ಸಿಇಟಿ-2023 : ವಿಶೇಷ ಕ್ಯಾಟಗರಿ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಕೆ ವೇಳಾಪಟ್ಟಿಯಲ್ಲಿ ಬದಲಾವಣೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ (KEA) ಸಿಇಟಿ-2023ರ ವಿಶೇಷ ಕ್ಯಾಟಗರಿಗಳ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ಸಲ್ಲಿಸುವ ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ. ಪರಿಷ್ಕೃತ ವೇಳಾಪಟ್ಟಿಯನ್ನೂ ಪ್ರಕಟಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಿಧಾನಸಭೆ ಚುನಾವಣೆಯನ್ನು ಮೇ 10ರಂದು ನಡೆಸುತ್ತಿರುವುದರಿಂದ ಹಾಗೂ ಮೇ 13ರಂದು ಚುನಾವಣಾ ಫಲಿತಾಂಶ ಪ್ರಕಟಿಸುವ ಹಿನ್ನೆಲೆಯಲ್ಲಿ ದಿನಾಂಕ 10-05-2023ರಿಂದ 16-05-2023ರ ವರೆಗೆ ವಿಶೇಷ ಕ್ಯಾಟಗರಿಗಳ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರಗಳನ್ನು ಸಲ್ಲಿಸಲು ಇದ್ದ ವೇಳಾಪಟ್ಟಿ ಬದಲಾಯಿಸಿ, ಮುಂದಕ್ಕೆ ಹಾಕಲಾಗಿದೆ ಎಂದು ತಿಳಿಸಿದ್ದಾರೆ.
ವೇಳಾಪಟ್ಟಿಯನ್ನು ಪರಿಷ್ಕೃತಗೊಳಿಸಲಾಗಿದ್ದು, ಅರ್ಹ ಅಭ್ಯರ್ಥಿಗಳು ಪರಿಷ್ಕೃತ ವೇಳಾಪಟ್ಟಿಯ ಅನುಸಾರ ವಿಶೇಷ ಕ್ಯಾಟಗರಿಗಳ ಪ್ರಮಾಣಪತ್ರಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ವಿಶೇಷ ಕ್ಯಾಟಗರಿಗಳ ಪ್ರಮಾಣ ಪತ್ರಗಳ ಜೊತೆಯಲ್ಲಿ ಸಲ್ಲಿಸಬೇಕಾದ ವಿವಿಧ ಪ್ರಮಾಣಪತ್ರಗಳು, ವ್ಯಾಸಂಗ ಪ್ರಮಾಣ ಪತ್ರಗಳ ವಿವರಗಳ ಬಗ್ಗೆ ಇ-ಮಾಹಿತಿ ಬುಲೆಟಿಂನ್-1 ಅನ್ನು ನೋಡುವಂತೆ ತಿಳಿಸಿದೆ.
ಪರಿಷ್ಕೃತ ವೇಳಾಪಟ್ಟಿ
CAPF, CRPF, BSF, ITBP – 25-05-2023
Ex-Defence, Ex-CAPF – 26-05-2023
Defence – 29-05-2023
NCC – 30-05-2023
ಸ್ಪೋರ್ಟ್ಸ್, ಆಂಗ್ಲೋ ಇಂಡಿಯನ್ಸ್ – 31-05-2023
ಸ್ಕೌಟ್ ಅಂಡ್ ಗೈಡ್ಸ್ – 01-06-2023
ಈ ದಿನಾಂಕಗಳಂದು ಬೆಳಿಗ್ಗೆ 10:30ಯಿಂದ ಸಂಜೆ 5:30ರ ಒಳಗೆ ಸಲ್ಲಿಸಲು ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್ ಪ್ರಕರಣದ ಹಿಂದೆ ಡಿಕೆ ಶಿವಕುಮಾರ ಕೈವಾಡ : ವಕೀಲ ದೇವರಾಜೇಗೌಡ ಗಂಭೀರ ಆರೋಪ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement