ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 7830 ಹೊಸ ಕೋವಿಡ್‌-19 ಪ್ರಕರಣಗಳು ದಾಖಲು

ನವದೆಹಲಿ: ಇಂದು ಬುಧವಾರ (ಏಪ್ರಿಲ್ 12) ಬೆಳಿಗ್ಗೆ ನೀಡಿದ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 7,830 ದೈನಂದಿನ ಹೊಸ ಕೊರೊನಾ ವೈರಸ್ ಸೋಂಕುಗಳು ದಾಖಲಾಗಿದೆ, ಇದು 223 ದಿನಗಳಲ್ಲಿ ಅತಿ ಹೆಚ್ಚು ಒಂದೇ ದಿನದಲ್ಲಿ ದಾಖಲಾದ ಪ್ರಕರಣವಾಗಿದೆ ಮತ್ತು ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 40,215 ಕ್ಕೆ ಏರಿದೆ.
ದೆಹಲಿ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದಲ್ಲಿ ತಲಾ ಇಬ್ಬರು ಮತ್ತು ಗುಜರಾತ್, ಹರಿಯಾಣ, ಮಹಾರಾಷ್ಟ್ರ, ತಮಿಳುನಾಡು ಮತ್ತು ಉತ್ತರಪ್ರದೇಶದಲ್ಲಿ ತಲಾ ಒಬ್ಬರು ಮತ್ತು ಕೇರಳದಲ್ಲಿ ಐವರು ಸೇರಿ 16 ಸಾವುಗಳು ದಾಖಲಾಗಿದೆ. ಒಟ್ಟು ಸಾವಿನ ಸಂಖ್ಯೆ 5,31,016 ಕ್ಕೆ ಏರಿದೆ.
ಕಳೆದ ವರ್ಷ ಸೆಪ್ಟೆಂಬರ್ 1 ರಂದು ದೇಶವು ಒಂದೇ ದಿನದಲ್ಲಿ 7,946 ಕೋವಿಡ್‌-19 ಪ್ರಕರಣಗಳನ್ನು ದಾಖಲಿಸಿತ್ತು.
ಆರೋಗ್ಯ ಸಚಿವಾಲಯದ ವೆಬ್‌ಸೈಟ್ ಪ್ರಕಾರ, ಸಕ್ರಿಯ ಪ್ರಕರಣಗಳು ಈಗ ಒಟ್ಟು ಸೋಂಕುಗಳ 0.09 ಪ್ರತಿಶತವನ್ನು ಒಳಗೊಂಡಿದೆ, ರಾಷ್ಟ್ರೀಯ ಕೋವಿಡ್‌-19 ಚೇತರಿಕೆ ದರವು 98.72 ಪ್ರತಿಶತದಷ್ಟು ದಾಖಲಾಗಿದೆ. ಪ್ರಕರಣದ ಸಾವಿನ ಪ್ರಮಾಣ ಶೇಕಡಾ 1.19 ರಷ್ಟಿದೆ ಎಂದು ಅಂಕಿಅಂಶಗಳು ತೋರಿಸಿವೆ.
ಸಚಿವಾಲಯದ ವೆಬ್‌ಸೈಟ್ ಪ್ರಕಾರ, ರಾಷ್ಟ್ರವ್ಯಾಪಿ ಕೋವಿಡ್‌-19 ಲಸಿಕೆ ಅಭಿಯಾನದಡಿಯಲ್ಲಿ ದೇಶದಲ್ಲಿ ಇದುವರೆಗೆ 220.66 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement