ಬೆಂಗಳೂರಲ್ಲಿ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳ

ಬೆಂಗಳೂರು: ರಾಜ್ಯದ ಮಲೆನಾಡಿನಲ್ಲಿ ದೊರೆಯುವ ‘ಅಪ್ಪೆಮಿಡಿ’ ಗಳನ್ನು (ಮಾವಿನ ಕಾಯಿಯ ತಳಿ) ನಾಡಿನ ಜನರಿಗೆ ಅದರಲ್ಲೂ ರೈತರಿಗೆ ಪರಿಚಯಿಸಲು ಬೆಂಗಳೂರಿನ ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (IIHR)ಮುಂದಾಗಿದೆ.
ಹೆಸರಘಟ್ಟದ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯು (ಐಐಎಚ್ಆರ್) ಮೊಟ್ಟ ಮೊದಲ ಬಾರಿಗೆ ‘ಅಪ್ಪೆಮಿಡಿ’ ಮೇಳವನ್ನು ಏಪ್ರಿಲ್ 12 ಮತ್ತು 13ರಂದು ಆಯೋಜಿಸಿದೆ.
ಅಪ್ಪೆ ಮಿಡಿ ಕರ್ನಾಟಕದ ಮಲೆನಾಡು ಪ್ರದೇಶದಲ್ಲಿ ವಿಶೇಷವಾಗಿ ಶಿರಸಿ, ಸಾಗರ, ಸಿದ್ದಾಪುರ, ತೀರ್ಥಹಳ್ಳಿ, ಕುಮಟಾ, ಹೊನ್ನಾವರ, ಸಕಲೇಶಪುರ, ಕೊಡಗು ಮತ್ತು ಚಿಕ್ಕಮಗಳೂರು ಮೊದಲಾದೆಡೆ ಬೆಳೆಯುವ ಮಾವಿನ ಸಾಂಪ್ರದಾಯಿಕ ಉಪ್ಪಿನಕಾಯಿ ಜಾತಿಯಾಗಿದೆ. IIHR ಪ್ರಕಾರ, ಅಪ್ಪೆ ಮಿಡಿ ಮಾವಿನ ಹಣ್ಣಿನಿಂದ ತಯಾರಿಸಿದ ಉಪ್ಪಿನಕಾಯಿ ಅಸಾಧಾರಣ ಸವಿಯ ಅನುಭವವನ್ನು ನೀಡುತ್ತದೆ. ಉಪ್ಪಿನಕಾಯಿಯನ್ನು ವರ್ಷಕ್ಕೆ 4,000 ರಿಂದ 5,000 ಟನ್‌ಗಳಷ್ಟು ಪ್ರಮಾಣದಲ್ಲಿ ಸೇವಿಸಲಾಗುತ್ತದೆ, ಇದು ವರ್ಷಕ್ಕೆ 100 ಕೋಟಿ ರೂ.ಗಳ ವ್ಯವಹಾರ ನಡೆಸುತ್ತದೆ.

‘ಅಪ್ಪೆಮಿಡಿ’ ಮೇಳದಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಪ್ಪೆಮಿಡಿಗಳನ್ನು ಮಾರಾಟ ಸಹ ಮಾಡಲಾಗುತ್ತದೆ. ಅಲ್ಲದೆ, ಅಪ್ಪೆಮಿಡಿ ಸೇರಿ ಹಲವು ಮಾವಿನ ತಳಿಗಳ ಸಸಿಗಳು ಸಹ ಈ ಮೇಳದಲ್ಲಿ ಸಿಗಲಿವೆ. 100 ತಳಿಗಳ ಮಾವಿನ ಕಾಯಿ ಮತ್ತು ಹಣ್ಣುಗಳನ್ನು ಪ್ರದರ್ಶಿಸಲಾಗುತ್ತದೆ. ಅಪ್ಪೆಮಿಡಿ ಕರ್ನಾಟಕದ ಸಾಂಪ್ರದಾಯಿಕ ಉಪ್ಪಿನಕಾಯಿ ತಳಿಯಾಗಿದೆ. ಇದಕ್ಕೆ ಜಿಐ ಮಾನ್ಯತೆ ಕೂಡ ಸಿಕ್ಕಿದೆ. ಕರ್ನಾಟಕದಲ್ಲಿ ಮಲೆನಾಡು ಮತ್ತಿತರ ಪ್ರದೇಶಗಳಲ್ಲಿ ಅಪ್ಪೆಮಿಡಿ ತಳಿಗಳಿವೆ. ಸರಿಸುಮಾರು 250ಕ್ಕೂ ಹೆಚ್ಚು ತಳಿಗಳಿವೆ. ಈ ಪೈಕಿ ಐಐಎಚ್ಆರ್ನಿಂದ 100 ಅಪ್ಪೆಮಿಡಿ ತಳಿಗಳನ್ನು ಸಂಗ್ರಹಿಸಲಾಗಿದ್ದು, ಈ ತಳಿಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತದೆ. ಉಪ್ಪಿನಕಾಯಿಗಳನ್ನು ಸಹ ಪ್ರದರ್ಶಿಸಿ, ಮಾರಾಟ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಮೇಳದಲ್ಲಿ ಬೆಳೆಗಾರರಿಗೆ ‘ಅಪ್ಪೆಮಿಡಿ’ ಬಗ್ಗೆ ಸಮಗ್ರವಾಗಿ ತಿಳಿಸಲಾಗುತ್ತದೆ.

ಪ್ರಮುಖ ಸುದ್ದಿ :-   ದರ್ಶನ, ಪತ್ನಿ ವಿಜಯಲಕ್ಷ್ಮಿ ವಿರುದ್ಧ ಅವಿಶ್ವಾಸಾರ್ಹ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ

3.9 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement