ದ್ವಿತೀಯ ಪಿಯುಸಿ ಪರೀಕ್ಷೆ : ಧಾರವಾಡದ ಅರ್ಜುನ ಕಾಲೇಜು ನೂರಕ್ಕೆ ೧೦೦ ಫಲಿತಾಂಶ

ಧಾರವಾಡ: ಧಾರವಾಡದ ಅರ್ಜುನ(ಶಾಂತಿನಿಕೇತನ) ವಿಜ್ಞಾನ ಪದವಿ-ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದು, ಕಾಲೇಜು ನೂರಕ್ಕೆ ೧೦೦ ಫಲಿತಾಂಶ ಪಡೆದಿದೆ.
ವಿದ್ಯಾರ್ಥಿನಿ ಪ್ರಜಾ ನಾಯಕ ಅವರು ೬೦೦ ಕ್ಕೆ ೫೭೬ ಅಂಕಗಳನ್ನು ಪಡೆದು ಕಾಲೇಜಿಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಸಾತ್ವಿಕ ಹೆಗಡೆ (೫೭೫ ಅಂಕಗಳು), ಕಿರಣಕುಮಾರ ಮಡಿವಾಳ (೫೭೦ ಅಂಕಗಳು), ಸವಿತ್ರು ಗದಗಕರ (೫೬೮ ಅಂಕಗಳು), ರಾಜನ್ ಶೆಟ್ಟಿ (೫೬೫ ಅಂಕಗಳು), ಸ್ವರೂಪ ನಾಯ್ಕ್ (೫೬೫ ಅಂಕಗಳು), ಸಿದ್ಧಾರ್ಥ ಖನಗನ್ನಿ (೫೬೩ ಅಂಕಗಳು), ಭೂಮಿಕಾ ಶೇಟ್‌ (೫೬೧ ಅಂಕಗಳು), ಧೀಮಂತ ನಾಯ್ಕ್ (೫೫೯ ಅಂಕಗಳು), ಕವನಾ ಗುನಗಾ (೫೫೯ ಅಂಕಗಳು), ಶ್ರೇಯಾ ತೆಗ್ಗಿಹಳ್ಳಿ (೫೫೯ಅಂಕಗಳು), ಮಲ್ಲಿಕಾರ್ಜುನ ಜಿನರಲಿ (೫೫೭ ಅಂಕಗಳು), ಸುಮಂತ ಭಾವಿಕಟ್ಟಿ (೫೫೬ ಅಂಕಗಳು), ಪೂಜಾ ನಾಯ್ಕ್ ಬೆಣ್ಣೆ (೫೫೫ಅಂಕಗಳು), ಸ್ಫೂರ್ತಿ ಎಸ್‌ಎಂಕೆ (೫೫೫ ಅಂಕಗಳು), ಪ್ರಥಮ್ ತಂತ್ರಿ (೫೫೪ ಅಂಕಗಳು), ಸಿದ್ದಬೀರಪ್ಪ ಪೂಜಾರಿ (೫೫೪ ಅಂಕಗಳು), ವೇದಾ ಹೆಗಡೆ (೫೫೦ ಅಂಕಗಳು), ಕೇದಾರ ಹುಕ್ಕೇರಿ (೫೪೯ ಅಂಕಗಳು), ದಿಶಾ ನಾಯ್ಕ್ (೫೪೮ ಅಂಕಗಳು), ಸಂಪ್ರೀತಾ ಭಟ್ (೫೪೮ ಅಂಕಗಳು), ಅನಘಾ ಬೆಳಗಲಿ (೫೪೫ ಅಂಕಗಳು), ನಬೀಲ್‌ ಅಹ್ಮದ ಕರ್ಮಡಿ (೫೪೫ ಅಂಕಗಳು), ಸ್ಪರ್ಶ ನಾಯ್ಕ್ (೫೪೫ ಅಂಕಗಳು), ವೃಂದಾ ಪಾಟೀಲ (೫೪೫ ಅಂಕಗಳು), ಧೀರಜ ಮುರಗೋಡ (೫೪೪ ಅಂಕಗಳು), ಪ್ರಫುಲ್ ಮಡಿವಾಳ (೫೪೩ ಅಂಕಗಳು), ರೋಶನ್‌ ಬಟ್ಟೂರ್ (೫೪೨ ಅಂಕಗಳು), ಸಮರ್ಥ ಕೋಟಿ (೫೪೨ ಅಂಕಗಳು), ಶಿವಯೋಗಿ ಉರೋಳಗಿನ್ (೫೪೨ ಅಂಕಗಳು), ಶ್ರಿಪ್ರಿಯಾ ಹನುಮಸಾಗರ (೫೪೧ ಅಂಕಗಳು), ಶ್ರೀಕೃಷ್ಣ ಹೆಗಡೆ (೫೪೦ ಅಂಕಗಳು) ಪಡೆದಿದ್ದಾರೆ.
ಸಂಸ್ಕೃತ ವಿಷಯದಲ್ಲಿ ೧, ಗಣಿತಶಾಸ್ತ್ರ ವಿಷಯದಲ್ಲಿ ೪ಮತ್ತು ಕಂಪ್ಯೂಟರ ಸೈನ್ಸ್‌ ವಿಷಯದಲ್ಲಿ ೨ ವಿದಾರ್ಥಿಗಳು ೧೦೦ ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ಒಟ್ಟು ೧೦೦ ವಿದ್ಯಾರ್ಥಿಗಳಲ್ಲಿ ೫೯ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ , ೩೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಮತ್ತು ೫ ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಎಲ್ಲ ವಿದ್ಯಾರ್ಥಿಗಳಿಗೆ ಕಾಲೇಜಿನ ಪ್ರಾಂಶುಪಾಲರು, ಕಾಲೇಜಿನ ಆಡಳಿತ ಮಂಡಳಿ ಮತ್ತು ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement