ಪ್ರತಿ ದಿನ ಕುಡಿದು ಬಂದು ಅಮ್ಮನಿಗೆ ಹೊಡೆಯುತ್ತಾನೆಂದು ಅಪ್ಪನ ವಿರುದ್ಧವೇ ಪೊಲೀಸ್‌ ಠಾಣೆಗೆ ಬಂದು ದೂರು ನೀಡಿದ 9 ವರ್ಷದ ಬಾಲಕ…!

ಆಂಧ್ರಪ್ರದೇಶದಲ್ಲಿ ಒಂಬತ್ತು ವರ್ಷದ ಬಾಲಕನೊಬ್ಬ ತನ್ನ ಅಪ್ಪನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾನೆ. ನೇರವಾಗಿ ಠಾಣೆಗೆ ಹೋಗಿ ಪೊಲೀಸ್‌ ಇನ್ಸ್ಪೆಕ್ಟರ್‌ ಅವರನ್ನು ಭೇಟಿ ಮಾಡಿ ತನ್ನ ನೋವನ್ನೆಲ್ಲ ಹೇಳಿಕೊಂಡಿದ್ದಾನೆ. ಈ ಪುಟ್ಟ ಬಾಲಕನ ಧೈರ್ಯಕ್ಕೆ ಪೊಲೀಸರೂ ಬೆರಗಾದರು.
ಬಾಪಟ್ಲಾ ಜಿಲ್ಲೆಯ ಕರ್ಲಪಾಲೆಂನ ಹಳೆ ಇಸ್ಲಾಂಪೇಟೆಯ ಸುಭಾನಿ ಮತ್ತು ಸುಭಾಂಬಿ ಪತಿ-ಪತ್ನಿ.. ಅವರಿಗೆ ಒಬ್ಬ ಮಗನಿದ್ದಾನೆ. ಸುಭಾನಿ ಮರದ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದು.. ಸುಭಾಂಬಿ ಮನೆಯಲ್ಲೇ ಇರುತ್ತಾಳೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಸುಭಾನಿಗೆ ಕುಡಿತದ ಚಟವಿದ್ದು,. ನಿತ್ಯ ರಾತ್ರಿ ಕುಡಿದು ಮನೆಗೆ ಬಂದು ಪತ್ನಿಗೆ ಅಮಾನುಷವಾಗಿ ಚಿತ್ರಹಿಂಸೆ ನೀಡುತ್ತಿದ್ದ. ಒಂಬತ್ತು ವರ್ಷದ ಮಗ ರಹೀಮ್ ತನ್ನ ತಂದೆ ಸುಭಾನಿ ತನ್ನ ತಾಯಿಯನ್ನು ಪ್ರತಿದಿನ ಥಳಿಸುವುದನ್ನು ಸಹಿಸಲಿಲ್ಲ. ತನ್ನ ತಾಯಿಯ ನೋವನ್ನು ನೋಡಲಾಗದ ಆತ ನೇರವಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಹೋಗಿದ್ದಾನೆ. ಆತ ತನ್ನ ತಾಯಿಗೆ ಅಪ್ಪ ಕುಡಿದುಬಂದು ಹೊಡೆಯುವುದನ್ನು ಹೇಳಿದ್ದಾನೆ. ಅಲ್ಲದೆ, ಕೂಡಲೇ ತಂದೆಗೆ ಕರೆ ಮಾಡಿ ಎಚ್ಚರಿಕೆ ನೀಡಿ ಛೀಮಾರಿ ಹಾಕುವಂತೆ ಪೊಲೀಸ್‌ ಇನ್ಸ್ಪೆಕ್ಟರ್‌ ಅವರಿಗೆ ತಿಳಿಸಿದ್ದಾನೆ.

ಇಂದಿನ ಪ್ರಮುಖ ಸುದ್ದಿ :-   ರೆಪೊ ದರ ಬದಲಾವಣೆ ಮಾಡದೆ ಹಾಗೆಯೇ ಇರಿಸಿದ ಆರ್‌ ಬಿಐ

ಬಾಲಕನ ದೂರಿನ ಮೇರೆಗೆ ಎಸ್‌ಎಸ್‌ಐ ಕೂಡಲೇ ದಂಪತಿಯನ್ನು ಕರೆಸಿ ಕೌನ್ಸೆಲಿಂಗ್‌ ಮಾಡಿದ್ದಾರೆ. ಮತ್ತೆ ಇಂತಹುದೇ ಪುನರಾವರ್ತನೆಯಾದಲ್ಲಿ ಅದನ್ನು ಕ್ರಮ ಕೈಗೊಳ್ಳಬೇಕಾಗುತ್ತದೆ. ಇದು ಮುಂದುವರಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಬಾಲಕನ ಧೈರ್ಯಕ್ಕೆ ಪೊಲೀಸರು ಮೆಚ್ಚಿದ್ದಾರೆ. ಈ ಪ್ರಸಂಗದ ವಿಡಿಯೋವೊಂದು ಇಂಟರ್​​ ನೆಟ್‌ ಜಾಲತಾಣದಲ್ಲಿ ಈಗ ಹರಿದಾಡುತ್ತಿದೆ. ಈ ಘಟನೆಯ ನಂತರ ಬಾಲಕನ ಧೈರ್ಯಕ್ಕೆ ಸ್ಥಳೀಯವಾಗಿ ಮೆಚ್ಚುಗೆ ವ್ಯಕ್ತವಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement