ಮೊಬೈಲ್‌ ಹಿಡಿದು ಪರೀಕ್ಷೆ ಹಾಲ್‌ ಪ್ರವೇಶಿಸಿದ ಪೊಲೀಸ್‌ ಆಯುಕ್ತರನ್ನೇ ತಡೆದ ಮಹಿಳಾ ಕಾನ್ಸ್‌ಟೇಬಲ್‌ : ಕರ್ತೃತ್ವ ಶಕ್ತಿಗೆ ಸಿಕ್ತು ಬಹುಮಾನ

ಹೈದರಾಬಾದ್: ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ಫೋನ್ ಹಿಡಿದು ಬರದಂತೆ ತಡೆದ ಮಹಿಳಾ ಪೇದೆಯೊಬ್ಬರಿಗೆ ರಾಚಕೊಂಡ ಪೊಲೀಸ್ ಆಯುಕ್ತ ಡಿಎಸ್ ಚೌಹಾಣ್ ಬಹುಮಾನ ನೀಡಿದ್ದಾರೆ.
ಗುರುವಾರ ನಗರದ ಎಲ್‌ಬಿ ನಗರದಲ್ಲಿರುವ ಎಸ್‌ಎಸ್‌ಸಿ ಪರೀಕ್ಷಾ ಕೇಂದ್ರವನ್ನು ಪರಿಶೀಲಿಸಲು ಪೊಲೀಸ್ ಆಯುಕ್ತರು ಅಲ್ಲಿಗೆ ತೆರಳಿದ್ದರು.
ಎಲ್ ಬಿ ನಗರ ಪೊಲೀಸ್ ಠಾಣೆಯಲ್ಲಿ ಮಹಿಳಾ ಪೇದೆ ಕಲ್ಪನಾ ಎಂಬವರನ್ನು ಪರೀಕ್ಷಾ ಕೇಂದ್ರದ ಹೊರಗೆ ನಿಯೋಜಿಸಲಾಗಿತ್ತು. ಪೊಲೀಸ್ ಕಮಿಷನರ್ ಆಗಮಿಸಿ ಪರೀಕ್ಷಾ ಕೇಂದ್ರವನ್ನು ಪ್ರವೇಶಿಸಲು ಮುಂದಾದಾಗ ಕಲ್ಪನಾ ಅವರು ಮಧ್ಯಪ್ರವೇಶಿಸಿ ಮೊಬೈಲ್ ತನಗೆ ಸಲ್ಲಿಸಿ ಒಳಗೆ ಹೋಗುವಂತೆ ಕೇಳಿದ್ದಾರೆ. ಪೊಲೀಸ್ ಕಮಿಷನರ್ ತನ್ನ ಮೊಬೈಲ್ ಅನ್ನು ಕಾನ್‌ಸ್ಟೆಬಲ್‌ಗೆ ನೀಡಿದರು. ನಂತರ, ಅಧಿಕಾರಿ ಕಲ್ಪನಾ ಅವರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ ಮತ್ತು ಅವರಿಗೆ 500 ರೂ. ಬಹುಮಾನ ನೀಡಿದರು.
ಪೊಲೀಸ್‌ ಆಯುಕ್ತರ ಹಿಂದಿನ ಆದೇಶದ ಮೇರೆಗೆ, ಪರೀಕ್ಷಾ ಕೇಂದ್ರಗಳ ಒಳಗೆ ಯಾವುದೇ ಮೊಬೈಲ್ ಫೋನ್‌ಗಳನ್ನು ಒಯ್ಯಲು ಅನುಮತಿ ಇಲ್ಲ ಮತ್ತು ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ತಡೆಯಲು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಆಯುಕ್ತರು ಸ್ಪಷ್ಟಪಡಿಸಿದ್ದಾರೆ.
ಪೊಲೀಸ್‌ ಆಯುಕ್ತರಾದ ಡಿ.ಎಸ್. ಚೌಹಾಣ್ ಅವರೊಂದಿಗೆ ಎಲ್ ಬಿ ನಗರ ಡಿಸಿಪಿ ಸಾಯಿ ಶ್ರೀ, ಎಸಿಪಿ ಶ್ರೀಧರ್ ರೆಡ್ಡಿ ಮತ್ತು ಇತರ ಅಧಿಕಾರಿಗಳು ಇದ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು...| ಪಾಕಿಸ್ತಾನದ 4 ವಾಯುನೆಲೆಗಳ ಭಾರತದ ದಾಳಿ, ಡ್ರೋನ್ ಉಡಾವಣಾ ಪ್ಯಾಡ್‌ ನಾಶ, ಪಾಕ್‌ 2 ಫೈಟರ್ ಜೆಟ್ ಹೊಡೆದುರುಳಿಸಿದ ಸೇನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement