ಪ್ರಧಾನಿ ಮೋದಿಜಿ, ನಾವು ಕೊಳಕು ನೆಲದಲ್ಲಿ ಕುಳಿತುಕೊಳ್ಳಬೇಕು, ನಮಗೆ ಉತ್ತಮ ಶಾಲೆ ನಿರ್ಮಿಸಿಕೊಡಿ’: ಲಕ್ಷಾಂತರ ಜನರ ಹೃದಯ ಗೆದ್ದ ಪುಟ್ಟ ಬಾಲಕಿಯ ಕಳಕಳಿಯ ಮನವಿ | ವೀಕ್ಷಿಸಿ

ಕಥುವಾ (ಜಮ್ಮು ಮತ್ತು ಕಾಶ್ಮೀರ): ಪುಟ್ಟ ಬಾಲಕಿಯೊಬ್ಬಳು ತನ್ನ ಶಾಲೆಯಲ್ಲಿ ಅಸ್ವಚ್ಛ, ಧೂಳಿನ ನೆಲದ ಮೇಲೆ ತನ್ನ ಸ್ನೇಹಿತರೊಂದಿಗೆ, ತಾನು ಶಾಲೆಯಲ್ಲಿ ಕುಳಿತುಕೊಳ್ಳಬೇಕಾಗಿದ್ದು, ಇದರಿಂದ ತಾನು ಸಂತೋಷವಾಗಿಲ್ಲ ಹೇಳಿದ್ದಾಳೆ ಮತ್ತು ಪ್ರಧಾನಿ ಮೋದಿಯವರು ಈ ಬಗ್ಗೆ ಏನಾದರೂ ಮಾಡಬೇಕೆಂದು ಅವಳು ಬಯಸಿದ್ದಾಳೆ.
ಫೇಸ್‌ಬುಕ್‌ನಲ್ಲಿ ಈಗ ವೈರಲ್ ಆಗಿರುವ ವೀಡಿಯೊದಲ್ಲಿ, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಲೋಹೈ-ಮಲ್ಹಾರ್ ಗ್ರಾಮದ ಪುಟ್ಟ ಬಾಲಕಿ ಸೀರತ್‌ ನಾಜ್‌ (Seerat Naaz) ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಮನವಿ ಮಾಡಿದ್ದಾಳೆ – “ಮೋದಿ-ಜಿ, ಏಕ್ ಅಚ್ಛಿ ಸಿ ಸ್ಕೂಲ್ ಬನ್ವಾ ದೋ ನಾ (ದಯವಿಟ್ಟು ಮೋದಿಜಿ, ನಮಗಾಗಿ ಉತ್ತಮ ಶಾಲೆಯನ್ನು ನಿರ್ಮಿಸಿ) ಎಂದು ಪುಟ್ಟ ಬಾಲಕಿ ಮನವಿ ಮಾಡಿದ್ದಾಳೆ.
ಜಮ್ಮು ಮತ್ತು ಕಾಶ್ಮೀರದ ‘ಮಾರ್ಮಿಕ್ ನ್ಯೂಸ್’ ಹೆಸರಿನ ಪುಟದಿಂದ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿರುವ ವೀಡಿಯೊ ಈಗ ಸುಮಾರು 20 ವೀಕ್ಷಣೆಗಳನ್ನು ಪಡೆದುಕೊಂಡಿದೆ. ಈ ಪುಟ್ಟ ಶಾಲಾ ವಿದ್ಯಾರ್ಥಿನಿ ತನ್ನನ್ನು ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಎಂದು ಪರಿಚಯಿಸಿಕೊಳ್ಳುವ ಮೂಲಕ 5 ನಿಮಿಷಗಳಿಗಿಂತ ಕಡಿಮೆ ಅವಧಿಯ ವೀಡಿಯೊದಲ್ಲಿ ತನ್ನ ಶಾಲೆಯನ್ನು ಸುಂದರವಾಗಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾಳೆ.
ವೀಡಿಯೊದಲ್ಲಿ ಅವಳು ತನ್ನ ತನ್ನ ಶಾಲೆಯ ಕಾಂಪೌಂಡ್‌ನಲ್ಲಿ ನಡೆಯುತ್ತಾಳೆ, ‘ಮೋದಿ ಅವರಿಗೆ ತನ್ನ ಶಾಲೆಯಲ್ಲಿ ಕೊರತೆಯಿರುವ ಎಲ್ಲದರ ಬಗ್ಗೆ ವಿವರಿಸಿದ್ದಾಳೆ ಮತ್ತು ಅದನ್ನು ಉತ್ತಮಗೊಳಿಸಲು ಅಧಿಕಾರಿಗಳು ಏನು ಮಾಡಬಹುದು ಎಂದು ಅವಳು ತಾನು ಭಾವಿಸಿದ್ದನ್ನು ಹೇಳಿದ್ದಾಳೆ.

“ಮೋದಿಜೀ, ಮುಝೆ ನಾ ಆಪ್ ಸೆ ಏಕ್ ಬಾತ್ ಕೆಹನಿ ಹೈ (ಮೋದಿಜೀ, ನಾನು ನಿಮಗೆ ಹೇಳಲು ಒಂದು ವಿಷಯವಿದೆ) ಎಂದು ಬಾಲಕಿ ಹೇಳುತ್ತಾಳೆ. ಬಾಲಕಿ ಸೀರತ್‌ ನಾಜ್‌ ನಂತರ ಫೋನ್ ಕ್ಯಾಮೆರಾದಲ್ಲಿ ಇನ್ನೂ ಮುಚ್ಚದ ಕಾಂಕ್ರೀಟ್ ಮೇಲ್ಮೈ ತೋರಿಸುತ್ತಾಳೆ, ಎರಡು ಮುಚ್ಚಿದ ಬಾಗಿಲುಗಳ ಮುಂದಿನ ಭಾಗ ತೋರಿಸಿ ಅವಳು ಇದು “ಪ್ರಾಂಶುಪಾಲರ ಕಚೇರಿ ಮತ್ತು ಸಿಬ್ಬಂದಿ ಕೊಠಡಿ” ಎಂದು ತೋರಿಸುತ್ತಾಳೆ.
“ದೇಖೋ ಹುಮಾರಾ ಫರ್ಶ್ ಕಿತ್ನಾ ಗಂಧಾ ಹೋ ಚುಕಾ ಹೈ. ಹಮೇ ಯಹಾಂ ನೀಚೆ ಬಿಠಾತೇ ಹೈ (ನೆಲ ಎಷ್ಟು ಕೊಳಕಾಗಿದೆ ನೋಡಿ. ನಮ್ಮನ್ನು ಇಲ್ಲಿ ಕೂರಿಸುತ್ತಾರೆ) ಎಂದು ಬಾಲಕಿ ಹೇಳುತ್ತಾಳೆ. “ಚಲೋ ಮೇ ಆಪ್ ಕೊ ಬಿಲ್ಡಿಂಗ್ ದಿಖಾತಿ ಹೂಂ ಅಪನಿ ಸ್ಕೂಲ್ ಕಿ (ನಮ್ಮ ಶಾಲೆ ಇರುವ ದೊಡ್ಡ ಕಟ್ಟಡವನ್ನು ನಾನು ನಿಮಗೆ ತೋರಿಸುತ್ತೇನೆ)” ಎಂದು ಹೇಳುವ ಮೂಲಕ ಬಾಲಕಿ ನಂತರ ಶಾಲಾ ಕಟ್ಟಡವನ್ನು ವರ್ಚುವಲ್‌ ನಲ್ಲಿ ತೋರಿಸಿ ಪ್ರಧಾನಿ ಮೋದಿ ಉದ್ದೇಶಿಸಿ ಹೇಳುತ್ತಾಳೆ.
ಅವಳು ಮುಂದೆ ನಡೆದ ನಂತರ ಅಪೂರ್ಣ ಕಟ್ಟಡವು ಗೋಚರಿಸುತ್ತದೆ. ಯೇ ದೇಖೋ, ಪಿಚ್ಲೇ 5 ಸಾಲೋನ್ ಸೆ, ದೇಖೋ ಕಿತ್ನಿ ಗಂಧಿ ಬಿಲ್ಡಿಂಗ್ ಹೈ ಯಹಾನ್ ಪೇ. ಚಲೋ ಮೇ ಆಪ್ ಕೋ ಅಂದರ್ ಸೇ ದಿಖಾತಿ ಹೂಂ (ಕಳೆದ 5 ವರ್ಷಗಳಿಂದ ಕಟ್ಟಡ ಎಷ್ಟು ಅಶುದ್ಧವಾಗಿದೆ ನೋಡಿ. ಕಟ್ಟಡದ ಒಳಭಾಗವನ್ನು ನಾನು ನಿಮಗೆ ತೋರಿಸುತ್ತೇನೆ) ಎಂದು ಅವಳು ಶಾಲೆಯ ಒಳಭಾಗವನ್ನು ತೋರಿಸುತ್ತಾಳೆ. ವಿದ್ಯಾರ್ಥಿಗಳು ತಮ್ಮ ತರಗತಿಗಳಿಗೆ ಕುಳಿತುಕೊಳ್ಳುವ ಸ್ಥಳವನ್ನು ತೋರಿಸಿದ ನಂತರ, ಅವಳು ಮತ್ತೊಮ್ಮೆ ನೆಲ ಮತ್ತು ಅದರ ಮೇಲೆ ಗೋಚರಿಸುವ ಧೂಳಿನ ಪದರವನ್ನು ತೋರಿಸುತ್ತಾಳೆ.

ಪ್ರಮುಖ ಸುದ್ದಿ :-   ನಿಮ್ಮವನಾಗಿದ್ದೆ...ಯಾವಾಗಲೂ ನಿಮ್ಮವನಾಗಿಯೇ ಇರ್ತೇನೆ..: ಬಿಜೆಪಿ ಟಿಕೆಟ್ ನಿರಾಕರಣೆ ನಂತ್ರ ಪಿಲಿಭಿತ್‌ ಜನತೆಗೆ ʼಹೃದಯಸ್ಪರ್ಶಿʼ ಪತ್ರ ಬರೆದ ವರುಣ ಗಾಂಧಿ

“ಪ್ಲೀಸ್‌, ಆಪ್ ಸೆ ವಿನಂತಿ ಕರ್ತಿ ಹೂ, ಆಪ್ ಅಚ್ಛಾ ಸಾ ಸ್ಕೂಲ್ ಬನಾ ದೋ. ಹಮೇ ನೀಚೆ ಬೈಠನಾ ಪಡತಾ ಹೈ ಔರ್ ಹಮಾರಿ ಸಮವಸ್ತ್ರ ಗಂಧಿ ಹೋ ಜಾತಿ ಹೈ, ಔರ್ ಫಿರ್ ಹಮೇ ಮಮ್ಮಾ ಮಾರ್ತಿ ಹೈ. ಹುಮಾರೆ ಪಾಸ್ ಬೆಂಚ್ ಭಿ ನಹೀ ಹೈ (ಉತ್ತಮ ಶಾಲೆ ನಿರ್ಮಿಸಲು ನಾನು ವಿನಂತಿಸುತ್ತೇನೆ, ನಮಗಾಗಿ ಒಂದು ಒಳ್ಳೆಯ ಶಾಲೆ ನಿರ್ಮಿಸಿ. ಪ್ರಸ್ತುತ ನಾವು ನೆಲದ ಮೇಲೆ ಕುಳಿತುಕೊಳ್ಳಬೇಕಾಗಿದೆ, ಇದರಿಂದಾಗಿ ನಮ್ಮ ಸಮವಸ್ತ್ರಗಳು ಕೊಳೆಯಾಗುತ್ತವೆ. ನಮ್ಮ ತಾಯಂದಿರು ಸಮವಸ್ತ್ರವನ್ನು ಕೊಳಕು ಮಾಡಿಕೊಂಡಿದ್ದಕ್ಕಾಗಿ ನಮ್ಮನ್ನು ಹೊಡೆಯುತ್ತಾರೆ. ನಮಗೆ ಕುಳಿತುಕೊಳ್ಳಲು ಬೆಂಚುಗಳಿಲ್ಲ) ಎಂದು ಬಾಲಕಿ ಹೇಳುತ್ತ ಹೋಗುತ್ತಾಳೆ. ನಂತರ ಅವಳು ಮೊದಲ ಮಹಡಿಗೆ ಮೆಟ್ಟಿಲುಗಳ ಮೂಲಕ ಹೋಗಿ ಕ್ಯಾಮರಾವನ್ನು ಕಾರಿಡಾರ್ ಕಡೆಗೆ ಪ್ಯಾನ್ ಮಾಡುತ್ತಾಳೆ, ಅದು ನೆಲ ಅಂತಸ್ತಿನಂತೆಯೇ ಅಶುಚಿಯಾಗಿ ಕಾಣುತ್ತದೆ.
“ಪ್ಲೀಸ್‌ ಮೋದಿ-ಜೀ, ಮೈ ಆಪ್ ಸೆ ವಿನತಿ ಕರ್ತಿ ಹೂಂ ಕಿ ಯೆಹ್ ಸ್ಕೂಲ್‌ ಅಚ್ಚಾ ಸಾ ಬನಾ ದೇ . ಮೇರಿ ಭಿ ಬಾತ್ ಸುನಲೋ (ದಯವಿಟ್ಟು ಮೋದಿ-ಜೀ, ಶಾಲೆಯ ಮೂಲಸೌಕರ್ಯವನ್ನು ಉತ್ತಮಗೊಳಿಸಲು ನಾನು ನಿಮ್ಮನ್ನು ವಿನಂತಿಸುತ್ತಿದ್ದೇನೆ. ದಯವಿಟ್ಟು ನನ್ನ ಮಾತನ್ನು ಕೇಳಿಸಿಕೊಳ್ಳಿ)” ಎಂದು ಬಾಲಕಿ ಮತ್ತೊಮ್ಮ ಪ್ರಧಾನಿ ಮೋದಿಯನ್ನು ವಿನಂತಿಸುತ್ತಾಳೆ. ನಂತರ ಅವಳು ಮೆಟ್ಟಿಲುಗಳ ಕೆಳಗೆ ಸ್ಕಿಪ್ ಮಾಡುತ್ತಾಳೆ ಮತ್ತು ತನ್ನ ಕ್ಯಾಮೆರಾವನ್ನು ಮೇಲ್ಮೈಗೆ ದೃಢವಾಗಿ ನಿರ್ದೇಶಿಸುವುದರೊಂದಿಗೆ ಹೊರಗಿನ ಕಾಂಪೌಂಡ್‌ಗೆ ಮುಂದುವರಿಯುತ್ತಾಳೆ.

ನಂತರ ಅವಳು ಕ್ಯಾಮರಾವನ್ನು “ಶೌಚಾಲಯ”ದ ಕಡೆಗೆ ತಿರುಗಿಸುತ್ತಾಳೆ. “ದೇಖೋ, ಹುಮಾರಾ ಕಿತ್ನಾ ಗಂಧಾ ಟಾಯ್ಲೆಟ್, ಔರ್ ಟೂಟ್ ಗಯಾ ಹೈ (ಶೌಚಾಲಯ ಎಷ್ಟು ಕೊಳಕಾಗಿದೆ ನೋಡಿ – ಮತ್ತು ಒಡೆದು ಹೋಗಿದೆ) ಎಂದು ಹೇಳುತ್ತಾಳೆ.
ನಂತರ ಅವಳು ತೆರೆದ ಪ್ರದೇಶವನ್ನು ತೋರಿಸುತ್ತಾಳೆ, ಅಲ್ಲಿ ಹೊಸ ಶಾಲಾ ಕಟ್ಟಡವು ಬರುತ್ತಿದೆ ಎಂದು ಅವಳು ಹೇಳುತ್ತಾಳೆ.
ಶಾಲೆಯಲ್ಲಿನ ಸೌಕರ್ಯಗಳ ಕೊರತೆಯ ಬಗ್ಗೆ ಪ್ರತ್ಯಕ್ಷ ನೋಟವನ್ನು ನೀಡಿದ ಬಾಲಕಿ, ಶಾಲೆಯಲ್ಲಿ ಮಕ್ಕಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಹೇಳಿದ್ದಾಳೆ ತನ್ನ ಶಾಲೆಯನ್ನು ಸುಂದರವಾಗಿ ನಿರ್ಮಿಸಲು ಮನವಿ ಮಾಡಿದ್ದಾಳೆ.
“ಮೋದಿ-ಜೀ, ಆಪ್ ಪೂರೇ ದೇಶ್ ಕಿ ಸುನತೇ ಹೋ. ಮೇರಿ ಭಿ ಸುನ್ ಲೋ ಔರ್ ಅಚ್ಛಾ ಸಾ ಹುಮಾರಾ ಯೆಹ್ ಸ್ಕೂಲ್ ಬನ್ವಾ ದೋ ಪಲೀಸ್‌ ಅಚ್ಛೆ ಸೇ ಸ್ಕೂಲ್‌ ಬನ್ವಾ ದೋ (ಮೋದಿ-ಜೀ, ನೀವು ಇಡೀ ರಾಷ್ಟ್ರವನ್ನು ಆಲಿಸುತ್ತೀರಿ. ದಯವಿಟ್ಟು ನನ್ನ ಮಾತನ್ನೂ ಆಲಿಸಿ ಮತ್ತು ನಮಗಾಗಿ ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿ) ಎಂದು ಹೇಳತ್ತಾಳೆ. ನೀವು ಒಳ್ಳೆಯ ಶಾಲೆಯನ್ನು ನಿರ್ಮಿಸಿದರೆ ನಾವು ನೆಲದ ಮೇಲೆ ಕುಳಿತುಕೊಳ್ಳಬೇಕಾಗಿಲ್ಲ. ನನ್ನ ಸಮವಸ್ತ್ರ ಕೊಳಕಾಗಿದೆ ಎಂದು ನನ್ನ ತಾಯಿ ನನ್ನನ್ನು ಗದರಿಸುವುದಿಲ್ಲ. ಇದರಿಂದ ನಾವೆಲ್ಲರೂ ಚೆನ್ನಾಗಿ ಓದಬಹುದು. ದಯವಿಟ್ಟು ನಮಗಾಗಿ ಒಂದು ಒಳ್ಳೆಯ ಶಾಲೆಯನ್ನು ನಿರ್ಮಿಸಿ,” ಎಂದು ಬಾಲಕಿ ಮನವಿ ಮಾಡಿದ್ದಾಳೆ.

2.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement