ಕನ್ನಡ ನಟ ಚೇತನ್ ವೀಸಾ ರದ್ದುಗೊಳಿಸಿದ ಕೇಂದ್ರ ಸರ್ಕಾರ

ಬೆಂಗಳೂರು: ಕನ್ನಡ ನಟ ಚೇತನ್ ಅಹಿಂಸಾ ಅವರಿಗೆ ಭಾರತದಲ್ಲಿ ಬಂದು ವಾಸಿಸಲು ನೀಡಲಾಗಿದ್ದ ಭಾರತೀಯ ಸಾಗರೋತ್ತರ ಪೌರತ್ವವನ್ನು (Overseas Citizenship of India – OCI) ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಈ ಕುರಿತು ಏಪ್ರಿಲ್‌ 14ರಂದು (ಶುಕ್ರವಾರ) ಅವರಿಗೆ ವಿದೇಶಿಗರ ಪ್ರಾದೇಶಿಕ ನೋಂದಾವಣಿ ಕಚೇರಿಯಿಂದ (FRRO) ವತಿಯಿಂದ ನೋಟಿಸ್ ಜಾರಿಗೊಳಿಸಲಾಗಿದೆ.
ಏಪ್ರಿಲ್‌ 14ರಂದು, ಚೇತನ್ ಅಹಿಂಸಾ ಅವರಿಗೆ ನೋಟಿಸ್‌ ಬಂದಿದ್ದು, ಅದರಲ್ಲಿ ನಟ ಚೇತನ್ ಅವರ ಒಐಸಿ ರದ್ದುಗೊಳಿಸಿರುವುದನ್ನು ತಿಳಿಸಲಾಗಿದೆ. ಜೊತೆಗೆ, ‘ನಿಮಗೆ ನೀಡಲಾಗಿರುವ ಐಒಸಿ ಕಾರ್ಡನ್ನು ಇನ್ನು 15 ದಿನದಲ್ಲಿ ಕೇಂದ್ರ ಸರ್ಕಾರಕ್ಕೆ ಹಿಂದಿರುಗಿಸಬೇಕು’ ಎಂದು ಸೂಚಿಸಲಾಗಿದೆ.

ಈ ಕುರಿತು ಮಾತನಾಡಿರುವ ನಟ ಚೇತನ್, ನಾನು ಈ ದೇಶದಲ್ಲಿ ಇರಬಾರದು ಎಂಬ ಕಾರಣಕ್ಕೆ ನನ್ನ ವೀಸಾ ರದ್ದುಗೊಳಿಸಲಾಗಿದೆ.. ಆದರೆ, ನಾನು ಅಮೆರಿಕಕ್ಕಾಗೆ ಹೋಗುವುದಿಲ್ಲ. ಇಲ್ಲಿಯೇ ಇರುತ್ತೇನೆ. ನನಗೆ 15 ದಿನಗಳ ಸಮಯ ನೀಡಲಾಗಿದೆ. ಅಷ್ಟರೊಳಗೆ ನ್ಯಾಯಾಲಯದಿಂದ ತಡೆ ತರುತ್ತೇನೆ. ಈ ಕ್ರಮದ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ನಟ ಚೇತನ್‌ ಅವರ ಪೋಷಕರು ಮೂಲತ: ಭಾರತೀಯರಾಗಿದ್ದರೂ ಚೇತನ್‌ ಅಮೆರಿಕದಲ್ಲಿ ಜನಿಸಿದ್ದು, ಅಮೆರಿಕದ ಪೌರತ್ವ ಹೊಂದಿದ್ದಾರೆ. ಸಾಗರೋತ್ತರ ವೀಸಾದ ಅಡಿ ಭಾರತದಲ್ಲಿ ವಾಸವಾಗಿದ್ದರು.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

ಇತ್ತೀಚೆಗಷ್ಟೇ, ಹಿಂದುತ್ವವದ ಬಗ್ಗೆ ಪೋಸ್ಟ್ ಒಂದನ್ನು ಹಾಕಿದ್ದರಿಂದಾಗಿ ಮಾರ್ಚ್‌ 21ರಂದು ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದರು. ಆನಂತರ ಅವರು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಅವರಿಗೆ 2022, ಎಫ್ಆರ್ ಆರ್ ಒ ವತಿಯಿಂದ ನೋಟಿಸ್ ಜಾರಿಯಾಗಿತ್ತು. ಅದರಲ್ಲಿ, ಚೇತನ್ ವಿರುದ್ಧ ಕೇಳಿಬಂದಿರುವ ಕೆಲವು ಆರೋಪಗಳನ್ನು ಉಲ್ಲೇಖಿಸಲಾಗಿತ್ತು. ಅವುಗಳಲ್ಲಿ ಮುಖ್ಯವಾಗಿ, ಚೇತನ್ ಅವರು ನ್ಯಾಯಾಧೀಶರನ್ನು ನಿಂದಿಸಿರುವುದನ್ನು, ಕೆಲವು ಭಾರತ ವಿರೋಧಿ ಹೇಳಿಕೆಗಳನ್ನು ಪೋಸ್ಟ್ ಮಾಡುವುದನ್ನು ಪ್ರಶ್ನಿಸಲಾಗಿತ್ತು ಹಾಗೂ ಆರೋಪಿಗಳಿಗೆ ನಿಗದಿತ ಸಮಯದೊಳಗೆ ಉತ್ತರ ನೀಡಲು ಸೂಚಿಸಿತ್ತು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement