ಉತ್ತರ ಪ್ರದೇಶ : ಪೊಲೀಸ್‌ ಎನ್‌ಕೌಂಟರಿನಲ್ಲಿ ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್‌ ಸಾವು

ಮೀರತ್: ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆಯು ಮತ್ತೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರನನ್ನು ಎನ್‌ಕೌಂಟರ್‌ನಲ್ಲಿ ಹೊಡೆದುರುಳಿಸಿದೆ.
ದೆಹಲಿ ಸಮೀಪದ ನೋಯ್ಡಾ, ಘಾಜಿಯಾಬಾದ್ ಮತ್ತು ಇತರ ಪ್ರದೇಶಗಳಲ್ಲಿ ಜನರನ್ನು ಭೀತಿಗೊಳಿಸಿದ್ದ ಅನಿಲ ದುಜಾನಾ ಮೀರತ್‌ನಲ್ಲಿ ಯುಪಿ ಪೊಲೀಸರ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಎನ್‌ಕೌಂಟರ್‌ನಲ್ಲಿ ಸತ್ತಿದ್ದಾನೆ. ಆತನ ಮೇಲೆ 60 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಿವೆ.
ಕೊಲೆ ಪ್ರಕರಣವೊಂದರಲ್ಲಿ ಜಾಮೀನು ಪಡೆದು ವಾರದ ಹಿಂದೆಯಷ್ಟೇ ಜೈಲಿನಿಂದ ಅನಿಲ ದುಜಾನಾ ಬಿಡುಗಡೆಯಾಗಿದ್ದ. ಅದರ ನಂತರ, ಅವನು ತನ್ನ ವಿರುದ್ಧ ದಾಖಲಾದ ಕೊಲೆ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬನಿಗೆ ಬೆದರಿಕೆ ಹಾಕಲು ಪ್ರಾರಂಭಿಸಿದ್ದ. ದುಜಾನಾ ಸಾಕ್ಷಿಯನ್ನು ಕೊಲ್ಲಲು ನಿರ್ಧರಿಸಿದ್ದ ಎಂದು ಮೂಲಗಳು ತಿಳಿಸಿವೆ.
ನಂತರ ಎಸ್‌ಟಿಎಫ್ ಆತನನ್ನು ಬಂಧಿಸಲು ಮುಂದಾಯಿತು. ಕಾರ್ಯಾಚರಣೆಯ ಸಮಯದಲ್ಲಿ, ದುಜಾನಾ ಮತ್ತು ಆತನ ಗ್ಯಾಂಗ್ ಪೊಲೀಸರತ್ತ ಗುಂಡಿನಚಕಮಕಿಯಲ್ಲಿ ತೊಡಗಿಕೊಂಡರು. ಇದು ಆತನ ಸಾವಿಗೆ ಕಾರಣವಾಯಿತು ಎಂದು ಮೂಲಗಳು ತಿಳಿಸಿವೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಮೀರತ್‌ನ ಹಳ್ಳಿಯೊಂದರಲ್ಲಿ ಎತ್ತರದ ಪೊದೆಗಳಿಂದ ಆವೃತವಾದ ರಸ್ತೆಯಲ್ಲಿ ಎನ್‌ಕೌಂಟರ್ ಸಂಭವಿಸಿದೆ. ಆತ ಮತ್ತು ಆತನ ಗ್ಯಾಂಗ್ ಅಲ್ಲಿ ಅಡಗಿಕೊಂಡಿತ್ತು ಮತ್ತು ಬಂಧಿಸಲು ಹೋದ ಎಸ್‌ಟಿಎಫ್ ಕಾರ್ಯಕರ್ತರ ಮೇಲೆ ಗ್ಯಾಂಗ್‌ ಗುಂಡು ಹಾರಿಸಿತು ತಕ್ಷಣ ಪೊಲೀಸರ ತಂಡವೂ ಗುಂಡು ಹಾರಿಸಿತು ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿಯಲ್ಲಿ ಬಹುಜನ ಸಮಾಜ ಪಕ್ಷದ ನಾಯಕನ ಕೊಲೆ ಪ್ರಕರಣದ ಸಾಕ್ಷಿಯನ್ನು ಗ್ಯಾಂಗ್‌ಸ್ಟರ್‌ ಅತೀಕ್ ಅಹ್ಮದ್ ಪುತ್ರ ಅಸದ್ ಅಹ್ಮದ್ ಗುಂಡಿಕ್ಕಿ ಕೊಂದಿದ್ದ. ಅಸದ್ ಕಳೆದ ತಿಂಗಳು ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಮತ್ತು ಆತನ ತಂದೆ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ ಆಸ್ಪತ್ರೆಯ ಬಳಿ ಕ್ಯಾಮೆರಾದಲ್ಲಿ ಆತನ ವಿರೋಧಿಗಳು ಗುಂಡಿನ ದಾಳಿ ನಡೆಸಿ ಕೊಂದಿದ್ದರು.
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಾಜ್ಯದಿಂದ ಕಠಿಣ ಅಪರಾಧಿಗಳು ಮತ್ತು ಗ್ಯಾಂಗ್‌ಸ್ಟರ್‌ಗಳನ್ನು ತೊಡೆದುಹಾಕಲು ಉದ್ದೇಶಿಸಿರುವುದಾಗಿ ಹಲವು ಬಾರಿ ಹೇಳಿದ್ದಾರೆ. ಯೋಗಿ ಆದಿತ್ಯನಾಥ ಮುಖ್ಯಮಂತ್ರಿಯಾದ ನಂತರ ಮಾರ್ಚ್ 2017 ರಿಂದ, 183 ಗ್ಯಾಂಗ್‌ಸ್ಟರ್‌ಗಳು ಎನ್‌ಕೌಂಟರ್‌ಗಳಲ್ಲಿ ಸತ್ತಿದ್ದಾರೆ ಎಂದು ಉತ್ತರ ಪ್ರದೇಶ ಪೊಲೀಸರು ಕಳೆದ ತಿಂಗಳು ಹೇಳಿದ್ದಾರೆ. ಇದೇ ಅವಧಿಯಲ್ಲಿ ಹದಿಮೂರು ಪೊಲೀಸರು ಸಹ ಸಾವಿಗೀಡಾಗಿದ್ದಾರೆ. ಅವರಲ್ಲಿ ಎಂಟು ಮಂದಿಯನ್ನು ಗ್ಯಾಂಗ್‌ಸ್ಟರ್‌ ವಿಕಾಸ್ ದುಬೆಯ ಸಹಾಯಕರು ಕಾನ್ಪುರದ ಕಿರಿದಾದ ಲೇನ್‌ನಲ್ಲಿ ಹೊಂಚು ಹಾಕಿ ಗುಂಡು ಹಾರಿಸಿ ಕೊಂದಿದ್ದರು. ನಂತರ ನಡೆದ ಎನ್‌ಕೌಂಟರ್‌ನಲ್ಲಿ ಗ್ಯಾಂಗ್‌ಸ್ಟರ್‌ ವಿಕಾಸ್ ದುಬೆಯನ್ನು ಕೊಲ್ಲಲಾಯಿತು.

ಇಂದಿನ ಪ್ರಮುಖ ಸುದ್ದಿ :-   ಅಮಿತ್ ಶಾ ಭೇಟಿಗೂ ಮುನ್ನ ಮಣಿಪುರದಲ್ಲಿ ಬಂದೂಕು ಸಮೇತ 25 ಮಂದಿ ಬಂಧನ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement