ಡಾ. ಬಾಳಿಗಾ ವಾಣಿಜ್ಯ ಕಾಲೇಜ್‌ ದ್ವಿತೀಯ ಪಿಯುಸಿ ಫಲಿತಾಂಶ: ಶಿವಾನಿ ವೆರ್ಣೇಕರ ಕಾಲೇಜಿಗೆ ಪ್ರಥಮ

ಕುಮಟಾ: ಡಾ. ಎ. ವಿ. ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಶಿವಾನಿ ಬಾಲಕೃಷ್ಣ ವೆರ್ಣೇಕರ ಒಟ್ಟು 588 (ಶೇ.98%) ಅಂಕಗಳಿಸಿ ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಫಲಿತಾಂಶ 86% ಆಗಿದೆ.
ಕಾಲೇಜಿಗೆ ಕ್ರಮವಾಗಿ ಈ ಮೂವರು ವಿದ್ಯಾಗಳು ಸ್ಥಾನ ಪಡೆದಿದ್ದಾರೆ.
1.ಶಿವಾನಿ ಬಾಲಕೃಷ್ಣ ವೆರ್ಣೇಕರ- 588/600 – (98%)
2.ಚರಣ ವಿನಾಯಕ ಶೆಟ್ಟಿ-575/600 – (95.83%)
3.ಮುಸ್ಫಿರಾ ಇಸ್ಮಾಯಿಲ್‌ ಬಬ್ಲು -573/600 – (95.05%)
ಶಿವಾನಿ ವೆರ್ಣೇಕರ ಅವರು ಲೆಕ್ಕಶಾಸ್ತ್ರ, ಸಂಖ್ಯಾಶಾಸ್ತ್ರ, ಹಾಗೂ ವ್ಯವಹಾರ ಅಧ್ಯಯನದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ವಿದ್ಯಾರ್ಥಿ ಚರಣ ಶೆಟ್ಟಿ ಒಟ್ಟು 575 (ಶೇ. 95.83%) ಅಂಕ ಪಡೆದಿದ್ದು ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿದ್ಯಾರ್ಥಿನಿ ಮುಸ್ಫಿರಾ ಇಸ್ಮಾಯಿಲ್‌ ಬಬ್ಲು ಒಟ್ಟು 573 (ಶೇ. 95.05%) ಅಂಕಪಡೆದು ತೃತೀಯ ಸ್ಥಾನ ಪಡೆದಿದ್ದಾರೆ. ಮುಸ್ಫಿರಾ ಕಂಪ್ಯೂಟರ್‌ ಸೈನ್ಸ್‌ನಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ.
ಕಾಲೇಜಿನ ಒಟ್ಟು ಫಲಿತಾಂಶದಲ್ಲಿ 17ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 34 ವಿದ್ಯಾರ್ಥಿಗಳು ಪ್ರಥಮ ವರ್ಗದಲ್ಲಿ ಉತ್ತೀರ್ಣರಾಗಿದ್ದಾರೆ. ಅರ್ಪಿತಾ ಗೋವಿಂದರಾಜ ಶೆಟ್ಟಿ ಅರ್ಥಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ, ವೇದಾ ಅಂಬಿಗ ಮತ್ತು ವಿಜಯಕುಮಾರ ಸಂಸ್ಕೃತದಲ್ಲಿ 100ಕ್ಕೆ 100 ಅಂಕಗಳಿಸಿದ್ದಾರೆ. ದೀಪಾಶ್ರೀ ವ್ಯವಹಾರ ಅಧ್ಯಯನದಲ್ಲಿ 100ಕ್ಕೆ 100 ಅಂಕಪಡೆದಿದ್ದಾರೆ.
ಕಾಲೇಜಿಗೆ ಕೀರ್ತಿ ತಂದ ಈ ಎಲ್ಲ ವಿದ್ಯಾರ್ಥಿಗಳನ್ನು ಪ್ರಾಚಾರ್ಯರು ಸಿಬ್ಬಂದಿವರ್ಗ, ಕೆನರಾ ಕಾಲೇಜು ಸೊಸೈಟಿಯ ಅಧ್ಯಕ್ಷರು, ಆಡಳಿತ ಮಂಡಳಿಯ ಸದಸ್ಯರು, ಹಾಗೂ ಹಳೆ ವಿದ್ಯಾರ್ಥಿ ಸಂಘದವರು ಅಭಿನಂದಿಸದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

4.3 / 5. ಒಟ್ಟು ವೋಟುಗಳು 4

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement