ದ್ವಿತೀಯ ಪಿಯುಸಿ ಫಲಿತಾಂಶ: ಕುಮಟಾದ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜ್‌ ಅತ್ಯುತ್ತಮ ಸಾಧನೆ

ಕುಮಟಾ; ಇಲ್ಲಿನ ನೆಲ್ಲಿಕೇರಿಯ ಹನುಮಂತ ಬೆಣ್ಣೆ ಸರ್ಕಾರಿ ಪದವಿ ಪೂರ್ವ ಕಾಲೇಜು ಈ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ.
ಕಾಲೇಜಿನಲ್ಲಿ ಒಟ್ಟು 845 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತುಕೊಂಡಿದ್ದು 779 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಕಾಲೇಜಿನ ಒಟ್ಟಾರೆ ಫಲಿತಾಂಶ ಶೇಕಡಾ 92.24 ಆಗಿರುತ್ತದೆ. 127 ವಿದ್ಯಾರ್ಥಿಗಳು – ಡಿಸ್ಟಿಂಕ್ಷನ್ (ಉನ್ನತ ಶ್ರೇಣಿ) ಹಾಗೂ 377 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಾಲೇಜಿನ ಟಾಪರ್ ಗಳು…
ವಿಜ್ಞಾನ ವಿಭಾಗ 
ಪ್ರಥಮ – ಸಹನಾ ಸಂಜು ಮಡಿವಾಳ – 585/600 (97.5%)
ದ್ವಿತೀಯ – ಕಾರ್ತಿಕ್ ಮಹೇಶ ಕಾಮತ್- 581/600 (96.83%) ಹಾಗೂ ಜ್ಯೋತಿ ಲಿಂಗಪ್ಪ ಪಟಗಾರ – 581/600 (96.83%)
ತೃತೀಯ -ಮಾಯಾ ಪಟಗಾರ – 578/600 (96.33%)
ವಾಣಿಜ್ಯ ವಿಭಾಗ
ಪ್ರಥಮ – ಜೇಷ್ಠಿತಾ ಹರಿಕಾಂತ – 570/600 (95%)
ದ್ವಿತೀಯ – ಜ್ಯೋತಿ .ಎಸ್. ಗೌಡ – 568/600 (94.66%)
ತೃತೀಯ – ನಾಗರತ್ನ .ಎನ್. ನಾಯ್ಕ-565/600 (94.16%)
ಕಲಾ ವಿಭಾಗ
ಪ್ರಥಮ – ರಮ್ಯಾ ದಿನಕರ ಶೆಟ್ಟಿ – 569/600 (94.83%)
ದ್ವಿತೀಯ – ಶುಭಾ ವಿಷ್ಣು ನಾಯ್ಕ – 567/600 (94.5%) ಹಾಗೂ ಯೋಗಿತಾ ವಿಷ್ಣು ನಾಯ್ಕ -567/600 (94.5%)
ತೃತೀಯ – ಗೀತಾ ವೆಂಕಟೇಶ ನಾಯ್ಕ 565/600 (94.16%) ಅಂಕ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 250 ವಿದ್ಯಾರ್ಥಿಗಳಲ್ಲಿ 244 ವಿದ್ಯಾರ್ಥಿಗಳು ಉತ್ತೀರ್ಣರಾಗಿ 97.65 ಫಲಿತಾಂಶ ಬಂದಿದೆ. 77 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 152 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 359 ವಿದ್ಯಾರ್ಥಿಗಳಲ್ಲಿ 339 ವಿದ್ಯಾರ್ಥಿಗಳು ಉತ್ತೀರ್ಣರಾಗಿ 95% ಫಲಿತಾಂಶ ಬಂದಿದೆ. 41 ವಿದ್ಯಾರ್ಥಿ ಡಿಸ್ಟಿಂಕ್ಷನ್ ಹಾಗೂ 182 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಕಲಾ ವಿಭಾಗದಲ್ಲಿ 236 ವಿದ್ಯಾರ್ಥಿಗಳಲ್ಲಿ 196 ವಿದ್ಯಾರ್ಥಿಗಳು ಉತ್ತೀರ್ಣರಾಗಿ 83.5 ಫಲಿತಾಂಶ ಬಂದಿದೆ. 09 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 43 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಗಣಿತದಲ್ಲಿ 01, ಕಂಪ್ಯೂಟರ್‌ ಸೈನ್ಸ್‌-09, ಸಮಾಜ ಶಾಸ್ತ್ರ- 01, ಇತಿಹಾಸ- 01, ಸಂಸ್ಕೃತದಲ್ಲಿ 10 ವಿದ್ಯಾರ್ಥಿಗಳು 100ಕ್ಕೆ ನೂರು ಅಂಕ ಪಡೆದಿದ್ದಾರೆ.
ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಪ್ರಾಚಾರ್ಯರಾದ  ಸತೀಶ ಬಿ. ನಾಯ್ಕ ಮತ್ತು ಉಪನ್ಯಾಸಕರು ಅಭಿನಂದಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಮಟಾ : ನಿವೃತ್ತ ಮುಖ್ಯಾಧ್ಯಾಪಕ ಹೊಲನಗದ್ದೆ ಆರ್.ಎನ್.ಹೆಗಡೆ ನಿಧನ

2.4 / 5. 7

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement