ಬದಲಾವಣೆಗಾಗಿ ಬಿಜೆಪಿ ವಿರುದ್ಧ ಮತ ಹಾಕಿ: ಸುಧೀಂದ್ರ ಕುಲಕರ್ಣಿ ಮನವಿ

ಹುಬ್ಬಳ್ಳಿ: ಬದಲಾವಣೆಗಾಗಿ ಬಿಜೆಪಿ ವಿರುದ್ಧ ಮತ ಹಾಕಿರಿ. ಮತ್ತೊಮ್ಮೆ ಅಪರೇಷನ್‌ ಕಮಲ ಮೂಲಕ ಜನಾದೇಶದ ಅಪಹರಣ ತಪ್ಪಿಸಲು ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ನೀಡಿ ಎಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ಸಲಹಾಗಾರರಾಗಿದ್ದ ಸುಧೀಂದ್ರ ಕುಲಕರ್ಣಿ ರಾಜ್ಯದ ಮತದಾರರಿಗೆ ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗೆ ಕೇವಲ ಡಬಲ್ ಇಂಜಿನ್ ಸರ್ಕಾರವಷ್ಟೇ ಬೇಕಿಲ್ಲ. ಸಿಂಗಲ್ ಡ್ರೈವರ್ ಇರುವ ಡಬಲ್ ಇಂಜಿನ್ ಸರ್ಕಾರ ಬೇಕಾಗಿದೆ ಎಂದು ಟೀಕಿಸಿದ್ದಾರೆ. 2024ರ ಲೋಕಸಭಾ ಚುನವಣೆಯಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭಾ ಚುನಾವಣೆ ಅತ್ಯಂತ ಮಹತ್ವದ್ದು ಎಂದು ಸುಧೀಂದ್ರ ಕುಲಕರ್ಣಿ ಹೇಳಿದ್ದಾರೆ.
ಡಬಲ್ ಇಂಜಿನ್ ಸರ್ಕಾರದ ಬಗ್ಗೆ ಅಬ್ಬರಿಸುತ್ತಿರುವ ಬಿಜೆಪಿಗರು, ಈಗಿರುವ ತಮ್ಮದೇ ಡಬಲ್ ಇಂಜಿನ್ ಸರ್ಕಾರದಲ್ಲಿ ಗಗನಕ್ಕೆರಿರುವ ಬೆಲೆ ಏರಿಕೆ, ನಿರುದ್ಯೋಗ ನಿರ್ಮೂಲನೆ, ರೈತ-ಕಾರ್ಮಿಕರ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಯಾಕೆ ವಿಫಲವಾಗಿದ್ದಾರೆ. ನಾನು ತಿನ್ನುವುದಿಲ್ಲ, ತಿನ್ನಲೂ ಬಿಡುವುದಿಲ್ಲ ಎಂದು ಹೇಳಿದ್ದ ಮೋದಿ ರಾಜ್ಯದಲ್ಲಿ ಭ್ರಷ್ಟಾಚಾರ ನಿಲ್ಲಿಸಲು ಯಾಕೆ ವಿಫಲರಾದರು ಎಂದು ಅವರು ಪ್ರಶ್ನಿಸಿದರು.

ಎಲ್ಲ ರಾಜ್ಯಗಳಲ್ಲಿಯೂ ‘ಡಬಲ್ ಇಂಜಿನ್‌’ ಸರ್ಕಾರವೇ ಬೇಕು ಎಂಬ ಬಿಜೆಪಿಯ ಸಂಕಲ್ಪನೆಯೇ ಪ್ರಜಾಪ್ರಭುತ್ವ ವಿರೋಧಿ ಹಾಗೂ ಸಂವಿಧಾನ-ವಿರೋಧಿಯಾಗಿದೆ. ಬಹು-ಪಕ್ಷೀಯ ಶಾಸನ ವ್ಯವಸ್ಥೆ ನಮ್ಮ ಪ್ರಜಾಭುತ್ವದ ಬುನಾದಿ. ಬಿಜೆಪಿಗೆ ಬೇಕಾದದ್ದು ಕೇವಲ ಕಾಂಗ್ರೆಸ್ – ಮುಕ್ತ ಭಾರತವಷ್ಟೇ ಅಲ್ಲ, ವಿರೋಧಿ-ಪಕ್ಷ ಮುಕ್ತ ಭಾರತ. ನಮ್ಮ ದೇಶ ಕಮ್ಮುನಿಸ್ಟ್ ಚೀನಾದ ರೀತಿಯಲ್ಲಿ ಏಕ – ಪಕ್ಷೀಯ ಸರ್ವಾಧಿಕಾರಿ ದೇಶವಾಗಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ಬಿಜೆಪಿಗೆ ಕೇವಲ ಡಬಲ್ ಇಂಜಿನ್ ಸರ್ಕಾರವಷ್ಟೇ ಬೇಕಿಲ್ಲ, ಸಿಂಗಲ್ ಡ್ರೈವರ ಇರುವ ಡಬಲ್ ಇಂಜಿನ್ ಸರ್ಕಾರ ಬೇಕಾಗಿದೆ. ಅಂದರೆ ದೆಹಲಿಯಲ್ಲಿಯೂ ಮೋದಿಯವರೇ ಚಾಲಕರು, ಬೆಂಗಳೂರಿನಲ್ಲೂ ಮೋದಿಯವರೇ ಚಾಲಕರು. ಇದನ್ನು ಗೃಹ ಮಂತ್ರಿ ಅಮಿತ್‌ ಶಾ ಅವರೇ ಹೇಳಿದ್ದಾರೆ. “ಅಭಿವೃದ್ಧಿಗಾಗಿ ಕರ್ನಾಟಕದ ಭವಿಷ್ಯವನ್ನು ನರೇಂದ್ರ ಮೋದಿಯವರಿಗೆ ಒಪ್ಪಿಸಿ ಎಂದು ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ. ಬಿಜೆಪಿ ಶಾಸನದಲ್ಲಿ ಕರ್ನಾಟಕದ ಮುಖ್ಯಮಂತ್ರಿಗೆ ಯಾವುದೇ ಕಿಮ್ಮತ್ತಿಲ್ಲ, ಅಧಿಕಾರವಿಲ್ಲ. ಇಲ್ಲಿಯ ಸರ್ಕಾರ ಮೋದಿ – ಶಾ ರಿಮೋಟ್ ಕಂಟ್ರೋಲ್‌ನಿಂದ ನಡೆಯುತ್ತದೆ. ಇದು ಕನ್ನಡಿಗರ ಸ್ವಾಭಿಮಾನಕ್ಕೆ ಕುತ್ತು” ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಳೆ : ನಾಳೆ (ಜು.24) ಬೆಳಗಾವಿ ಜಿಲ್ಲೆಯ 4 ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ

ರಾಜ್ಯದಲ್ಲಿ ಸುಮಾರು 13% ಜನಸಂಖ್ಯೆ ಇರುವ ಮುಸ್ಲಿಂ ಸಮಾಜಕ್ಕೆ ಬಿಜೆಪಿ ಒಂದು ಕ್ಷೇತ್ರದಲ್ಲಿಯೂ ಟಿಕೆಟ್ ಕೊಡದ ಇರುವುದು ಆ ಪಕ್ಷದ ಕೋಮುವಾದಿ ದೃಷ್ಟಿಕೋನವನ್ನು ತೋರಿಸುತ್ತದೆ ಹಾಗೂ ಮೋದಿಯವರ ‘ಸಬಕಾ ಸಾಥ್, ಸಬಕಾ ಸಾಥ್‌ ವಿಕಾಸ್, ಸಬಕಾ ವಿಶ್ವಾಸ’ ಈ ಆಶ್ವಾಸನ ಎಷ್ಟು ಪೊಳ್ಳು ಎಂದು ಇದು ತೋರಿಸುತ್ತದೆ” ಎಂದು ಹೇಳಿದ್ದಾರೆ.
ಆಪರೇಶನ್‌ ಕಮಲ ಕೇವ ಆರ್ಥಿಕ ಭ್ರಷ್ಟಾಚಾರ ಮಾತ್ರವಲ್ಲ, ರಾಜಕೀಯ ಭ್ರಷ್ಟಾಚಾರವೂ ಹೌದು. ಅನೈತಿಕತೆಯೂ ಹೌದು. ಒಂದು ಕಾಲಕ್ಕೆ ಬಿಜೆಪಿ ಭಿನ್ನ ಪಕ್ಷ ಎಂದು ಹಮ್ಮೆಯಿಂದ ಹೇಳುತ್ತಿದ್ದ ಪಕ್ಷ ಇಂದು ಭ್ರಷ್ಟಾಚಾರದ ಹೊಲಸಿನ ರಾಜಕಾರಣ ನಡೆಸುತ್ತಿರುವುದು ಪಂಡಿತ ದೀನದಯಾಳ ಉಪಾಧ್ಯಾಯ, ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿಯವರಂಥ ಮಹಾನ್ ಮತ್ತು ನಿಷ್ಕಳಂಕ ನಾಯಕರಿಗೆ ಮಾಡುತ್ತಿರುವ ಅಪಮಾನ. ನಾನು ಆರ್‌ಎಸ್‌ಎಸ್‌ ಮತ್ತು ಬಿಜೆಪಿಗೆ ಕೇಳುತ್ತೇನೆ ಕರ್ನಾಟಕದಲ್ಲಿ ನಡೆದಿರುವ ಭ್ರಷ್ಟಾಚಾರದ, ಅನೈತಿಕ ರಾಜಕಾರಣ ನಿಮಗೆ ಒಪ್ಪಿಗೆ ಇದೆಯೇ? ಒಪ್ಪಿಗೆ ಇಲ್ಲವಾದರೆ ನೀವು ಇದರ ವಿರುದ್ಧ ನೀವು ದನಿ ಎತ್ತಿ ಎಂದು ಅವರು ಒತ್ತಾಯಿಸಿದ್ದಾರೆ.

ಪ್ರಮುಖ ಸುದ್ದಿ :-   ಭೂ ವಿವಾದ : ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡು ಇಬ್ಬರು ಸೋದರ ಸಂಬಂಧಿಗಳು ಸಾವು

0 / 5. 0

ಶೇರ್ ಮಾಡಿ :

  1. VIRUPAXAYYA. G. M

    ಸುಧೀಂದ್ರ ಕುಲಕರ್ಣಿ ಒಬ್ಬ ಭಾರತೀಯ ಪ್ರಜೆಯಾಗಿ ಸದಾ ಮುಸ್ಲಿಮರ ತುಷ್ಟೀಕರಣ, ಇಸ್ಲಾಮಿಕ್ ಭಯೋತ್ಪಾದಕರ ರಕ್ಷಣೆಗೆ ಟೊಂಕ ಕಟ್ಟಿ ನಿಂತಿರುವ, ಸ್ವತಃ ಗೂಂಡಾ ಸಂಸ್ಕೃತಿಯ ಹಿನ್ನೆಲೆಯುಳ್ಳ, ದುಷ್ಕರ್ಮಿಗಳು ಕೂಟವಾದ ಕಾಂಗ್ರೆಸ್ ಪಕ್ಷದ ಪರವಾಗಿ ಹೇಳಿಕೆ ಕೊಡುವುದು ನೋಡಿದರೆ ತುಂಬಾ ತುಂಬಾ ಖೇದವಾಗುತ್ತದೆ, ಅಸಹ್ಯವಾಗುತ್ತದೆ. ಇಂತಾ ದೇಶದ್ರೋಹಿಗಳ ಹೇಳಿಕೆಗಳಿಗೆ ಯಾರೂ ಕಿವಿಗೊಡಬಾರದು ಮತ್ತು ಓದಲೇಬಾರದು. ಇಂತಾ ಪ್ರಜಾಪ್ರಭುತ್ವ ವಿರೋಧಿಗಳ ಹೇಳಿಕೆಗಳನ್ನು ‘ಕನ್ನಡಿ’ ಯನ್ನೊಳಗೊಂಡು ಯಾರೂ ಪ್ರಕಟಿಸಬಾರದು ಎಂದು ವಿನಂತಿಸಿಕೊಳ್ಳುತ್ತೇನೆ. ಇಲ್ಲದಿದ್ದರೆ ಬೇಸರದಿಂದ ಮನಸ್ಸಿಲ್ಲದಿದ್ದರೂ ‘ಕನ್ನಡಿ’ ಯ ಸಂಬಂಧವನ್ನು ಡಿಸ್ ಕನೆಕ್ಷಟ್ ಮಾಡುವ ಮೂಲಕ ಯಾವುದೇ ಸುದ್ದಿಗಳನ್ನು ಓದುವುದನ್ನು ಬಿಡಬೇಕಾಗುತ್ತದೆ ಎಂದು ವಿಷಾದದಿಂದ ಹೇಳುತ್ತಿದ್ದೇನೆ. ಒಳ್ಳೆಯದಾಗಲಿ. ಶುಭವಾಗಲಿ. ನಮಸ್ಕಾರಗಳು. ಇತಿ ನಿಮ್ಮ ನೆಚ್ಚಿನ ಓರ್ವ ಸಾಮಾನ್ಯ ವಾಚಕ. – – ವಿರುಪಾಕ್ಷಯ್ಯ ಜಿ ಮರಿಬಸಯ್ಯನವರ, ಧಾರವಾಡ. 03.05.2023, ಬುಧವಾರ,ಮಧ್ಯಾಹ್ನ 02 ಗಂಟೆ 50 ನಿಮಿಷಗಳು.

ನಿಮ್ಮ ಕಾಮೆಂಟ್ ಬರೆಯಿರಿ

advertisement