ಹೀರೋ ಪೈಲಟ್‌ : ತನ್ನ ಸೀಟಿನ ಕೆಳಗೆ ನಾಗರಹಾವು ನೋಡಿದರೂ ಹೆದರದೆ ಸುರಕ್ಷಿತವಾಗಿ ವಿಮಾನ ತುರ್ತು ಲ್ಯಾಂಡಿಂಗ್‌ ಮಾಡಿ ಅನಾಹುತ ತಪ್ಪಿಸಿದ ಪೈಲಟ್…!

ಜೋಹಾನ್ಸ್‌ಬರ್ಗ್: ವಿಮಾನ ಹಾರಾಟದ ವೇಳೆ ಕಾಕ್‌ಪಿಟ್‌ನಲ್ಲಿ ಭಾರೀ ವಿಷಪೂರಿತ ಕೇಪ್ ಸರ್ಪವು ಒಮ್ಮೆಲೇ ಹೆಡೆ ಎತ್ತಿದ ನಂತರ ಗಾಬರಿಯಾಗದೆ ವಿಮಾನವನ್ನು ಸುರಕ್ಷಿತವಾಗಿ ತುರ್ತು ಲ್ಯಾಂಡಿಂಗ್ ಮಾಡಿದ ದಕ್ಷಿಣ ಆಫ್ರಿಕಾದ ಪೈಲಟ್ ರುಡಾಲ್ಫ್ ಎರಾಸ್ಮಸ್ ಅವರನ್ನು ವಿಮಾನ ತಜ್ಞರು ಶ್ಲಾಘಿಸಿದ್ದಾರೆ.
ಕಳೆದ ಐದು ವರ್ಷಗಳಿಂದ ವಿಮಾನ ಹಾರಾಟ ನಡೆಸುತ್ತಿರುವ ಎರಾಸ್ಮಸ್, ನಾಗರಹಾವು ನೋಡಿದ ತಕ್ಷಣ ತನ್ನ ಸೀಟಿನ ಕೆಳಗೆ ಹಿಂದಕ್ಕೆ ಜಾರಿ ಬಚಾವ್‌ ಆಗಿದ್ದಾರೆ.ಅವರು ಸೋಮವಾರ ಬೆಳಿಗ್ಗೆ ವೋರ್ಸೆಸ್ಟರ್‌ನಿಂದ ನೆಲ್ಸ್‌ಪ್ರೂಟ್‌ಗೆ ನಾಲ್ವರು ಪ್ರಯಾಣಿಕರೊಂದಿಗೆ ಸಣ್ಣ ವಿಮಾನ ಹಾರಿಸುತ್ತಿದ್ದರು.
ಸೋಮವಾರ ಬೆಳಿಗ್ಗೆ ನಾವು ವಿಮಾನದ ಕಾರ್ಯವಿಧಾನ ಪರಿಶೀಲಿಸಿದಾಗ, ವೋರ್ಸೆಸ್ಟರ್ ಏರ್‌ಫೀಲ್ಡ್‌ನಲ್ಲಿರುವ ಜನರು ಭಾನುವಾರ ಮಧ್ಯಾಹ್ನ ರೆಕ್ಕೆಯ ಕೆಳಗೆ ವಿಷಕಾರಿ ಕೇಪ್ ಕೋಬ್ರಾ ಮಲಗಿರುವುದನ್ನು ನೋಡಿರುವುದಾಗಿ ನಮಗೆ ಹೇಳಿದರು. ಅವರು ಅದನ್ನು ಹಿಡಿಯಲು ಪ್ರಯತ್ನಿಸಿದರು ಆದರೆ ದುರದೃಷ್ಟವಶಾತ್ ಅದು ಎಂಜಿನ್ ಕೌಲಿಂಗ್‌ಗಳ ಒಳಗೆ ಹೊಕ್ಕಿತು. ಅವರು ಅದನ್ನು ತೆರೆದು ನೋಡಿದರು. ಆದರೆ ಹಾವು ಅಲ್ಲಿ ಇರಲಿಲ್ಲ ಆದ್ದರಿಂದ ಅದು ಹೋಗಿದೆ ಎಂದು ಅವರು ಭಾವಿಸಿದ್ದಾರೆ ಎಂದು ಎರಾಸ್ಮಸ್‌ ಹೇಳಿದ್ದಾರೆ.
ನಾನು ಸಾಮಾನ್ಯವಾಗಿ ಪ್ರಯಾಣಿಸುವಾಗ ನನ್ನ ಕಾಲಿನ ಪಕ್ಕದ ವಿಮಾನದ ಗೋಡೆಯ ಕಡೆಗೆ ನೀರಿನ ಬಾಟಲಿ ಇಟ್ಟುಕೊಳ್ಳುತ್ತೇನೆ. ಪ್ರಯಾಣಿಸುವಾಗ ತಣ್ಣನೆಯ ಸಂವೇದನೆ ಅನುಭವಿಸಿದಾಗ, ನನ್ನ ಬಾಟಲಿಯಲ್ಲಿ ನೀರು ತೊಟ್ಟಿಕ್ಕುತ್ತಿದೆ ಎಂದು ನಾನು ಭಾವಿಸಿದೆ. ಆದರೆ ನಾನು ಎಡಕ್ಕೆ ತಿರುಗಿ ಕೆಳಗೆ ನೋಡಿದಾಗ, ನಾಗರಹಾವು ತನ್ನ ತಲೆಯನ್ನು ನನ್ನ ಸೀಟಿನ ಕೆಳಗೆ ಇಡುವುದನ್ನು ನಾನು ನೋಡಿದೆ, ಒಂದು ಕ್ಷಣ ಕಕ್ಕಾಬಿಕ್ಕಿಯಾದೆ ಎಂದು ಎರಾಸ್ಮಸ್ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನಟ ನಾನಾ ಪಾಟೇಕರ್ ಸಾವಿಗೆ ಕಾರಣ ಏನು ? ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗ

ನಾನು ಒಂದು ಕ್ಷಣ ದಿಗ್ಭ್ರಮೆಗೊಂಡೆ, ನಾನು ಪ್ರಯಾಣಿಕರಿಗೆ ಹೇಳಬೇಕೆ ಬೇಡವೇ ಎಂದು ಗೊಂದಲದಲ್ಲಿದ್ದೆ. ಏಕೆಂದರೆ ಅವರು ಭಯಭೀತರಾಗಲು ನಾನು ಬಯಸಲಿಲ್ಲ ಎಂದು ಅವರು ಹೇಳಿದರು. ನಂತರ ನಾನು ಹೇಳಲು ನಿರ್ಧರಿಸಿದೆ. ‘ಕೇಳಿ, ಸಮಸ್ಯೆ ಇದೆ. ಹಾವು ವಿಮಾನದೊಳಗೆ ಇದೆ. ಇದು ನನ್ನ ಸೀಟಿನ ಕೆಳಗೆ ಇದೆ ಎಂಬುದು ನನಗೆ ಗೊತ್ತಾಗಿದೆ, ಆದ್ದರಿಂದ ನಾವು ಸಾಧ್ಯವಾದಷ್ಟು ಬೇಗ ವಿಮಾನವನ್ನು ಲ್ಯಾಂಡಿಂಗ್‌ ಮಾಡಬೇಕಾಗಿದೆ ಎಂದು ವಿಮಾನದಲ್ಲಿದ್ದವರಿಗೆ ಹೇಳಿದೆ ಎಂದರು.
ವಿಮಾನವು ವೆಲ್‌ಕಾಮ್‌ನ ವಿಮಾನ ನಿಲ್ದಾಣಕ್ಕೆ ಸಮೀಪದಲ್ಲಿತ್ತು. ಆದ್ದರಿಂದ ಎರಾಸ್ಮಸ್ ಜೋಹಾನ್ಸ್‌ಬರ್ಗ್‌ನಲ್ಲಿನ ನಿಯಂತ್ರಣ ಟವರ್‌ಗೆ ತುರ್ತು ಸಂದೇಶ ಕಳುಹಿಸಿದರು. ವಿಮಾನದಲ್ಲಿ ಪ್ರಯಾಣಿಕರಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ವಿಮಾನವು ನಿಂತ ತಕ್ಷಣ, ನಾವು ಹೊರಬರಲು ಪ್ರಾರಂಭಿಸಿದೆವು. ಹಿಂದೆ ಇದ್ದ ಮೂವರು ಪ್ರಯಾಣಿಕರು ಮೊದಲು ಹೊರಬಂದರು ಮತ್ತು ನಂತರ ನನ್ನೊಂದಿಗೆ ಮುಂದೆ ಕುಳಿತವರು ಹೊರಬಂದರು ಎಂದು ಎರಾಸ್ಮಸ್ ಹೇಳಿದರು.

“ನಾನು ಕೊನೆಯದಾಗಿ ಹೊರಬಂದೆ ಮತ್ತು ನಾನು ಆಸನವನ್ನು ಮುಂದಕ್ಕೆ ಮಾಡಿದಾಗ, ಅದು ನನ್ನ ಸೀಟಿನ ಕೆಳಗೆ ವಿಷಕಾರಿ ನಾಗರಹಾವು ಸುರುಳಿಯಾಗಿ ಮಲಗಿತ್ತು. ನಂತರ ನಾವು ಕೆಲವು ಹಾವು ಹಿಡಿಯುವವರನ್ನು ಸಂಪರ್ಕಿಸಿದೆವು. ಆದರೆ ಅವರು ಬರುವ ಹೊತ್ತಿಗೆ ಅದು ಮತ್ತೆ ವಿಮಾನದೊಳಗೆ ಕಣ್ಮರೆಯಾಯಿತು ಎಂದು ಎರಾಸ್ಮಸ್ ಹೇಳಿದರು.
ಹಾವನ್ನು ಹುಡುಕುವ ಪ್ರಯತ್ನದಲ್ಲಿ ಇಂಜಿನಿಯರ್‌ಗಳು ವಿಮಾನದ ಭಾಗಗಳನ್ನು ಬಿಚ್ಚಿದರು. ಆದರೆ ಅದು ಕಂಡುಬರಲಿಲ್ಲ. ಮರುದಿನ ಬೆಳಿಗ್ಗೆ ಕೆಲಸ ಮುಂದುವರಿಸಲು ನಿರ್ಧರಿಸಿದರು. ರಾತ್ರಿಯ ಸಮಯದಲ್ಲಿ ನಾಗರಹಾವು ಹೊರಬಿದ್ದಿದೆಯೇ ಎಂದು ನೋಡಲು ಅವರು ಸ್ವಲ್ಪ ಜೋಳವನ್ನು ವಿಮಾನದ ಸುತ್ತಲೂ ಬೀರಿದರು, ಆದರೆ ಮರುದಿನ ಬೆಳಿಗ್ಗೆ ಅದು ಹಾಗೆಯೇ ಇತ್ತು ಎಂದು ಎರಾಸ್ಮಸ್‌ ಹೇಳಿದ್ದಾರೆ.
38 ವರ್ಷಗಳಿಂದ ವಾಯುಯಾನದಲ್ಲಿರುವ ಏವಿಯೇಷನ್ ಸ್ಪೆಷಲಿಸ್ಟ್ ಮತ್ತು ಎಸ್‌ಎ ಮುಖ್ಯ ಏರ್ ಶೋ ನಿರೂಪಕ ಬ್ರಿಯಾನ್ ಎಮ್ಮೆನಿಸ್ ಅವರು ವೆಬ್‌ಸೈಟ್‌ಗೆ ಎರಾಸ್ಮಸ್ “ವಾಯುಯಾನದಲ್ಲಿ ಶ್ರೇಷ್ಠ ಕೌಶಲ್ಯ” ಪ್ರದರ್ಶಿಸಿದ್ದಾರೆ ಎಂದು ಹೇಳಿದ್ದಾರೆ. ವಾಯುಯಾನ ಉದ್ಯಮದಲ್ಲಿ ನಾಲ್ಕು ದಶಕಗಳಲ್ಲಿ ಇಂತಹ ಪ್ರಕರಣವನ್ನು ಕೇಳಿರಲಿಲ್ಲ ಎಂದು ಎಮ್ಮೆನಿಸ್ ಹೇಳಿದರು.
ಹವಾಮಾನವು ಪ್ರತಿಕೂಲವಾಗಿತ್ತು. ಪೈಲಟ್ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ, ಪ್ರತಿಕೂಲ ಹವಾಮಾನದ ಮೇಲೆಯೂ ಕೇಂದ್ರೀಕರಿಸಬೇಕಾಗಿತ್ತು, ಜೊತೆಗೆ ನಾಗರಹಾವನ್ನೂ ನಿರ್ವಹಿಸಬೇಕಾಗಿತ್ತು ಎಂದು ಎಮ್ಮೆನಿಸ್ ಹೇಳಿದರು.
ಪೈಲಟ್‌ ಗಾಬರಿಯಾಗಬಹುದಿತ್ತು. ಅವರಿಗೆ ಆ ವಿಮಾನವನ್ನು ನಿಯಂತ್ರಿಸಲಾಗದೆ ತೊಂದರೆಯಾಗಬಹುದಿತ್ತು. ಮತ್ತು ಪ್ರತಿಕೂಲ ಹವಾಮಾನದ ಪರಿಸ್ಥಿತಿಯಿದ್ದಾಗ ಅವರು ನೆಲದ ಮೇಲಿನ ದೃಷ್ಟಿ ವ್ಯತ್ಯಾಸವಾಗಿ ವಿಮಾನ ಅಪಘಾತಕ್ಕೀಡಾಗಬಹುದಿತ್ತು, ವಿಮಾನದಲ್ಲಿದ್ದವರು ಮಾತ್ರವಲ್ಲದೆ ನೆಲದ ಜನರಿಗೂ ತೊಂದರೆಯಾಗಬಹುದಿತ್ತು ಎಂದು ಎಂಮೆನಿಸ್ ಹೇಳಿದರು.

ಪ್ರಮುಖ ಸುದ್ದಿ :-   ರಿಯಾದ್ ವಿಮಾನ ನಿಲ್ದಾಣಕ್ಕೆ ಹೌತಿಗಳ ಕ್ಷಿಪಣಿ ದಾಳಿ : 14 ಸಾವು, 380 ಜನರಿಗೆ ಗಾಯ ; ಡೆಡ್ಲಿ ದಾಳಿಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement