ತುಮಕೂರು ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ

ತುಮಕೂರು : ತುಮಕೂರಿನ ಸಿದ್ದಗಂಗಾ ಮಠಕ್ಕೆ ಸಿದ್ದಗಂಗಾ ಪಾಲಿಟೆಕ್ನಿಕ್ ಉಪನ್ಯಾಸಕರಾಗಿರುವ ಮನೋಜಕುಮಾರ ಅವರನ್ನು ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿಯನ್ನಾಗಿ ಮಠದ ಸರ್ವಾಧ್ಯಕ್ಷ ಸಿದ್ದಲಿಂಗಸ್ವಾಮಿ ಅವರು ನೇಮಕ ಮಾಡಿದ್ದಾರೆ. ಅವರನ್ನು ಏ.23ರ ಬಸವ ಜಯಂತಿಯಂದು ನಿರಂಜನ ಪಟ್ಟಾಧಿಕಾರ ಮತ್ತು ಉತ್ತರಾಧಿಕಾರಿಯಾಗಿ ನೇಮಕ ಮಾಡಲಾಗುತ್ತದೆ.
ಮನೋಜಕುಮಾರ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿಯವರಾಗಿದ್ದಾರೆ. ಅವರು ಬಿಎ, ಬಿಇಡಿ, ಎಂಎಸ್‌ಸಿ, ಎಂ.ಎ ಪೂರ್ಣಗೊಳಿಸಿದ್ದು, ಸಿದ್ದಗಂಗಾ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಬಸವ ಜಯಂತಿಯಂದು ಮಠದಲ್ಲಿ ನಿರಂಜನ ಪಟ್ಟಾಧಿಕಾರಿ ಮತ್ತು ಉತ್ತರಾಧಿಕಾರಿ ನೇಮಕ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಲಾಗಿದೆ. ಮಾಗಡಿಯ ಕುಂಚುಗಲ್ ಬಂಡೆ ಮಠಕ್ಕೆ ಹರ್ಷ ಕೆ.ಎಂ ಹಾಗೂ ದೇವನಹಳ್ಳಿಯ ಬಸವಕಲ್ಯಾಣ ಮಠಕ್ಕೆ ಗೌರೀಶಕುಮಾರ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೀಡಿಯೊ...| ಅವನ ಬಗ್ಗೆ ಯೋಚನೆ ಮಾಡ್ತೀಯಲ್ಲ, 1.5 ಕೋಟಿ ರೂ. ಗಾಡಿ ಡ್ಯಾಮೇಜ್ ಯಾರ್ ಕೊಡ್ತಾರೆ : ಕಾರಿಗೆ ಗುದ್ದಿದ ಬೈಕ್‌ ಸವಾರನ ಮೇಲೆ ಒದರಾಡಿದ ಭವಾನಿ ರೇವಣ್ಣ

ನಿಮ್ಮ ಕಾಮೆಂಟ್ ಬರೆಯಿರಿ

advertisement