ಭಗವಾನ್‌ ರಾಮನಿಗೆ ಆಯ್ತು….ಈಗ ಹನುಮಂತನ ಪೂಜಿಸುವವರನ್ನೂ ಲಾಕ್‌ಅಪ್‌ನಲ್ಲಿ ಇಡಲು ಕಾಂಗ್ರೆಸ್ ಹೊರಟಿದೆ: ಕಾಂಗ್ರೆಸ್‌ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರಧಾನಿ ಮೋದಿ ವಾಗ್ದಾಳಿ

ಹೊಸಪೇಟೆ: ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ, ಪ್ರಧಾನಿ ನರೇಂದ್ರ ಮೋದಿ ಇಂದು, ಮಂಗಳವಾರ ‘ಭಗವಾನ್‌ ರಾಮ’ನ ಬಗ್ಗೆ ಅವರಿಗೆ (ಕಾಂಗ್ರೆಸ್‌ಗೆ) ಸಮಸ್ಯೆ ಇತ್ತು ಮತ್ತು ಈಗ “ಜೈ ಬಜರಂಗಬಲಿ (ಜೈ ಹನುಮಂತ)” ಎಂದು ಘೋಷಣೆ ಕೂಗುವವರನ್ನೂ ಲಾಕ್‌ ಮಾಡುವುದಾಗಿ ಕಾಂಗ್ರೆಸ್‌ನವರು ಪ್ರತಿಜ್ಞೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
“ನಾನು ಹನುಮಂತನ ಭೂಮಿಗೆ ನನ್ನ ನಮನ ಸಲ್ಲಿಸಲು ಬಂದಿರುವ ಸಮಯದಲ್ಲಿ, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಹನುಮಂತನಿಗೆ ಜೈಕಾರ ಹಾಕುವವರಿಗೆ ಠಾಣೆಯಲ್ಲಿ ಲಾಕ್‌ ಮಾಡಲು ನಿರ್ಧರಿಸಿದೆ” ಎಂದು ಹೊಸಪೇಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ವಾಗದಾಳಿ ನಡೆಸಿದ್ದಾರೆ.
ಹನುಮಂತನ ಪಾದಗಳಿಗೆ ತಲೆಬಾಗಿ ಪ್ರಾರ್ಥಿಸುತ್ತೇನೆ. ಹಾಗೂ ಕರ್ನಾಟಕದ ಗೌರವ ಮತ್ತು ಸಂಸ್ಕೃತಿಗೆ ಧಕ್ಕೆ ತರಲು ನಾವು ಯಾರಿಗೂ ಬಿಡುವುದಿಲ್ಲ ಎಂದು ಭರವಸೆ ನೀಡುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೇ 10 ರ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ನಿಷೇಧಿತ ಸಂಘಟನೆಯಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಬಜರಂಗದಳದೊಂದಿಗೆ ಸಮೀಕರಿಸಿದ ಕಾಂಗ್ರೆಸ್, ಪಿಎಫ್‌ಐ ಹಾಗೂ ಬಜರಂಗದಳದಂತಹ ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳನ್ನು ನಿಷೇಧಿಸುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದೆ.

ಪ್ರಮುಖ ಸುದ್ದಿ :-   ರಾಜ್‌ ಕುಂದ್ರಾಗೆ ಸೇರಿದ ₹97 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ.

ಮೊದಲು ಅವರು (ಕಾಂಗ್ರೆಸ್) ಭಗವಾನ್ ರಾಮನಿಗೆ ಲಾಕ್‌ ಮಾಡಿದರು ಮತ್ತು ಈಗ ಅವರು ‘ಜೈ ಹನುಮಾನ’ ಎಂದು ಕೂಗುವವರನ್ನು ಲಾಕ್‌ ಮಾಡುವುದಾಗಿ ಶಪಥ ಮಾಡಿದ್ದಾರೆ. ಈವರೆಗೆ ಭಗವಾನ್‌ ಶ್ರೀರಾಮನ ಜೊತೆಗೆ ಅವರಿಗೆ (ಕಾಂಗ್ರೆಸ್‌ಗೆ) ಸಮಸ್ಯೆಯಿತ್ತು. ಈಗ ಹನುಮಂತನ ಜೈಕಾರ ಹಾಕುವವರ ಬಗ್ಗೆಯೂ ಅವರಿಗೆ ತೊಂದರೆಯಾಗಿರುವುದು ದೇಶದ ದೌರ್ಭಾಗ್ಯ ಎಂದರು.

ವಿಜಯನಗರ ಸಾಮ್ರಾಜ್ಯ ಮತ್ತು ಅದರ ಇತಿಹಾಸ ಭಾರತದ ಹೆಮ್ಮೆ ಎಂದ ಅವರು, ವಿಜಯನಗರ ಸಾಮ್ರಾಜ್ಯದ ವೈಭವೋಪೇತ ದೊರೆಗಳ ಹೆಸರನ್ನು ಹೇಳುತ್ತಾ, ಶ್ರೀಕೃಷ್ಣದೇವರಾಯ ತನ್ನ ಸಂಪನ್ಮೂಲಗಳಿಂದ ಈ ಪ್ರದೇಶವನ್ನು ಅಮರಗೊಳಿಸಿದ್ದಾನೆ. ವಿವಿಧ ದೇಶಗಳೊಂದಿಗೆ ವ್ಯಾವಹಾರಿಕ ಬಾಂಧವ್ಯವನ್ನು ಗಟ್ಟಿಗೊಳಿಸಿದ್ದ. ಕರ್ನಾಟಕದ ಸಂಸ್ಕೃತಿಯನ್ನು ವಿಶ್ವಾದ್ಯಂತ ಪ್ರಸಿದ್ಧಿಗೊಳಿಸಿದ್ದ ಎಂದು ಮೋದಿ ಹೇಳಿದ್ದಾರೆ.
ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ನಂಬರ್ ಒನ್ ರಾಜ್ಯವನ್ನಾಗಿ ಮಾಡುವ ಮಾರ್ಗಸೂಚಿ ಇದೆ ಎಂದು ಪ್ರದಾನಿ ಮೋದಿ ಹೇಳಿದರು. ಏಕರೂಪ ನಾಗರಿಕ ಸಂಹಿತೆ ಜಾರಿ, ಉತ್ಪಾದನಾ ವಲಯದಲ್ಲಿ 10 ಲಕ್ಷ ಉದ್ಯೋಗಗಳು ರಾಜ್ಯ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ನೀಡಿದ ಪ್ರಮುಖ ಭರವಸೆಗಳಲ್ಲಿ ಸೇರಿವೆ. ತನ್ನ ಭರವಸೆಗಳು ಸಮಾಜದ ಪ್ರತಿಯೊಂದು ವರ್ಗವನ್ನು ಮುಟ್ಟುತ್ತವೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement