ನವದೆಹಲಿ: ಅಮೆರಿಕ ಮೂಲದ ಹಿಂಡೆನ್‌ಬರ್ಗ್ ರಿಸರ್ಚ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧದ ಆರೋಪಗಳ ಕುರಿತು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಯ ಬೇಡಿಕೆಯ ಬಗ್ಗೆ ತಮ್ಮ ಮಿತ್ರಪಕ್ಷ ಕಾಂಗ್ರೆಸ್‌ನ ಅಭಿಪ್ರಾಯಗಳನ್ನು ಬೆಂಬಲಿಸುವುದಿಲ್ಲ ಎಂದು ಮಹಾರಾಷ್ಟ್ರದ ಹಿರಿಯ ರಾಜಕಾರಣಿ ಶರದ್ ಪವಾರ್ ಶುಕ್ರವಾರ ಹೇಳಿದ್ದಾರೆ.
ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಮುಖ್ಯಸ್ಥರಾದ ಶರದ್ ಪವಾರ್ ಹಿಂಡೆನ್‌ಬರ್ಗ್‌ನ ವರದಿಯ ಸುತ್ತಲಿನ ನಿರೂಪಣೆಯನ್ನು ಟೀಕಿಸಿದರು.
ಹೇಳಿಕೆಯನ್ನು ನೀಡಿದ ಈ ಜನರ (ಹಿಂಡೆನ್ಬರ್ಗ್) ಬಗ್ಗೆ ನಾವು ಎಂದಿಗೂ ಕೇಳಿರಲಿಲ್ಲ, ಹಿನ್ನೆಲೆ ಏನು? ಅವರು ವಿವಾದವನ್ನು ಉಂಟುಮಾಡುವ ಸಮಸ್ಯೆಗಳನ್ನು ಎತ್ತಿದಾಗ ದೇಶಾದ್ಯಂತ ಅದರ ಬಗ್ಗೆ ಗದ್ದಲ ಉಂಟಾಯಿತು. ಅದರಿಂದ ದೇಶದ ಆರ್ಥಿಕತೆ ಮೇಲೆ ಹಾನಿಯಾಗುತ್ತದೆ, ನಾವು ಈ ವಿಷಯಗಳನ್ನು ನಿರ್ಲಕ್ಷಿಸಲಾಗುವುದಿಲ್ಲ. ದೇಶದ ಆರ್ಥಿಕತೆಯನ್ನು ಗುರಿಯಾಗಿರಿಸಿಕೊಳ್ಳಲಾಗಿದೆ ಎಂದು ತೋರುತ್ತದೆ ಎಂದು ಪವಾರ್ ಹೇಳಿದರು.
ದೇಶದ ಪ್ರತ್ಯೇಕ ಕೈಗಾರಿಕಾ ಗುಂಪನ್ನು ಗುರಿಯಾಗಿಸಲಾಯಿತು ಎಂದು ಅದು ತೋರುತ್ತದೆ. ಅವರೇನಾದರೂ ತಪ್ಪು ಮಾಡಿದ್ದರೆ ತನಿಖೆಯಾಗಬೇಕು. ಸಂಸತ್ತಿನಲ್ಲಿ ಜೆಪಿಸಿ ತನಿಖೆಗೆ ಆಗ್ರಹಿಸಲಾಯಿತು. ಈ ಬಗ್ಗೆ ನಾನು ವಿಭಿನ್ನ ದೃಷ್ಟಿಕೋನವನ್ನು ಹೊಂದಿದ್ದೇನೆ ಎಂದು ಅವರು ಹೇಳಿದರು.
ಹಲವು ವಿಚಾರಗಳ ಮೇಲೆ ಜೆಪಿಸಿ ನೇಮಕ ಮಾಡಿದ್ದು ನೆನಪಿದೆ, ಕೋಕಾಕೋಲಾ ವಿಚಾರವಾಗಿ ಒಮ್ಮೆ ಜೆಪಿಸಿ ನೇಮಕ ಮಾಡಿದ್ದು, ನಾನೇ ಅಧ್ಯಕ್ಷನಾಗಿದ್ದೆ. ಹಾಗಾಗಿ ಈ ಹಿಂದೆ ಜೆಪಿಸಿ ರಚನೆಯಾಗಿಲ್ಲ ಎಂದಲ್ಲ, ಹಾಗೂ ಜೆಪಿಸಿಗೆ ಬೇಡಿಕೆಯಲ್ಲಿ ತಪ್ಪಿಲ್ಲ, ಆದರೆ ಏಕೆ ಬೇಡಿಕೆ ಮಾಡಲಾಯಿತು? ಕೆಲವು ಉದ್ಯಮ ಸಂಸ್ಥೆಗಳನ್ನು ವಿಚಾರಣೆ ಮಾಡಬೇಕು ಎಂದು ಹೇಳಲು ಜೆಪಿಸಿಗೆ ಬೇಡಿಕೆಯನ್ನು ಮಾಡಲಾಯಿತು ಎಂದು ಪವಾರ್ ಹೇಳಿದರು.
ಪವಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಪಕ್ಷ ಅವರ ಹೇಳಿಕೆಯಿಂದ ಅಂತರ ಕಾಯ್ದುಕೊಂಡಿದೆ. ಎನ್‌ಸಿಪಿ ಪಕ್ಷ ತನ್ನದೇ ಆದ ಅಭಿಪ್ರಾಯವನ್ನು ಹೊಂದಿರಬಹುದು. ಆದರೆ 19 ಸಮಾನ ಮನಸ್ಕ ಪಕ್ಷಗಳಿಗೆ ಪ್ರಧಾನಮಂತ್ರಿ-ಸಂಬಂಧಿತ ಅದಾನಿ ಗ್ರೂಪ್ ವಿಷಯವು ನಿಜ ಮತ್ತು ತುಂಬಾ ಗಂಭೀರವಾಗಿದೆ ಎಂದು ಮನವರಿಕೆಯಾಗಿದೆ” ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಆದರೆ ಎನ್‌ಸಿಪಿ ಸೇರಿದಂತೆ ಎಲ್ಲಾ 20 ಸಮಾನ ಮನಸ್ಕ ವಿರೋಧ ಪಕ್ಷಗಳು ಒಂದಾಗಿವೆ ಮತ್ತು ಬಿಜೆಪಿಯ ದಾಳಿಯಿಂದ ಸಂವಿಧಾನ ಮತ್ತು ನಮ್ಮ ಪ್ರಜಾಪ್ರಭುತ್ವವನ್ನು ಉಳಿಸಲು ಮತ್ತು ಬಿಜೆಪಿಯ ವಿಭಜಕ ಮತ್ತು ವಿನಾಶಕಾರಿ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಅಜೆಂಡಾವನ್ನು ಸೋಲಿಸುವಲ್ಲಿ ಒಟ್ಟಾಗಿರುತ್ತವೆ ಎಂದು ಅವರು ಹೇಳಿದರು.
ಹೇಳಿಕೆಯಲ್ಲಿ, ಕಾಂಗ್ರೆಸ್ ವಕ್ತಾರರು ಪವಾರ್ ಅವರ ಪಕ್ಷವನ್ನು “19 ಸಮಾನ ಮನಸ್ಕ ಪಕ್ಷಗಳ” ಪಟ್ಟಿಯಿಂದ ಹೊರಗಿಟ್ಟಿದ್ದಾರೆ, 19 ಸಮಾನ ಮನಸ್ಕ ಪಕ್ಷಗಳು ಅದಾನಿ-ಹಿಂಡೆನ್‌ಬರ್ಗ್ ವಿವಾದದ ಬಗ್ಗೆ ಜೆಪಿಸಿ ತನಿಖೆಯನ್ನು ಬಯಸುತ್ತದೆ. ಆದರೆ ಉಳಿದ ವಿಷಯಗಳಲ್ಲಿ ಎನ್‌ಸಿಪಿಯನ್ನು ಸಮಾನ ಮನಸ್ಕ ಪಕ್ಷಗಳ ಪಟ್ಟಿಯಲ್ಲಿ ಸೇರಿಸಿದೆ. ಅವು ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರುದ್ಧ ಹೋರಾಟ ಮುಂದುವರಿಸಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ