ತುಂಗಭದ್ರಾ ನದಿಯಲ್ಲಿ ಮೂವರು ಹುಡುಗರು ನೀರುಪಾಲು

ದಾವಣಗೆರೆ : ತುಂಗಭದ್ರಾ ನದಿಯಲ್ಲಿ ಮೂವರು ಹುಡುಗರು ನೀರು ಪಾಲಾಗಿರುವ ಘಟನೆ ಭಾನುವಾರ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಗೋಣಿಗೆರೆ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದ ಪವನ (16), ಕಿರಣ (14) ಹಾಗೂ ವರುಣ (15) ನೀರು ಪಾಲಾದವರು ಎಂದು ಹೇಳಲಾಗಿದೆ. ಭಾನುವಾರ ಬೆಳಿಗ್ಗೆ ಹೊಲದಲ್ಲಿ ಬೇಸಾಯ ಮುಗಿಸಿದ ನಂತರ ತುಂಗಭದ್ರಾ ನದಿಯಲ್ಲಿ ಎತ್ತುಗಳಿಗೆ ನೀರು ಕುಡಿಸಲು ನೀರಿಗಳಿದಾಗ ಈ ದುರ್ಘಟನೆ ಸಂಭವಿಸಿದೆ. ಎತ್ತುಗಳು ನೀರಿನಲ್ಲಿ ಮುಂದೆ ಹೋದಾಗ ಾದನ್ನು ಎಳೆಯಲು ಪ್ರಯತ್ನಿಸಿದಾಗ ಅದು ಓರ್ವನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದ್ದು, ಆತನನ್ನು ಉಳಿಸಲು ಇನ್ನಿಬ್ಬರು ಹೋಗಿ ಅವರು ಸಹ ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಓರ್ವನ ಮೃತ ದೇಹ ಪತ್ತೆಯಾಗಿದ್ದು, ಇನ್ನಿಬ್ಬರಿಗೆ ಹುಡುಕಾಟ ನಡೆದಿದೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಆದಿತ್ಯ ಎಲ್‌1, ಪ್ರೋಬಾ-3 ಉಪಗ್ರಹಗಳ ನೆರವಿನಿಂದ ಸೌರ ಸ್ಫೋಟಗಳ ರಹಸ್ಯ ಬಯಲು ಮಾಡಿದ ವಿಜ್ಞಾನಿಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement