ಎನ್‌ಕೌಂಟರ್‌ನಲ್ಲಿ ಹತನಾದ ಗ್ಯಾಂಗ್‌ಸ್ಟರ್‌ ಮಗ ಮಾರುವೇಷದಲ್ಲಿದ್ದ: 42 ಸುತ್ತು ಗುಂಡು ಹಾರಾಟ ನಡೆದಿತ್ತು…!

ಲಕ್ನೋ: ಉಮೇಶ ಪಾಲ್ ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕುಖ್ಯಾತ ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ ಅಸದ್ ನನ್ನು ಉತ್ತರ ಪ್ರದೇಶದ ಪೊಲೀಸರು ಇಂದು, ಗುರುವಾರ ಝಾನ್ಸಿಯಲ್ಲಿ ಎನ್‌ಕೌಂಟರಿನಲ್ಲಿ ಹತನಾಗಿದ್ದಾನೆ. ಆತನ ಸಹ-ಆರೋಪಿ ಗುಲಾಂನನ್ನೂ ಗುಂಡಿಕ್ಕಿ ಕೊಲ್ಲಲಾಯಿತು.
ಅಸದ್ ಮತ್ತು ಗುಲಾಮ್ ಇಬ್ಬರ ತಲೆಯ ಮೇಲೆ ತಲಾ ₹ 5 ಲಕ್ಷ ಬಹುಮಾನ ಘೋಷಸಲಾಗಿತ್ತು. ಅಸದ್ ಅಹ್ಮದ್ ಮೇಲಿನ ದಾಳಿಯ ವೇಳೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅತ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ಇಂದು ಮಧ್ಯಾಹ್ನದ ಸುಮಾರಿಗೆ ಉತ್ತರ ಪ್ರದೇಶ ವಿಶೇಷ ಕಾರ್ಯಪಡೆಯ ತಂಡದ ಮೇಲೆ ಗುಲಾಮ್ ಗುಂಡು ಹಾರಿಸಿದ್ದು, ಪ್ರತಿಯಾಗಿ ಪೊಲೀಸರು ಗುಂಡುಹಾರಿಸಿದಾಗ ಇಬ್ಬರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರಿಂದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು, ಹೊಸ ಸೆಲ್‌ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಉಮೇಶ್ ಪಾಲ್ ಹತ್ಯೆಯ ನಂತರ ಅಸದ್ ಅಹ್ಮದ್ ಲಕ್ನೋಗೆ ಪರಾರಿಯಾಗಿದ್ದ. ನಂತರ ಅಸದ್‌ ಹಾಗೂ ಗುಲಾಂ ದೆಹಲಿ ತಲುಪುವ ಮೊದಲು ಕಾನ್ಪುರ ಮತ್ತು ನಂತರ ಮೀರತ್‌ಗೆ ತೆರಳಿದ್ದರು ಎಂದು ತಿಳಿದುಬಂದಿದೆ. ನಂತರ ಅವರಿಬ್ಬರು ಮಧ್ಯಪ್ರದೇಶಕ್ಕೆ ಪಲಾಯನ ಮಾಡಲು ನಿರ್ಧರಿಸಿದರು. ಝಾನ್ಸಿ ತಲುಪಿ ಬೈಕ್ ನಲ್ಲಿ ಉತ್ತರ ಪ್ರದೇಶದ ಗಡಿಗೆ ತೆರಳುತ್ತಿದ್ದಾಗ ಪೊಲೀಸರು ತಡೆದಿದ್ದಾರೆ. ಅಸದ್ ಮಾರುವೇಷದಲ್ಲಿದ್ದ ಎಂದು ವರದಿಯಾಗಿದೆ. ಅತೀಕ್ ಅಹ್ಮದ್ ಗ್ಯಾಂಗ್‌ನಲ್ಲಿ ಒಬ್ಬ ಮಾಹಿತಿದಾರನಿದ್ದು, ಆತ ಅಸದ್ ಇರುವಿಕೆಯ ಬಗ್ಗೆ ತಿಳಿಸಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

ಎನ್‌ಕೌಂಟರ್ ಬಗ್ಗೆ ವಿವರಗಳನ್ನು ಹಂಚಿಕೊಂಡ ಪೊಲೀಸರು, ಇಬ್ಬರು ಡಿಎಸ್‌ಪಿ ಶ್ರೇಣಿಯ ಅಧಿಕಾರಿಗಳ ನೇತೃತ್ವದ 12 ತಂಡವು ಕಾರ್ಯಾಚರಣೆ ನಡೆಸಿದೆ. ಝಾನ್ಸಿಯ ಬಬಿನಾ ರಸ್ತೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಒಟ್ಟು 42 ಸುತ್ತು ಗುಂಡು ಹಾರಿಸಲಾಗಿತ್ತು ಎಂದು ಹೇಳಿದ್ದಾರೆ. ಅದೇ ಹತ್ಯೆ ಪ್ರಕರಣದಲ್ಲಿ ಅತೀಕ್ ಅಹ್ಮದ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ದಿನವೇ ಎನ್‌ಕೌಂಟರ್ ಹತ್ಯೆಗಳು ನಡೆದಿವೆ.
ಉಮೇಶ ಪಾಲ್ ಎಂಬ ವಕೀಲರು 2005ರಲ್ಲಿ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಸಾಕ್ಷಿಯಾಗಿದ್ದರು. ಫೆಬ್ರವರಿ 24 ರಂದು, ಪ್ರಯಾಗ್‌ರಾಜ್‌ನಲ್ಲಿರುವ ಅವರ ಮನೆಯ ಹೊರಗೆ ಹಗಲು ದಾಳಿಯಲ್ಲಿ ಅವರನ್ನು ಗುಂಡಿಕ್ಕಿ ಕೊಲ್ಲಲಾಯಿತು. ಅವರನ್ನು ರಕ್ಷಣೆ ಮಾಡಲು ನೇಮಿಸಿದ್ದ ಭದ್ರತಾ ಸಿಬ್ಬಂದಿಯೂ ಮೃತಪಟ್ಟಿದ್ದಾರೆ. .

ಉಮೇಶ್ ಪಾಲ್ ಅವರ ಹತ್ಯೆಯ ನಂತರಗ್ಯಾಂಗ್‌ಸ್ಟರ್‌-ರಾಜಕಾರಣಿ ಅತಿಕ್ ಅಹ್ಮದ್ ವಿರುದ್ಧ 100 ಕ್ಕೂ ಹೆಚ್ಚು ಪ್ರಕರಣಗಳು ಗಮನ ಸೆಳೆಯಿತು. ಸಮಾಜವಾದಿ ಪಕ್ಷದ ಮಾಜಿ ಸಂಸದನಾಗಿದ್ದ ಆತ ಕಳೆದ ತಿಂಗಳು ಅಪಹರಣ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ. ಈ ಪ್ರಕರಣವು 2006 ರಲ್ಲಿ ಉಮೇಶ್ ಪಾಲ್ ಅವರ ಅಪಹರಣಕ್ಕೆ ಸಂಬಂಧಿಸಿದೆ. 17 ವರ್ಷಗಳ ಹಿಂದೆ ಉಮೇಶ್ ಪಾಲ್ ಅವರು ಅಂತಿಮವಾಗಿ ಕೊಲೆಯಾದರು.
ಜೈಲಿನಲ್ಲಿದ್ದಾಗ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಅಪಹರಣದ ಯೋಜನೆ ರೂಪಿಸಿದ ಆರೋಪದ ನಂತರ ದರೋಡೆಕೋರನನ್ನು ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಗುಜರಾತ್‌ನ ಜೈಲಿಗೆ ಸ್ಥಳಾಂತರಿಸಲಾಯಿತು. ಆತ ಜೂನ್ 2019 ರಿಂದ ಸಾಬರಮತಿ ಕೇಂದ್ರ ಕಾರಾಗೃಹದಲ್ಲಿದ್ದಾನೆ.
ಇಂದಿನ ಎನ್‌ಕೌಂಟರ್ ಸೇರಿದಂತೆ ಉಮೇಶ್ ಪಾಲ್ ಹತ್ಯೆಯಲ್ಲಿ ಭಾಗಿಯಾಗಿದ್ದ ನಾಲ್ವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಗುಂಡಿನ ದಾಳಿಯ ವೇಳೆ ಬಾಂಬ್ ಎಸೆದ ಗುಡ್ಡು ಮತ್ತು ಮತ್ತೊಬ್ಬ ಶೂಟರ್ ಸಬೀರ್‌ಗಾಗಿ ಪೊಲೀಸರು ಇನ್ನೂ ಹುಡುಕುತ್ತಿದ್ದಾರೆ. ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪತ್ನಿ ಶಾಯಿಸ್ತಾ ಕೂಡ ಪರಾರಿಯಾಗಿದ್ದಾಳೆ.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement