ನವದೆಹಲಿ: ಪಾಕಿಸ್ತಾನದಲ್ಲಿ ಉಗ್ರರು ಬಳಸುತ್ತಿದ್ದ 14 ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರಕ್ಕೆ ಮಾಹಿತಿಯನ್ನು ರವಾನಿಸಲು ಈ ಅಪ್ಲಿಕೇಶನ್‌ಗಳನ್ನು ಭಯೋತ್ಪಾದಕರು ಸಂವಹನ ವೇದಿಕೆಗಳಾಗಿ ಬಳಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಕಣಿವೆ ಪ್ರದೇಶದ ಭಯೋತ್ಪಾದಕರು ರಹಸ್ಯ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಬಳಸುತ್ತಿದ್ದ ಕಾರಣ 14 ಮೆಸೆಂಜರ್ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಬ್ಯಾನ್ ಮಾಡಲಾದ 14 ಆ್ಯಪ್ ಗಳು ಕಣಿವೆಯಲ್ಲಿ ಭಯೋತ್ಪಾದನೆ ಕುರಿತು ಪ್ರಚಾರವನ್ನು ಮಾಡುತ್ತಿತ್ತು. ಈ ಆ್ಯಪ್‌ಗಳ ಮೂಲಕ ಉಗ್ರರು ರಹಸ್ಯ ಸಂದೇಶಗಳನ್ನು ಕಣಿವೆಯಲ್ಲಿರುವ ತನ್ನ ಕಾರ್ಯಕರ್ತರಿಗೆ ಕಳುಹಿಸುತ್ತಿದ್ದಾರೆ ಎಂದು ಭದ್ರತಾ ಮತ್ತು ಗುಪ್ತಚರ ಇಲಾಖೆ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.
ಎನಿಗ್ಮಾ, ಸೇಫ್‌ವಿಸ್, ವಿಕ್ರ್ಮೆ, ಮೀಡಿಯಾಫೈರ್, ಕ್ರಿಪ್‌ವೈಸರ್, ಬ್ರಿಯಾರ್, ಬಿಚಾಟ್, ನಂಡ್‌ಬಾಕ್ಸ್, ಕೊನಿಯನ್, ಐಎಂಒ, ಜಂಗಿ, ಥ್ರೀಮಾ ಎಲಿಮೆಂಟ್ ಮತ್ತು ಸೆಕೆಂಡ್ ಲೈನ್ ಆ್ಯಪ್ ಗಳನ್ನು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಸೆಕ್ಷನ್ 69ಎ ಅಡಿಯಲ್ಲಿ ನಿರ್ಬಂಧಿಸಲಾಗಿದೆ.
ದೇಶದ ಭದ್ರತೆಗೆ ಧಕ್ಕೆ ತರುವ ಮೊಬೈಲ್ ಅಪ್ಲಿಕೇಷನ್ ಗಳ ಮೇಲೆ ನಿಷೇಧ ಹೇರಿರುವುದು ಇದೇ ಮೊದಲಲ್ಲ. ಈ ಹಿಂದೆ 200 ಕ್ಕೂ ಹೆಚ್ಚು ಚೀನೀ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ