ಭಾರತದಲ್ಲಿ ಸರಾಸರಿ ಮಾಸಿಕ ವೇತನ ₹50,000ಕ್ಕಿಂತ ಕಡಿಮೆ : ವಿಶ್ವದಲ್ಲಿ ಅತಿ ಹೆಚ್ಚು ಸಂಬಳ ಪಡೆಯುವ ದೇಶಗಳ ಪಟ್ಟಿ ಇಲ್ಲಿದೆ….

ನವದೆಹಲಿ: ಭಾರತದಲ್ಲಿ ಸರಾಸರಿ ವೇತನವು ₹ 50,000 ಕ್ಕಿಂತ ಕಡಿಮೆ ಇದೆ ಎಂದು ಇತ್ತೀಚಿನ ವರದಿಯೊಂದು ಬಹಿರಂಗಪಡಿಸಿದೆ. ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಸಂದರ್ಭದಲ್ಲಿ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ವಿಶ್ವದಾದ್ಯಂತ ವಿವಿಧ ದೇಶಗಳ ಸರಾಸರಿ ಮಾಸಿಕ ಸಂಬಳದ ಡೇಟಾವನ್ನು ಬಿಡುಗಡೆ ಮಾಡಿದೆ. ಅಂಕಿಅಂಶಗಳ ಪ್ರಕಾರ, ಪ್ರಪಂಚದಾದ್ಯಂತದ 23 ದೇಶಗಳಲ್ಲಿ ಸರಾಸರಿ ಮಾಸಿಕ ಸಂಬಳ ₹1 ಲಕ್ಷಕ್ಕಿಂತ ಹೆಚ್ಚಿವೆ. ಜಾಗತಿಕವಾಗಿ ಅತಿ ಹೆಚ್ಚು ಸಂಬಳ ನೀಡುವ ಟಾಪ್ 10 ದೇಶಗಳಲ್ಲಿ ಸ್ವಿಟ್ಜರ್ಲೆಂಡ್, ಲಕ್ಸೆಂಬರ್ಗ್, ಸಿಂಗಾಪುರ್, ಯುಎಸ್ಎ, ಐಸ್ಲ್ಯಾಂಡ್, ಕತಾರ್, ಡೆನ್ಮಾರ್ಕ್, ಯುಎಇ, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ಸೇರಿವೆ.
ಟರ್ಕಿ, ಬ್ರೆಜಿಲ್, ಅರ್ಜೆಂಟೀನಾ, ಇಂಡೋನೇಷ್ಯಾ, ಕೊಲಂಬಿಯಾ, ಬಾಂಗ್ಲಾದೇಶ, ವೆನೆಜುವೆಲಾ, ನೈಜೀರಿಯಾ, ಈಜಿಪ್ಟ್ ಮತ್ತು ಪಾಕಿಸ್ತಾನದ ಸರಾಸರಿ ಮಾಸಿಕ ವೇತನ ಭಾರತಕ್ಕಿಂತ ಕಡಿಮೆಯಿದೆ. ಮಾಸಿಕ ಆಧಾರದ ಮೇಲೆ ಕಾರ್ಮಿಕರ ಸರಾಸರಿ ವೇತನಕ್ಕೆ ಸಂಬಂಧಿಸಿದಂತೆ ಭಾರತವು 65 ನೇ ಸ್ಥಾನದಲ್ಲಿದೆ. ಜಪಾನ್‌ನಲ್ಲಿ ಸರಾಸರಿ ಸಂಬಳ 1,98,489 ರೂ.ಗಳಷ್ಟಿದ್ದರೆ ಚೀನಾದಲ್ಲಿ ಸರಾಸರಿಯಾಗಿ 87,426 ರೂ.ಗಳಷ್ಟು ಸಂಬಳ ಪಡೆಯುತ್ತಾರೆ.
ದೇಶಗಳ ಸರಾಸರಿ ಮಾಸಿಕ ವೇತನಗಳ ಸಂಪೂರ್ಣ ಪಟ್ಟಿ:
ಸ್ವಿಟ್ಜರ್ಲೆಂಡ್:              $6,096 (₹4,98,567)
ಲಕ್ಸೆಂಬರ್ಗ್:                $5,015 (₹4,10,156)
ಸಿಂಗಾಪುರ:                  $4,989 (₹4,08,030)
ಅಮೆರಿಕ:                     $4,245 (₹3,47,181)
ಐಸ್ಲ್ಯಾಂಡ್:                 $4,007 (₹3,27,716)
ಕತಾರ್:                       $3,982 (₹3,25,671)
ಡೆನ್ಮಾರ್ಕ್:                   $3,538 (₹2,89,358)
ಯುಎಇ:                     $3,498 (₹2,86,087)
ನೆದರ್ಲ್ಯಾಂಡ್ಸ್:            $3,494 (₹2,85,756)
ಆಸ್ಟ್ರೇಲಿಯಾ:             $3,391 (₹2,77,332)
ನಾರ್ವೆ:                       $3,289 (₹2,68,990)
ಜರ್ಮನಿ:                    $3,054 (₹2,49,771)
ಕೆನಡಾ:                       $2,997 (₹2,45,109)
ಯುಕೆ:                        $2,924 (₹2,39,139)
ಫಿನ್‌ಲ್ಯಾಂಡ್:             $2,860 (₹2,33,905)
ಆಸ್ಟ್ರಿಯಾ:                  $2,724 (₹2,22,782)
ಸ್ವೀಡನ್:                     $2,721 (₹2,22,534)
ಫ್ರಾನ್ಸ್:                       $2,542 (₹2,07,894)
ಜಪಾನ್:                     $2,427 (₹1,98,489)
ದಕ್ಷಿಣ ಕೊರಿಯಾ:       $2,243 (₹1,83,441)
ಸೌದಿ ಅರೇಬಿಯಾ:       $2,002 (₹1,63,731)
ಸ್ಪೇನ್:                        $1,940 (₹1,58,660)
ಇಟಲಿ:                        $1,728 (₹1,41,322)
ದಕ್ಷಿಣ ಆಫ್ರಿಕಾ:           $1,221 (₹99,857)
ಚೀನಾ:                        $1,069 (₹87,426)
ಗ್ರೀಸ್:                          $914 (₹74,749)
ಮೆಕ್ಸಿಕೋ:                   $708 (₹57,902)
ರಷ್ಯಾ:                         $645 (₹52,750)
ಭಾರತ:                        $573 (₹46,861)
ಟರ್ಕಿ:                          $486 (₹39,746)
ಬ್ರೆಜಿಲ್:                       $418 (₹34,185)
ಅರ್ಜೆಂಟೀನಾ:             $415 (₹33,939)
ಇಂಡೋನೇಷ್ಯಾ:          $339 (₹27,724)
ಕೊಲಂಬಿಯಾ:            $302 (₹24,698)
ಬಾಂಗ್ಲಾದೇಶ:               $255 (₹20,854)
ವೆನೆಜುವೆಲಾ:               $179 (₹14,639)
ನೈಜೀರಿಯಾ:                $160 (₹13,085)
ಈಜಿಪ್ಟ್:                       $145 (₹11,858)
ಪಾಕಿಸ್ತಾನ:                   $145 (₹11,858)
ಪಟ್ಟಿಯಲ್ಲಿರುವ ಕೆಲವು ದೇಶಗಳ ಹೆಸರುಗಳನ್ನು ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಉಲ್ಲೇಖಿಸಿಲ್ಲ ಎಂದು ಗಮನಿಸಬೇಕು.
ಭಾರತದಲ್ಲಿ ಸಂಬಳ: ಭಾರತ ಇನ್ನೂ ಅಭಿವೃದ್ಧಿ ಹೊಂದುತ್ತಿರುವ ದೇಶ ಹಾಗೂ ಜನಸಂಖ್ಯೆಯಲ್ಲಿ ಭಾರತವು ವಿಶ್ವದಲ್ಲಿ ಮೊದಲ ಸ್ಥಾನದಲ್ಲಿದೆ. ಇತ್ತೀಚೆಗೆ ಚೀನಾವನ್ನು ಹಿಂದಿಕ್ಕಿದೆ. ಆರ್ಥಿಕತೆಯ ವಿಷಯದಲ್ಲಿ ಭಾರತ ಮೊದಲ ಸ್ಥಾನದಲ್ಲಿಲ್ಲ. ಭಾರತದಲ್ಲಿ ಉದ್ಯೋಗಿಯ ಸರಾಸರಿ ಮಾಸಿಕ ವೇತನ 46,861 ರೂ.ಗಳು.
ಈ ಪಟ್ಟಿಯಲ್ಲಿ ಭಾರತ ಜಾಗತಿಕವಾಗಿ 65ನೇ ಸ್ಥಾನದಲ್ಲಿದೆ ಎಂಬುದು ಗಮನಾರ್ಹ. ಸ್ವಿಟ್ಜರ್ಲೆಂಡ್‌ನಲ್ಲಿ ಉದ್ಯೋಗಿ ಪಡೆಯುವ ಸರಾಸರಿ ಮಾಸಿಕ ವೇತನವು 6096 ಡಾಲರ್ ಆಗಿದೆ. ಇದು ಭಾರತೀಯ ಕರೆನ್ಸಿಯಲ್ಲಿ 4,98,567 ರೂ.ಗಳಾಗಿದೆ. ಅಂದರೆ ಸ್ವಿಟ್ಜರ್ಲೆಂಡ್‌ನಲ್ಲಿ ಒಬ್ಬ ಕೆಲಸಗಾರ ಅಥವಾ ಉದ್ಯೋಗಿ ಸುಮಾರು ತಿಂಗಳಿಗೆ 5 ಲಕ್ಷ ರೂ. ಲಕ್ಸೆಂಬರ್ಗ್‌ನಲ್ಲಿ ತಿಂಗಳಿಗೆ 4,10,156 ರೂ. ಸಿಂಗಾಪುರದಲ್ಲಿ ಉದ್ಯೋಗಿಯೊಬ್ಬರು ತಿಂಗಳಿಗೆ ಸರಾಸರಿ ರೂ.4,08,030 ವೇತನ ಪಡೆಯುತ್ತಾರೆ. ಅಮೆರಿಕದಲ್ಲಿ ಒಬ್ಬ ಉದ್ಯೋಗಿ/ಕೆಲಸಗಾರ ತಿಂಗಳಿಗೆ ರೂ.3,47,181 ವರೆಗೆ ಸಂಬಳ ಪಡೆಯುತ್ತಾರೆ ಎಂಬುದು ಗಮನಾರ್ಹ.
ಆರ್ಥಿಕ ಹಿಂಜರಿತದ ಭೀತಿಯಿಂದ ಹೆಚ್ಚಿನ ದೊಡ್ಡ ಕಂಪನಿಗಳು ಉದ್ಯೋಗಿಗಳ ಸಂಬಳವನ್ನು ಕಡಿಮೆ ಮಾಡುತ್ತಿವೆ ಅಥವಾ ಸಂಬಳವನ್ನು ಹೆಚ್ಚಿಸದೆ ಇರುವುದು ತಿಳಿದಿದೆ. ಈ ಸಂದರ್ಭದಲ್ಲಿ, ವರ್ಲ್ಡ್ ಆಫ್ ಸ್ಟ್ಯಾಟಿಸ್ಟಿಕ್ಸ್ ಉಲ್ಲೇಖಿಸಿರುವ ಪಟ್ಟಿಯಲ್ಲಿ ಆ ವಿಷಯವನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement