ಪ್ರಧಾನಿ ಮೋದಿ ‘ರಾಕ್ ಸ್ಟಾರ್’ ಆಗಿದ್ರೆ ಹೇಗೆ ಕಾಣ್ತಾ ಇದ್ರು…?: ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ರಚಿಸಿದ ಈ ಚಿತ್ರ ನೋಡಿ..!

ನವದೆಹಲಿ : ಕೃತಕ ಬುದ್ಧಿಮತ್ತೆಯ (AI) ಚಿತ್ರಗಳು ಇತ್ತೀಚಿನ ದಿನಗಳಲ್ಲಿ ಕೋಲಾಹಲ ಸೃಷ್ಟಿಸಿವೆ. ಇಂಟರ್ನೆಟ್‌ನಲ್ಲಿ ಅನೇಕ ಜನ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಹೊಸ ಚಿತ್ರಗಳನ್ನ ಮಾಡುತ್ತಿದ್ದಾರೆ. ಇಂತಹದ್ದೇ ಚಿತ್ರ ರಚನೆಯಲ್ಲಿ ವ್ಯಕ್ತಿಯೊಬ್ಬರು ಕೃತಕ ಬುದ್ಧಿಮತ್ತೆ ಉಪಯೋಗಿಸಿ ವಿಶ್ವದಾದ್ಯಂತದ ಕೆಲವು ರಾಜಕಾರಣಿಗಳ ಚಿತ್ರಗಳನ್ನ ರಚಿಸಿದ್ದಾರೆ, ಈಗಿನ ರಾಜಕಾರಣಿಗಳು ರಾಕ್ ಸ್ಟಾರ್’ಗಳಾಗಿದ್ದರೆ ಹೇಗೆ ಕಾಣುತ್ತಾರೆ.? ಎಂಬ ಥೀಮ್‌ ಮೇಲೆ ಅವರು ಚಿತ್ರ ರಚಿಸಿದ್ದು, ಈ ಚಿತ್ರಗಳಲ್ಲಿ ಪ್ರಧಾನಿ ಮೋದಿಯವರ ಚಿತ್ರವೂ ಇದೆ.
ಇನ್ಸ್ಟಾಗ್ರಾಮಿನಲ್ಲಿ ಜಿಯೋ ಜಾನ್ ಮುಲ್ಲರ್ ಎಂಬ ಖಾತೆಯು ಈ ಚಿತ್ರಗಳನ್ನ ಪೋಸ್ಟ್ ಮಾಡಿದೆ. ಇದರಲ್ಲಿ ಪ್ರಧಾನಿ ಮೋದಿ ರಾಕ್‌ ಸ್ಟಾರ್ ಆಗಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಕೂಡ ಮೈಕ್ ಮುಂದೆ ಗಿಟಾರ್ ನುಡಿಸುವುದನ್ನ ಕಾಣಬಹುದು. ಅದೇ ಸಮಯದಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರ ಚಿತ್ರವನ್ನು ಸಹ ಈ ಎಐ ಫೋಟೋಗಳಲ್ಲಿ ಸೇರಿಸಲಾಗಿದೆ. ವಿದೇಶಗಳ ಇತರ ಅನೇಕ ಪ್ರಮುಖ ನಾಯಕರ ಚಿತ್ರಗಳು ಇವೆ.
ಈ ಫೋಟೋಗಳು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿವೆ. ಇಲ್ಲಿಯವರೆಗೆ, 27 ಸಾವಿರಕ್ಕೂ ಹೆಚ್ಚು ಬಳಕೆದಾರರು ಅವುಗಳನ್ನು ಲೈಕ್ ಮಾಡಿದ್ದಾರೆ. ಇದಲ್ಲದೆ, ಹೆಚ್ಚಿನ ಸಂಖ್ಯೆಯ ಬಳಕೆದಾರರು ತಮ್ಮ ನೆಚ್ಚಿನ ನಾಯಕರ ಬಗ್ಗೆ ಕಾಮೆಂಟ್ ಮಾಡುತ್ತಿದ್ದಾರೆ ಮತ್ತು ಉಲ್ಲೇಖಿಸುತ್ತಿದ್ದಾರೆ.
ಜಿಯೋ ಜಾನ್ ಎಐ ಮೂಲಕ ಈ ಹಿಂದೆ ಅವರು ಮಹಾತ್ಮ ಗಾಂಧಿ, ಮದರ್ ತೆರೇಸಾ ಮುಂತಾದವರ ಚಿತ್ರಗಳನ್ನ ಸಹ ರಚನೆ ಮಾಡಿದ್ದಾರೆ. ಈ ಚಿತ್ರಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಸಹ ಜನ ತುಂಬಾ ಇಷ್ಟಪಟ್ಟಿದ್ದಾರೆ. ಇದು 70 ಸಾವಿರಕ್ಕೂ ಹೆಚ್ಚು ಲೈಕ್’ಗಳನ್ನ ಪಡೆದಿದೆ. ಅದೇ ಸಮಯದಲ್ಲಿ, ತಾಜ್ ಮಹಲ್’ನ ಎಐ ಚಿತ್ರಗಳು ಸಹ ಕೆಲವು ದಿನಗಳ ಹಿಂದೆ ಬಹಳ ಜನಪ್ರಿಯವಾಗಿತ್ತು.

ಪ್ರಮುಖ ಸುದ್ದಿ :-   ಬಾಂಗ್ಲಾದೇಶ : ಬಹುಮಹಡಿ ಕಟ್ಟದಲ್ಲಿ ಅಗ್ನಿ ಅನಾಹುತ ; 43 ಮಂದಿ ಸಾವು, ಅನೇಕರಿಗೆ ಗಾಯ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement