ಕ್ಲೇಮ್‌ ಮಾಡದ ₹17,000 ಹಣ ಮರಳಿ ಪಡೆಯಲು ಕ್ಯಾಲಿಫೋರ್ನಿಯಾ ವ್ಯಕ್ತಿಗೆ ಸಹಾಯ ಮಾಡಿದ ಚಾಟ್‌ಜಿಪಿಟಿ…! ಹೇಗಾಯ್ತು…ಇಲ್ಲಿದೆ…

2022ರಲ್ಲಿ ಪ್ರಾರಂಭವಾದಾಗಿನಿಂದ ಪ್ರಪಂಚದಾದ್ಯಂತ ಕೃತಕಬುದ್ದಿಮತ್ತೆ (AI) ಚಾಟ್‌ಬಾಟ್ (ChatGPT)ಯ ಜನಪ್ರಿಯತೆ ಬೆಳೆಯುತ್ತಿದೆ. ಇದು ಮೊದಲು ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವಾರ್ಟನ್ ಶಾಲೆಯಲ್ಲಿ ಎಂಬಿಎ (MBA) ವಿದ್ಯಾರ್ಥಿಗಳ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಯಿತು ಮತ್ತು ನಂತರ ಅಮೆರಿಕ ವೈದ್ಯಕೀಯ ಮತ್ತು ನಿರ್ವಹಣಾ ಪರೀಕ್ಷೆಗಳಲ್ಲಿ ತನ್ನ ಬುದ್ಧಿವಂತಿಕೆಯನ್ನು ಸಾಬೀತುಪಡಿಸಿತು. ಎಐ (AI) ಚಾಲಿತ ಚಾಟ್‌ಬಾಟ್ ತನ್ನ ಮುಂದೆ ಬಂದ ಬಹುತೇಕ ಎಲ್ಲ ಸಮಸ್ಯೆಗಳನ್ನು ಪರಿಹರಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳ ನಂತರ, ಎಐ (AI) ನೇತೃತ್ವದ ಚಾಟ್‌ಬಾಟ್ ಈಗ ಕ್ಲೇಮ್‌ ಮಾಡದ ಹಣವನ್ನು ಮರುಪಡೆಯಲು ಜನರಿಗೆ ಸಹಾಯ ಮಾಡುತ್ತಿದೆ, ಇದನ್ನು ‘ಮರೆತುಹೋದ ನಿಧಿಗಳು (forgotten funds)’ ಎಂದೂ ಕರೆಯುತ್ತಾರೆ. ಡು ನಾಟ್ ಪೇ ಸಂಸ್ಥಾಪಕ ಟ್ವಿಟ್ಟರ್‌ ನಲ್ಲಿ ಈ ವಿಷಯ ಹಂಚಿಕೊಂಡಿದ್ದು, ಎಐ (AI) ಚಾಟ್‌ಬಾಟ್‌ (ChatGPT)ಗೆ ಕೆಲವು ಪ್ರಶ್ನೆಗಳನ್ನು ಕೇಳುವ ಮೂಲಕ ಅಮೆರಿಕ ಸರ್ಕಾರದಿಂದ $210 ಅನ್ನು ಹೇಗೆ ಮರುಪಡೆದುಕೊಂಡೆ ಎಂಬುದನ್ನು ಜೋಶುವಾ ಬ್ರೌಡರ್ ಹಂಚಿಕೊಂಡಿದ್ದಾರೆ.

ಜೋಶುವಾ ಮತ್ತು ಚಾಟ್‌ಜಿಪಿಟಿ ನಡುವಿನ ಸಂಭಾಷಣೆ….
ಜೋಶುವಾ ಅವರ ಟ್ವೀಟ್ ಪ್ರಕಾರ, ಅವರು ಸ್ವಲ್ಪ ಹಣವನ್ನು ಹುಡುಕಲು ಹೊಸ ಚಾಟ್‌ಜಿಪಿಟಿ ಬ್ರೌಸಿಂಗ್ ಎಕ್ಸ್‌ಟೆನ್ಶನ್‌( ChatGPT browsing extension)ಗೆ ಕೇಳಿದ ನಂತರ “ಒಂದು ನಿಮಿಷದಲ್ಲಿ, ಕ್ಯಾಲಿಫೋರ್ನಿಯಾ ಸರ್ಕಾರದಿಂದ ನನ್ನ ಬ್ಯಾಂಕ್ ಖಾತೆಗೆ $210 ಬಂದು ಬಿತ್ತು” ಎಂದು ಜೋಶುವಾ ಹೇಳಿಕೊಂಡಿದ್ದಾರೆ. ಅವರ ಮೊದಲ ಪ್ರಶ್ನೆಯಲ್ಲಿ, ಅವರು ಚಾಟ್‌ಜಿಪಿಟ್‌ (ChatGPT)ಯನ್ನು, “ನನ್ನ ಹೆಸರು ಜೋಶುವಾ ಬ್ರೌಡರ್ ಮತ್ತು ನಾನು ಕ್ಯಾಲಿಫೋರ್ನಿಯಾದಲ್ಲಿ ವಾಸಿಸುತ್ತಿದ್ದೇನೆ, ನನ್ನ ಜನ್ಮ ದಿನಾಂಕ 12/17/96 ಆಗಿದೆ. ನೀವು ನನ್ನ ಸ್ವಲ್ಪ ಹಣವನ್ನು ಹುಡುಕಬಹುದೇ? ಎಂದು ಕೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆಯಾಗಿ, ಚಾಟ್‌ಜಿಪಿಟಿ (ChatGPT) ಕ್ಯಾಲಿಫೋರ್ನಿಯಾದಲ್ಲಿ ಕ್ಲೈಮ್ ಮಾಡದ ಆಸ್ತಿಗಳ ಅಧಿಕೃತ ವೆಬ್‌ಸೈಟ್ ಅನ್ನು ತೋರಿಸಿತು ಮತ್ತು ಯಾವುದಾದರೂ ಇದ್ದರೆ ‘ಮರೆತುಹೋದ ನಿಧಿಗಳನ್ನು(forgotten funds)’ ಮರುಪಡೆಯಲು ಸರಳ ಹಂತಗಳನ್ನು ಪಟ್ಟಿಮಾಡಿತು. AI ಚಾಟ್‌ಬಾಟ್‌ನ ಪ್ರತಿಕ್ರಿಯೆಗೆ ಪ್ರತಿಕ್ರಿಯಿಸಿದ ಜೋಶುವಾ, “ಅದು (ಚಾಟ್‌ಜಿಪಿಟಿ) ಮಾಡಿದ ಮೊದಲ ಉಪಾಯವೆಂದರೆ ಅಸ್ಪಷ್ಟ ಸರ್ಕಾರಿ ವೆಬ್‌ಸೈಟ್‌ ‘ಕ್ಯಾಲಿಫೋರ್ನಿಯಾ ಸ್ಟೇಟ್ ಕಂಟ್ರೋಲರ್ ಗೆ ಭೇಟಿ ನೀಡುವುದು’ ಎಂದು ಸೂಚಿಸಿತು. ಈ ವೆಬ್‌ಸೈಟ್ ಸಂಪರ್ಕಿಸಲು ಸಾಧ್ಯವಾಗದ ಕಂಪನಿಗಳಿಂದ ಕ್ಲೇಮ್‌ ಮಾಡದ ಮರುಪಾವತಿಗಳನ್ನು ಹೊಂದಿದೆ. ಏನು ಮಾಡಬೇಕೆಂಬುದರ ಕುರಿತು ಇದು ಹಂತ-ಹಂತದ ಸೂಚನೆಗಳನ್ನು ನೀಡುವುದರ ಜೊತೆಗೆ ನನಗೆ ಲಿಂಕ್ ಅನ್ನು ನೀಡಿತು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ ; ಮತ್ತೊಂದು ಕ್ಷೇತ್ರದಿಂದಲೂ ರಾಹುಲ್‌ ಗಾಂಧಿ ಸ್ಪರ್ಧೆ

ಅವರು ಹಂತ-ಹಂತದ ಸೂಚನೆಗಳನ್ನು ಅನುಸರಿಸುವುದನ್ನು ಮುಂದುವರೆಸಿದರು ಮತ್ತು $209.7 ಹಣ ಮರುಪಡೆಯಲು ಕಾಯುತ್ತಿತ್ತು ಎಂದು ಕಂಡುಕೊಂಡೆ ಎಂದು ಅವರು ಹೇಳಿದ್ದಾರೆ. “ನಾನು ಸೂಚನೆಗಳನ್ನು ಅನುಸರಿಸಿದ್ದೇನೆ ಮತ್ತು, ಒಂದು ನಿಮಿಷದ ನಂತರ, $209.67 ನನಗಾಗಿ ಕಾಯುತ್ತಿರುವುದನ್ನು ಕಂಡುಕೊಂಡೆ.” ಸರ್ಕಾರದ ವೆಬ್‌ಸೈಟ್‌ನಲ್ಲಿ ಸ್ಥಾಪಿಸಲಾದ ಕ್ಯಾಪ್ಚಾ ಮಾತ್ರ AI ಎಲ್ಲವನ್ನೂ ಮಾಡುವುದನ್ನು ತಡೆಯುತ್ತದೆ ಎಂದು ಅವರು ಹೇಳಿದರು.
ಈ ಸಂಭಾಷಣೆಯಿಂದ ನೆಟಿಜನ್‌ಗಳು ಬೆರಗಾದರು. ChatGPT ಸೂಚನೆಗಳನ್ನು ಅನುಸರಿಸಿ ಹಣವನ್ನು ಮರಳಿ ಪಡೆದಿದ್ದೇನೆ ಎಂದು ಜೋಶುವಾ ಹೇಳಿಕೊಂಡ ನಂತರ, ನೆಟಿಜನ್‌ಗಳು ಆಶ್ಚರ್ಯಚಕಿತರಾದರು. ಅನೇಕ ಇಂಟರ್ನೆಟ್ ಬಳಕೆದಾರರು ಇದೇ ರೀತಿಯ ಹಂತಗಳನ್ನು ಅನುಸರಿಸುವ ಮೂಲಕ ತಮ್ಮ ‘ಕ್ಲೇಮ್ ಮಾಡದ ಹಣವನ್ನು’ ಸಹ ಸ್ವೀಕರಿಸಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ.
ಒಬ್ಬ ಬಳಕೆದಾರ, “ಸಲಹೆಗಾಗಿ ಧನ್ಯವಾದಗಳು. ನಾನು ಐದು ಕ್ಲೇಮ್‌ ಮಾಡದ ಹಣ ಹೊಂದಿದ್ದೇನೆ. ಚೆಕ್ ಮೇಲ್‌ನಲ್ಲಿದೆ” ಎಂದು ಹೇಳಿದರು. ಇನ್ನೊಬ್ಬ ಬಳಕೆದಾರರು “ಇದಕ್ಕಾಗಿ ಧನ್ಯವಾದಗಳು!! ನಾನು ಪರಿಶೀಲಿಸಿದ್ದೇನೆ ಮತ್ತು ಏನನ್ನೂ ನಿರೀಕ್ಷಿಸಿರಲಿಲ್ಲ. ನಾನೇ ತಪ್ಪಾಗಿದ್ದೆ! ನಾನು $385 ಹಣ ಪಡೆದಿದ್ದೇನೆ ಎಂದು ಬರೆದಿದ್ದಾರೆ.

ಪ್ರಮುಖ ಸುದ್ದಿ :-   ರೇವಣ್ಣ, ಪ್ರಜ್ವಲ್ ಎಸ್‌ಐಟಿ ವಿಚಾರಣೆಗೆ ಹಾಜರಾಗದಿದ್ದರೆ ಕಾನೂನು ಪ್ರಕಾರ ಬಂಧನ: ಗೃಹ ಸಚಿವ ಪರಮೇಶ್ವರ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement