ಮೊರಿಂಡಾ (ಪಂಜಾಬ್): ಎರಡು ದಿನಗಳ ರಿಮಾಂಡ್ ಮುಗಿದ ನಂತರ ಜಸ್ಬೀರ್ ಸಿಂಗ್ ನನ್ನು ಪಂಜಾಬ್‌ನ ರೂಪನಗರದ ನ್ಯಾಯಾಲಯಕ್ಕೆ ಹಾಜರುಪಡಿಸುತ್ತಿದ್ದಾಗ ವ್ಯಕ್ತಿಯೊಬ್ಬರು ರಿವಾಲ್ವರ್‌ನೊಂದಿಗೆ ಒಳಗೆ ಪ್ರವೇಶಿಸಿದ್ದು, ಪೊಲೀಸರು ದಾಳಿ ಯನ್ನವನ್ನು ವಿಫಲಗೊಳಿಸಿದ್ದಾರೆ ಎಂದು ವರದಿಯಾಗಿದೆ.
ರಿವಾಲ್ವರ್‌ನೊಂದಿಗೆ ನ್ಯಾಯಾಲಯಕ್ಕೆ ಪ್ರವೇಶಿಸಿದ ವ್ಯಕ್ತಿಯನ್ನು ಸಾಹೇಬ್ ಸಿಂಗ್ ಖುರ್ಲ್ ಎಂದು ಗುರುತಿಸಲಾಗಿದೆ. ಆತ ಮೊರಿಂಡಾ ನಿವಾಸಿಯಾಗಿದ್ದು, ವಕೀಲ ಎಂದು ಹೇಳಲಾಗಿದೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರೂಪನಗರ ಗುರುದ್ವಾರದಲ್ಲಿ ನಡೆದ ಗುರು ಗ್ರಂಥಾ ಸಾಹಿಬ್ ಅಪವಿತ್ರಗೊಳಿದ ಪ್ರಕರಣದ ಬಗ್ಗೆ ಆಕ್ರೋಶ ಭರಿತರಾಗಿ ಆರೋಪಿಯ ಮೇಲೆ ಹಲ್ಲೆ ನಡೆಸಲು ಆಗಮಿಸಿದ್ದರು ಎಂದು ಹೇಳಲಾಗಿದೆ. ಏತನ್ಮಧ್ಯೆ, ಖರಾರ್ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸಾಹಿಬ್ಜಿತ್ ಸಿಂಗ್ ಖುರ್ಲ್ ತಮ್ಮ ಸದಸ್ಯ ಎಂಬುದನ್ನು ನಿರಾಕರಿಸಿದ್ದಾರೆ.
ಪಂಜಾಬ್‌ನ ಮೊರಿಂಡಾದ ಗುರುದ್ವಾರದಲ್ಲಿ ಗುರು ಗ್ರಂಥಾ ಸಾಹಿಬ್ ಅಪವಿತ್ರಗೊಳಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ನಂತರ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕ್ರಮದ ಭರವಸೆ ನೀಡಿದರು. ವೀಡಿಯೊದಲ್ಲಿ, ಜಸ್ಬೀರ್ ಸಿಂಗ್ ಮೊರಿಂಡಾದ ಗುರುದ್ವಾರ ಕೊತ್ವಾಲಿ ಸಾಹಿಬ್‌ನ ಗರ್ಭಗುಡಿಗೆ ಪ್ರವೇಶಿಸಿ, ಇಬ್ಬರು ಗ್ರಂಥಿಗಳನ್ನು (ಸಿಖ್ ಧಾರ್ಮಿಕ ವಿಧಿವಿಧಾನ ನಡೆಸುವವರು) ಹೊಡೆದು ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸುತ್ತಿರುವುದನ್ನು ಕಾಣಬಹುದು. ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿರುವ ಜಸ್ವಿರ್ ಸಿಂಗ್ ನನ್ನು ನಂತರ ದೇಗುಲದಲ್ಲಿದ್ದ ಭಕ್ತರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು.
ಪೊಲೀಸರು ಜಸ್ವೀರ್‌ನನ್ನು ಬಂಧಿಸಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಹಾಗೂ ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ