ಕರ್ನಾಟಕದ ಈ ಪುಟ್ಟ ಬಾಲಕಿಯ ʼಪಿಯಾನೋʼ ಪ್ರತಿಭೆಗೆ ಮನಸೋತ ಪ್ರಧಾನಿ : ಪುಟಾಣಿಯ ರಮಣೀಯ ವೀಡಿಯೊ ಹಂಚಿಕೊಂಡ ಮೋದಿ | ವೀಕ್ಷಿಸಿ

posted in: ರಾಜ್ಯ | 0

ಕರ್ನಾಟಕದ ಪುಟ್ಟ ಬಾಲಕಿಯೊಬ್ಬಳ ಪಿಯಾನೋ ಪ್ರತಿಭೆಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.
ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ… ಕನ್ನಡ ಗೀತೆ ಹಾಡುತ್ತಿರುವ ಮಹಿಳೆಯೊಂದಿಗೆ ಸಿಂಕ್ ಆಗಿ ಪಿಯಾನೋ ನುಡಿಸುವ ಪುಟ್ಟ ಹುಡುಗಿಯ ಸುಂದರವಾದ ವೀಡಿಯೊ ಇಂಟರ್ನೆಟ್‌ನ ಲಕ್ಷಾಂತರ ಹೃದಯವನ್ನು ಗೆದ್ದಿದೆ.
ಎಷ್ಟರಮಟ್ಟಿಗೆ ಎಂದರೆ ಪ್ರಧಾನಿ ನರೇಂದ್ರ ಮೋದಿ ಕೂಡ ಟ್ವಿಟರ್‌ನಲ್ಲಿ ಸಂತೋಷಕರ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಮಹಿಳೆ ಕನ್ನಡ ಪದ್ಯದ ಒಂದೊಂದು ಸಾಲು ಹೇಳುತ್ತ ಹೋದಂತೆ ಈ ಪುಟ್ಟ ಹುಡುಗಿ ಒಂದೊಂದು ಸಾಲನ್ನು ಪಿಯಾನೋದಲ್ಲಿ ಅಷ್ಟೇ ಕರಾರುವಕ್ಕಾಗಿ ನುಡಿಸುತ್ತ ಹೋಗುತ್ತಾಳೆ. ಅವಳು ಚೈಲ್ಡ್‌ ಪ್ರಾಡಿಜಿಗಿಂತ ಕಡಿಮೆಯಿಲ್ಲ. ಪ್ರತಿಭಾವಂತ ಪುಟ್ಟ ಪಿಯಾನೋ ವಾದಕಿ ಆನ್‌ಲೈನ್‌ನಲ್ಲಿ ಈಗ ಅನೇಕರ ಪ್ರಶಂಸೆಗೆ ಪಾತ್ರಳಾಗಿದ್ದು, ಅದರಲ್ಲಿ ಪ್ರಧಾನಿ ಮೋದಿಯೋ ಒಬ್ಬರಾಗಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಪಲ್ಲವಗಳ ಪಲ್ಲವಿಯಲಿ ಗರಿಗೆದರಿದೆ ಗೀತಾ, ತಂಬೆಲರಲಿ ಹಬ್ಬುತ್ತಿದೆ ಕೋಕಿಲ ಸಂಗೀತಾ ….ಪದ್ಯವನ್ನು ಕನ್ನಡದ ಖ್ಯಾತ ಕವಿ ಕನ್ನಡ ಕವಿ ಕೆ.ಎಸ್ ನರಸಿಂಹ ಸ್ವಾಮಿ ಅವರು ಬರೆದಿದ್ದಾರೆ. ವೀಡಿಯೊದಲ್ಲಿ, ಪುಟ್ಟ ಬಾಲಕಿ ಶಾಲ್ಮಲಿ ಪಿಯಾನೋ ನುಡಿಸುತ್ತಿರುವುದನ್ನು ಕಾಣಬಹುದು. ಅವಳ ತಾಯಿಯಂತೆ ಕಾಣುವ ಮಹಿಳೆ ಒಂದು ಸಾಲನ್ನು ಹಾಡುತ್ತಾಳೆ ಮತ್ತು ನಂತರ ಶಾಲ್ಮಲಿ ಪಿಯಾನೋದಲ್ಲಿ ನಿಖರವಾದ ಅದನ್ನು ನುಡಿಸುತ್ತಾಳೆ.

ಈ ವಿಡಿಯೋವನ್ನು ಆರಂಭದಲ್ಲಿ ಅನಂತಕುಮಾರ ಎಂಬವರು ಟ್ವೀಟ್ ಮಾಡಿದ್ದರು. ನಂತರ ಅದನ್ನು ಪ್ರಧಾನಿ ಮೋದಿ ರಿಟ್ವೀಟ್ ಮಾಡಿದ್ದಾರೆ ಹಾಗೂ “ಈ ವೀಡಿಯೋ ಎಲ್ಲರ ಮುಖದಲ್ಲೂ ನಗು ತರಿಸುತ್ತದೆ. ಅಸಾಧಾರಣ ಪ್ರತಿಭೆ ಮತ್ತು ಸೃಜನಶೀಲತೆ. ಶಾಲ್ಮಲೀ ಅವರಿಗೆ ಶುಭಾಶಯಗಳು! ” ಎಂದು ಪ್ರಧಾನಿ ಮೋದಿ ಈ ವೀಡಿಯೊಕ್ಕೆ ಶೀರ್ಷಿಕೆ ಬರೆದಿದ್ದಾರೆ.
ಚಿಕ್ಕ ಹುಡುಗಿಯ ಪ್ರತಿಭೆಯಿಂದ ಇಂಟರ್ನೆಟ್ ಸಂಪೂರ್ಣವಾಗಿ ಮಂತ್ರಮುಗ್ಧಗೊಂಡಿದೆ. ಕಾಮೆಂಟ್‌ಗಳ ವಿಭಾಗವು ಪ್ರೀತಿಯ ಮತ್ತು ಹೃದಯದ ಎಮೋಜಿಗಳಿಂದ ತುಂಬಿದೆ. ಕಾಮೆಂಟ್‌ಗಳ ವಿಭಾಗದಲ್ಲಿ ಜನರು ಅವಳ ಅಸಾಧಾರಣ ಪ್ರತಿಭೆಯನ್ನು ಮೆಚ್ಚಿದ್ದಾರೆ.

ಇಂದಿನ ಪ್ರಮುಖ ಸುದ್ದಿ :-   ತಿ.ನರಸೀಪುರ ಬಳಿ ಅಪಘಾತ : ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

 

 

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement