)’ ಮತ್ತು ‘ದಿ ಇಂಡಸ್ಟ್ರಿಯಲ್ ರೆವಲ್ಯೂಷನ್’ ನಂತಹ ಅಧ್ಯಾಯಗಳನ್ನು ತೆಗೆದುಹಾಕಿದೆ.
10ನೇ ತರಗತಿಗೆ ನವೀಕರಿಸಿದ ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವು ‘ಪ್ರಜಾಪ್ರಭುತ್ವ ರಾಜಕೀಯ-II’ ಪಠ್ಯಪುಸ್ತಕದಿಂದ ‘ಪ್ರಜಾಪ್ರಭುತ್ವ ಮತ್ತು ವೈವಿಧ್ಯತೆ,’ ‘ಜನಪ್ರಿಯ ಹೋರಾಟಗಳು ಮತ್ತು ಚಳುವಳಿ,’ ಮತ್ತು ‘ಪ್ರಜಾಪ್ರಭುತ್ವಕ್ಕೆ ಸವಾಲುಗಳು’ ಅಧ್ಯಾಯಗಳನ್ನು ತೆಗೆದುಹಾಕಿದೆ.
ಬದಲಾವಣೆಗಳನ್ನು ಜಾರಿಗೊಳಿಸುವ ಉತ್ತರ ಪ್ರದೇಶ
ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಅನುಸರಿಸುವ 10, 11 ಮತ್ತು 12 ನೇ ತರಗತಿಗಳ ಪಠ್ಯಕ್ರಮವನ್ನು ಇತ್ತೀಚಿನ ಬದಲಾವಣೆಗಳನ್ನು ಪ್ರತಿಬಿಂಬಿಸಲು ನವೀಕರಿಸಲಾಗುವುದು ಎಂದು ಉತ್ತರ ಪ್ರದೇಶ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಯುಪಿ ಬೋರ್ಡ್) ಹೇಳಿದೆ.
ಉತ್ತರ ಪ್ರದೇಶ ಮಂಡಳಿ ಕಾರ್ಯದರ್ಶಿ ದಿವ್ಯಕಾಂತ ಶುಕ್ಲಾ ಅವರ ಪ್ರಕಾರ, 10, 11 ಮತ್ತು 12 ನೇ ತರಗತಿಗಳಿಗೆ ತರ್ಕಬದ್ಧ ಪಠ್ಯಕ್ರಮವನ್ನು ದೃಢೀಕರಿಸಲಾಗಿದೆ ಮತ್ತು ನವೀಕರಿಸಿದ ಯುಪಿ ಬೋರ್ಡ್ ಪಠ್ಯಕ್ರಮ 2023-24 ಅನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತದೆ.
ಎನ್‌ಸಿಇಆರ್‌ಟಿ (NCERT) ಪಠ್ಯಕ್ರಮವನ್ನು ಅನುಸರಿಸುವ ಎಲ್ಲಾ ಬೋರ್ಡ್‌ಗಳ ಪಠ್ಯಕ್ರಮವನ್ನು ಇತ್ತೀಚಿನ ಬದಲಾವಣೆಗಳೊಂದಿಗೆ ಹೊಂದಿಸಲು ಪರಿಷ್ಕರಿಸಲಾಗುತ್ತದೆ. ತರ್ಕಬದ್ಧ ಪಠ್ಯಕ್ರಮದ ಪುಸ್ತಕಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿವೆ.
ನಿಮ್ಮ ಕಾಮೆಂಟ್ ಬರೆಯಿರಿ