ಕರ್ನಾಟಕ ವಿಧಾನಸಭೆ ಚುನಾವಣೆ : ಕಾಂಗ್ರೆಸ್​ ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಕಾಂಗ್ರೆಸ್​ ಅಭ್ಯರ್ಥಿಗಳ ಎರಡನೇ ಪಟ್ಟಿ ಪ್ರಕಟವಾಗಿದೆ. ಇಂದು(ಏಪ್ರಿಲ್ 6) ಎಐಸಿಸಿ 42 ಕ್ಷೇತ್ರಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ್ದು, ವಲಸಿಗರಿಗೆ ಕಾಂಗ್ರೆಸ್ ಹೈಕಮಾಂಡ್​ ಮಣೆ ಹಾಕಿದೆ. ಆದರೆ ಕೋಲಾರ ಟಿಕೆಟ್ ಯಾರಿಗೆ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ.
ಜೆಡಿಎಸ್​ ತೊರೆದು ಕಾಂಗ್ರೆಸ್​ ಸೇರ್ಪಡೆಯಾದ್ದ ಮಾಜಿ ಶಾಸಕ ವೈ.ಎಸ್​.ವಿ.ದತ್ತಾ ಅವರಿಗೆ ಕೊಕ್ ನೀಡಲಾಗಿದೆ. ದತ್ತಾ ಅವರ ಬದಲಿಗೆ ಆನಂದ್ ಕೆ.ಎಸ್ ಅವರಿಗೆ ಟಿಕೆಟ್​ ನೀಡಲಾಗಿದೆ. ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದ ಕೂಡ್ಲಿಗಿ ಶಾಸಕರಾಗಿದ್ದ ಎನ್‌.ವೈ.ಗೋಪಾಲಕೃಷ್ಣ ಅವರಿಗೆ ಮೊಣಕಾಲ್ಮೂರು ಕ್ಷೇತ್ರದ ಟಿಕೆಟ್​ ನೀಡಲಾಗಿದೆ.
ಕಳೆದ ಮಾರ್ಚ್​ 25ರಂದು ಮೊದಲ ಹಂತದಲ್ಲಿ 124 ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿತ್ತು. ಬಾಕಿ ಇದ್ದ 100 ಕ್ಷೇತ್ರಗಳ ಪೈಕಿ 2ನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು ಇನ್ನು 52 ಅಭ್ಯರ್ಥಿಗಳ ಪಟ್ಟಿ ಬಾಕಿ ಉಳಿಸಿಕೊಂಡಿದೆ.
42 ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ
ನಿಪ್ಪಾಣಿ: ಕಾಕಾಸಾಹೇಬ್ ಪಾಟೀಲ್
ಗೋಕಾಕ: ಮಹಾಂತೇಶ್ ಕಡಾಡಿ
ಕಿತ್ತೂರು: ಬಾಬಾಸಾಹೇಬ್ ಡಿ ಪಾಟೀಲ
ಸವದತ್ತಿ: ವಿಶ್ವಾಸ ವಸಂತ ವೈದ್ಯ
ಮುಧೋಳ: ಆರ್ ಬಿ ತಿಮ್ಮಾಪುರ
ಬೀಳಗಿ: ಜಿಟಿ ಪಾಟೀಲ್
ಬಾದಾಮಿ: ಭೀಮಸೇನ ಚಿಮ್ಮನಕಟ್ಟಿ
ಬಾಗಲಕೋಟೆ: ಹುಲ್ಲಪ್ಪ ಮೇಟಿ
ವಿಜಯಪುರ ನಗರ: ಅಬ್ದುಲ್ ಹಮೀದ್
ನಾಗಾಠಾಣಾ: ವಿಠಲ್ ಕಟಕ್ದೊಂಡ
ಅಫಜಲ್ಪುರ: ಎಂ.ವೈ. ಪಾಟೀಲ
ಯಾದಗಿರಿ: ಚನ್ನಾರೆಡ್ಡಿ ಪಾಟೀಲ
ಗುರುಮಿಠಕಲ್: ಬಾಬುರಾವ್ ಚಿಂಚನಸೂರು
ಕಲ್ಬುರ್ಗಿ ದಕ್ಷಿಣ: ಅಲ್ಲಮಪ್ರಭು ಪಾಟೀಲ
ಬಸವಕಲ್ಯಾಣ: ವಿಜಯ ಧರಂ ಸಿಂಗ್
ಗಂಗಾವತಿ: ಇಕ್ಬಾಲ್ ಅನ್ಸಾರಿ
ನರಗುಂದ: ಬಿ.ಆರ್. ಯಾವಗಲ್
ಧಾರವಾಡ: ವಿನಯ ಕುಲಕರ್ಣಿ
ಕಲಘಟಗಿ: ಸಂತೋಷ ಲಾಡ್
ಶಿರಸಿ: ಭೀಮಣ್ಣ ನಾಯಕ್
ಯಲ್ಲಾಪುರ: ವಿ.ಎಸ್. ಪಾಟೀಲ್
ಕೂಡ್ಲಿಗಿ: ಡಾ ಶ್ರೀನಿವಾಸ್
ಮೊಳಕಾಲ್ಮೂರು: ಎನ್​.ವೈ. ಗೋಪಾಲಕೃಷ್ಣ
ಚಿತ್ರದುರ್ಗ: ಕೆ ಸಿ ವೀರೇಂದ್ರ
ಹೊಳಲ್ಕೆರೆ: ಆಂಜನೇಯ ಎಚ್.
ಚನ್ನಗಿರಿ: ಬಸವರಾಜ ಶಿವಗಂಗಾ
ತೀರ್ಥಹಳ್ಳಿ : ಕಿಮ್ಮನೆ ರತ್ನಾಕರ್
ಉಡುಪಿ: ಪ್ರಸಾದರಾಜ ಕಾಂಚನ್
ಕಡೂರು: ಆನಂದ ಕೆ.ಎಸ್.
ತುಮಕೂರು ನಗರ: ಇಕ್ಬಾಲ್ ಅಹ್ಮದ್
ಗುಬ್ಬಿ: ಎಸ್.ಆರ್. ಶ್ರೀನಿವಾಸ್
ಯಲಹಂಕ: ಕೇಶವ ರಾಜಣ್ಣ
ಯಶವಂತಪುರ: ಎಸ್ ಬಾಲರಾಜ ಗೌಡ
ಮಹಾಲಕ್ಷ್ಮಿ ಲೇಔಟ್: ಕೇಶವ ಮೂರ್ತಿ
ಪದ್ಮನಾಭನಗರ: ರಘುನಾಥ ನಾಯ್ಡು
ಮೇಲುಕೋಟೆ: ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ
ಮಂಡ್ಯ: ಪಿ ರವಿಕುಮಾರ
ಕೆಆರ್ ಪೇಟೆ: ಬಿಎಲ್ ದೇವರಾಜ್
ಬೇಲೂರು : ಬಿ ಶಿವರಾಂ

ಪ್ರಮುಖ ಸುದ್ದಿ :-   ಕುಮಟಾ : ಬಾಡದಲ್ಲಿ ಚಿರತೆ ದಾಳಿಗೆ ಇಬ್ಬರಿಗೆ ಗಾಯ ; ಮನೆಯೊಳಗೆ ನುಗ್ಗಿ ಅವಿತುಕೊಂಡ ಚಿರತೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement