ಮತ್ತೆ ಜೆಡಿಎಸ್‌ಗೆ ಮರಳಿದ ವೈ.ಎಸ್.ವಿ. ದತ್ತ : ಕಡೂರಿನಿಂದ ಸ್ಪರ್ಧೆ ಫಿಕ್ಸ್‌

posted in: ರಾಜ್ಯ | 0

ಚಿಕ್ಕಮಗಳೂರು : ಎರಡು ತಿಂಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರಿದ್ದ ಮಾಜಿ‌ ಶಾಸಕ ವೈ.ಎಸ್.ವಿ. ದತ್ತ ಅವರು ಈಗ ಮರಳಿ ಜೆಡಿಎಸ್‌ಗೆ ಬಂದಿದ್ದಾರೆ.
ಕಾಂಗ್ರೆಸ್ ನಿಂದ ಕಡೂರು ಕ್ಷೇತ್ರದಿಂದ ಸ್ಪರ್ಧೆ ನಡೆಸುವ ಇಂಗಿತದಿಂದ ಎರಡು ತಿಂಗಳ ಹಿಂದೆ ದತ್ತ ಅವರು ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದರು.
ಆದರೆ ಕಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದ ದತ್ತ ಅವರು ಬುಧವಾರ ದೇವೇ ಗೌಡ ಅವರನ್ನು ಭೇಟಿ ಮಾಡಿದ್ದರು. ಇದರ ಬೆನ್ನಲ್ಲೇ ಇಂದು, ಗುರುವಾರ ದತ್ತ ಅವರ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದಾರೆ.
ಇಂದು, ಗುರುವಾರ ಕಡೂರು ತಾಲೂಕಿನ ಯಗಟಿಯ ಮನೆಗೆ ಭೇಟಿ ನೀಡಿದ ರೇವಣ್ಣ ಹಾಗೂ ಪುತ್ರ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ ಬಳಿಕ ಜೆಡಿಎಸ್ ಸೇರುವುದಾಗಿ ಹೇಳಿದ್ದು, ಕಡೂರಿನಿಂದ ಸ್ಪರ್ಧೆ ಮಾಡುವುದು ಬಹುತೇಕ ಪಕ್ಕಾ ಆಗಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಭೇಟಿ ನಂತರ ರೇವಣ್ಣ, ವೈವಿಎಸ್‌ ದತ್ತ ಬಳಿ ಇರುವುದು ಒಂದು ಪಂಚೆ, ಒಂದು ಶರ್ಟ್ ಅಷ್ಟೇ. ನಾನು ಸಚಿವನಾಗಿದ್ದಾಗ ಕಾರು ಕೊಡಿಸುತ್ತೇನೆ ಎಂದಿದ್ದೆ, ಆದರೆ, ಬೇಡ ಸರ್ ನನಗೆ ಆಟೋ ಸಾಕು ಎಂದು ಹೇಳಿದ್ದರು ಎಂದರು.
ಏಪ್ರಿಲ್‌ 18ರಂದು ದತ್ತ ಅವರು ನಾಪಪತ್ರ ಸಲ್ಲಿಕೆ ಮಾಡಲಿದ್ದಾರೆ. ಅಂದು ದೇವೆಗೌಡರು ಬರುತ್ತಾರೆ, ನಾನು ಬದುಕಿರುವವರೆಗೆ ದತ್ತನ ಕೈ ಬಿಡಬಾರದು ಎಂದು ಹೇಳಿದ್ದಾರೆ. ನೀವು ಬೇರೆ ಯೋಚನೆ ಮಾಡಬೇಡಿ, ದೇವೇಗೌಡರ ಮಾತನ್ನು ನಾನು, ದತ್ತ, ನೀವು ಎಲ್ಲಾ ಪಾಲಿಸಬೇಕು. ದತ್ತ ಅವರನ್ನು ಶಾಸಕರನ್ನಾಗಿ ಮಾಡಬೇಕೆಂದು ದೇವೇಗೌಡರು ಹೇಳಿದ್ದಾರೆ. ನಮ್ಮ ಮನೆ ಚುನಾವಣೆ ಎಂಬ ರೀತಿಯಲ್ಲಿ ದತ್ತ ಅವರ ಚುನಾವಣೆ ಮಾಡುತ್ತೇವೆ ಎಂದು ರೇವಣ್ಣ ಹೇಳಿದರು.
ದೇವೇಗೌಡರ ಮಾತಿಗೆ ಬೆಲೆ ಕೊಡ್ತೇನೆ….
ಪಕ್ಷೇತರವಾಗಿ ಸ್ಪರ್ಧಿಸುವುದು ಬೇಡ ಎಂದು ದೇವೇಗೌಡರು ಹೇಳಿದ್ದಾರೆ. ಅವರ ಮಾತಿಗೆ ಬೆಲೆ ಕೊಡುತ್ತೇನೆ ಎಂದು ದತ್ತ ಹೇಳಿದ್ದಾರೆ. ಬೆಂಬಲಿಗರು ಸೇರಿ ಎಲ್ಲರ ಸಮ್ಮತಿಯೊಂದಿಗೆ ಜೆಡಿಎಸ್​ ಸೇರಿದ್ದು, ಏಪ್ರಿಲ್‌ 18ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ದತ್ತ ಹೇಳಿದ್ದಾರೆ.
ಕಡೂರು ಕ್ಷೇತ್ರದ ಜೆಡಿಎಸ್​ ಟಿಕೆಟ್ ಅನ್ನು ಧನಂಜಯ್ ಅವರಿಗೆ ಘೋಷಣೆಯಾಗಿತ್ತು. ಆದರೆ ದತ್ತ ಅವರು ಮತ್ತೆ ಜೆಡಿಎಸ್ ಸೇರಿರುವುದರಿಂದ, ಧನಂಜಯ್ ಕಣದಿಂದ ಹಿಂದೆ ಸರಿಯಬೇಕಿದೆ. ಹಾಗೂ ಅವರು ಪಕ್ಷದ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವುದಾಗಿ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement