ಮುಖದ ಮೇಲೆ ತ್ರಿವರ್ಣ ಧ್ವಜ ಪೇಂಟ್‌ ಮಾಡಿಕೊಂಡಿದ್ದ ಹುಡುಗಿಗೆ ಅಮೃತಸರ ಗೋಲ್ಡನ್ ಟೆಂಪಲ್ ಪ್ರವೇಶ ನಿರಾಕರಣೆ ಆರೋಪ : ಎಸ್‌ಜಿಪಿಸಿ ಸ್ಪಷ್ಟೀಕರಣ |ವೀಕ್ಷಿಸಿ

ಮುಖಕ್ಕೆ ತ್ರಿವರ್ಣ ಧ್ವಜದ ಬಣ್ಣವನ್ನು ಮೇಂಟ್‌ ಮಾಡಿಕೊಂಡಿದ್ದರಿಂದ ತನಗೆ ಪಂಜಾಬ್‌ನ ಅಮೃತಸರದ ಗೋಲ್ಡನ್ ಟೆಂಪಲ್‌ಗೆ ಪ್ರವೇಶ ನಿರಾಕರಿಸಲಾಗಿದೆ ಎಂದು  ಆರೋಪಿಸಲಾಗಿದೆ.
ಸ್ವತಂತ್ರವಾಗಿ ಪರಿಶೀಲಿಸಲಾಗದ ಘಟನೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪವಿತ್ರ ಸಿಖ್ ದೇಗುಲದ ಕಾವಲುಗಾರನೊಬ್ಬ “ಇದು ಪಂಜಾಬ್” ಎಂದು ಹೇಳುವುದನ್ನು ನೋಡಬಹುದು.
ಅಂತರ್ಜಾಲದಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿರುವ ಕ್ಲಿಪ್‌ನಲ್ಲಿ, ಮಹಿಳೆಯು ಗುರುದ್ವಾರಕ್ಕೆ ಏಕೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಕೇಳಿದಾಗ, ‘ಅವಳ ಮುಖದ ಮೇಲೆ ತ್ರಿವರ್ಣ ಬಣ್ಣವಿದೆ’ ಎಂದು ವ್ಯಕ್ತಿ ಹೇಳಿದರು. ಇದು ಭಾರತದ ಧ್ವಜ ಎಂದು ಮಹಿಳೆ ಹೇಳಿದಾಗ, ಇದು ಪಂಜಾಬ್, ಭಾರತವಲ್ಲ ಎಂದು ಗಾರ್ಡ್‌ ಹೇಳುತ್ತಾನೆ. ನಂತರ ಯುವತಿ “ಇದು ಭಾರತವಲ್ಲವೇ?” ಎಂದು ಕೇಳುತ್ತಾಳೆ. ಸ್ವಲ್ಪಮಟ್ಟಿನ ವಾಗ್ವಾದ ನಡೆಯುತ್ತದೆ.

ಗೋಲ್ಡನ್ ಟೆಂಪಲ್ ಅನ್ನು ನಿರ್ವಹಿಸುವ ಶಿರೋಮಣಿ ಗುರುದ್ವಾರ ಪರ್ಬಂಧಕ್ ಸಮಿತಿಯು ಸಿಬ್ಬಂದಿ ದುರ್ವರ್ತನೆಗೆ ಕ್ಷಮೆಯಾಚಿಸಿದೆ. ಆದರೆ ಮಹಿಳೆಯ ಮುಖದ ಮೇಲೆ ಅಶೋಕ ಚಕ್ರವನ್ನು ಹೊಂದಿಲ್ಲದ ಕಾರಣ ಅದು ಭಾರತೀಯ ಚಿತ್ರವಲ್ಲ ಎಂದು ಸಹ ಸ್ಪಷ್ಟನೆ ನೀಡಿದೆ.

“ಇದು ಸಿಖ್ ದೇಗುಲವಾಗಿದೆ. ಪ್ರತಿಯೊಂದು ಧಾರ್ಮಿಕ ಸ್ಥಳವು ತನ್ನದೇ ಆದ ಅಲಂಕಾರವನ್ನು ಹೊಂದಿದೆ … ನಾವು ಎಲ್ಲರಿಗೂ ಸ್ವಾಗತಿಸುತ್ತೇವೆ … ಅಧಿಕಾರಿಯೊಬ್ಬರು ಅನುಚಿತವಾಗಿ ವರ್ತಿಸಿದರೆ ನಾವು ಕ್ಷಮೆಯಾಚಿಸುತ್ತೇವೆ …ಆದರೆ ಅವಳ ಮುಖದಲ್ಲಿರುವ ಧ್ವಜವು ನಮ್ಮ ರಾಷ್ಟ್ರಧ್ವಜವಾಗಿರಲಿಲ್ಲ ಏಕೆಂದರೆ ಅದು ಅಶೋಕ ಚಕ್ರವನ್ನು ಹೊಂದಿರಲಿಲ್ಲ. ಇದು ರಾಜಕೀಯ ಧ್ವಜವಾಗಿರಬಹುದು” ಎಂದು ಎಸ್‌ಜಿಪಿಸಿಯ ಪ್ರಧಾನ ಕಾರ್ಯದರ್ಶಿ ಗುರ್ಚರಣ್ ಸಿಂಗ್ ಗ್ರೆವಾಲ್ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪ್ರತಿವರ್ಷ ಜೂನ್ 25ರಂದು ʼಸಂವಿಧಾನ ಹತ್ಯಾ ದಿವಸʼ ಆಚರಣೆ; ಅಮಿತ್ ಶಾ ಘೋಷಣೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement