ಮನೆ ಕುಸಿದು ನವಜಾತ ಶಿಶು ಸೇರಿ ಇಬ್ಬರು ಸಾವು

ಕೊಪ್ಪಳ: ಎರಡು ದಿನಗಳ ಹಿಂದೆ ಸುರಿದ ಜೋರು ಮಳೆಗೆ ನೆನೆದು ಹೋಗಿದ್ದ ಮನೆ ಕುಸಿದು 24 ದಿನದ ಹೆಣ್ಣು ಮಗು ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಜಿಲ್ಲೆಯ ಕನಕಗಿರಿ ತಾಲೂಕು ಜೀರಾಳ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ಮಂಗಳವಾರ ಬೆಳಗಿನ ಜಾವ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.
ಇತ್ತೀಚೆಗಷ್ಟೇ ಮಗುವಿಗೆ ಜನ್ಮ ನೀಡಿದ್ದ ಕನಕಮ್ಮ, ಅವರು 24 ದಿನದ ಮಗು ಹಾಗೂ ಅವರ ತಾಯಿ ಫಕೀರಮ್ಮಮನೆ ಒಳಗೆ ಮಲಗಿದ್ದರು. ಮಂಗಳವಾರ ತಡರಾತ್ರಿ ನಂತರ ಮಳೆಗೆ ನೆನೆದ ಮನೆ ಕುಸಿದು ಫಕೀರಮ್ಮ (60) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ, ಗಾಯಗೊಂಡಿದ್ದ 24 ದಿನದ ಶಿಶು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದೆ ಎನ್ನಲಾಗಿದೆ. ಕನಕಮ್ಮನಿಗೆ ಕಾಲು ಮುರಿದಿದ್ದು, ಅವರನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿ ಕನಕಪ್ಪ ಮನೆಯ ಹೊರಗಡೆ ಮಲಗಿದ್ದರಿಂದ ಅವರು ಪಾರಾಗಿದ್ದಾರೆ.
ಮಳೆಯಲ್ಲಿ ಮೇಲ್ಛಾವಣಿ ನೆನೆದ ಕಾರಣ ಮಂಗಳವಾರ ಬೆಳಗಿನ ಜಾವ ಜೋರಾಗಿ ಬೀಸಿದ ಗಾಳಿಗೆ ಸಿಮೆಂಟ್‌ ಸೀಟುಗಳು ಮನೆಯೊಳಗೆ ಮಲಗಿದ್ದವರ ಮೇಲೆ ಬಿದ್ದಿದೆ ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರಿನ 44 ಶಾಲೆಗಳಿಗೆ ಬಾಂಬ್ ಬೆದರಿಕೆ....!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement