ಮಲ್ಲಿಕಾರ್ಜುನ ಖರ್ಗೆ, ಕುಟುಂಬಸ್ಥರ ಹತ್ಯೆಗೆ ಬಿಜೆಪಿ ನಾಯಕನ ಸಂಚು: ಸುರ್ಜೇವಾಲ ಗಂಭೀರ ಆರೋಪ

posted in: ರಾಜ್ಯ | 1

ಬೆಂಗಳೂರು: ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಅವರ ಕುಟುಂಬವನ್ನು ಹತ್ಯೆ ಮಾಡಲು ಭಾರತೀಯ ಜನತಾ ಪಕ್ಷವು (ಬಿಜೆಪಿ) ಯೋಜಿಸುತ್ತಿದೆ ಎಂದು ಕಾಂಗ್ರೆಸ್ ಶನಿವಾರ ಆರೋಪಿಸಿದೆ.
ಚಿತ್ತಾಪುರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು ಖರ್ಗೆ ಅವರ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಮತ್ತು ಅವರನ್ನು ಮತ್ತು ಅವರ ಕುಟುಂಬವನ್ನು ಸಾಫ್ ಮಾಡುವ ಬಗ್ಗೆ ಮಾತನಾಡಿದ್ದಾರೆ ಇದು ತುಂಬಾ ಅಪಾಯಕಾರಿ ನಡೆಯಾಗಿದ್ದು, ಖರ್ಗೆಯವರ ಕುಟುಂಬ ಆತಂಕದಲ್ಲಿದೆ ಎಂದು ರಣ್​​ದೀಪ್ ಸುರ್ಜೇವಾಲಾ ಹೇಳಿದರು. ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಣಿಕಾಂತ್‌ ರಾಥೋಡ್‌ ಅವರದ್ದು ಎಂದು ಹೇಳಲಾದ ಆಡಿಯೋ ಕ್ಲಿಪ್ ಅನ್ನು ಪ್ರದರ್ಶಿಸಿದರು.
“ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅವರ ಪತ್ನಿ ಮತ್ತು ಅವರ ಮಕ್ಕಳ ಹತ್ಯೆಗೆ ಸಂಚು ರೂಪಿಸಿರುವುದನ್ನು ಯಾರೂ ತಳ್ಳಿಹಾಕುವ ವಿಷಯವಲ್ಲ” ಎಂದು ಕಾಂಗ್ರೆಸ್ ನಾಯಕ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.
ಈತ ಸಾಮಾನ್ಯ ವ್ಯಕ್ತಿಯಲ್ಲ, ಇದು ನೀಲಿ ಕಣ್ಣಿನ ಹುಡುಗ, ಚಿತ್ತಾಪುರ ಬಿಜೆಪಿ ಅಭ್ಯರ್ಥಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಟ್ರ್ಯಾಕ್ ರೆಕಾರ್ಡ್ ನನಗಿಂತ ನಿಮಗೆ ಚೆನ್ನಾಗಿ ತಿಳಿದಿದೆ ಎಂದು ಸುರ್ಜೆವಾಲಾ ಹೇಳಿದರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   ಅನ್ನಭಾಗ್ಯ, ಯುವ ನಿಧಿ ಗ್ಯಾರಂಟಿ ಯೋಜನಗಳಿಗೆ ಮಾರ್ಗಸೂಚಿ ಪ್ರಕಟಿಸಿದ ಸರ್ಕಾರ

ಪ್ರಧಾನಿ ಮೌನವಾಗಿರುತ್ತಾರೆ ಎಂದು ನನಗೆ ತಿಳಿದಿದೆ, ಹಾಗೆಯೇ ಕರ್ನಾಟಕ ಪೊಲೀಸರು ಮತ್ತು ಭಾರತದ ಚುನಾವಣಾ ಆಯೋಗವೂ ಮೌನವಾಗಿರುತ್ತದೆ. ಆದರೆ ಕರ್ನಾಟಕದ ಜನರು ಸುಮ್ಮನಿರುವುದಿಲ್ಲ ಮತ್ತು ತಕ್ಕ ಉತ್ತರ ನೀಡುತ್ತಾರೆ ಎಂದು ಅವರು ಹೇಳಿದರು.
ಚಿತ್ತಾಪುರ ಕ್ಷೇತ್ರದಿಂದ ಮಲ್ಲಿಕಾರ್ಜುನ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಮಣಿಕಂಠ ರಾಠೋಡ್ ಸ್ಪರ್ಧಿಸಿದ್ದಾರೆ. ವಿವಾದಿತ ಬಿಜೆಪಿ ಅಭ್ಯರ್ಥಿಯನ್ನು ಈ ಹಿಂದೆ ಕಲಬುರಗಿಯಿಂದ ಒಂದು ವರ್ಷದವರೆಗೆ ಗಡಿಪಾರು ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ 13 ರಂದು ಪ್ರಿಯಾಂಕ್ ಖರ್ಗೆಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪದ ಮೇಲೆ ಅವರನ್ನು ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

  1. VIRUPAXAYYA. G. M.

    ಇದು ಕಾಂಗ್ರೆಸ್ ನ ಚುನಾವಣೆಯ ಠಕ್ಕ ಹೇಳಿಕೆ ಅಷ್ಟೇ. ಈ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪಗಳು ಸಾಮಾನ್ಯ. ಅವುಗಳಿಗೆ ಸಾಮಾನ್ಯ ಜನರು ಹೆಚ್ಚಾಗಿ ಕಿವಿಗೊಡದೇ ಒಳ್ಳೆಯ ಪಕ್ಷ, ಒಳ್ಳೆಯ ವ್ಯಕ್ತಿ ನೋಡಿ ದೇವರ ಮೇಲೆ ಭಾರ ಹಾಕಿ ನಮಗೆ ಒಳ್ಳೆಯದಾಗಲಿ ಎಂದು ಭಾವಿಸುತ್ತಾ ಮೇ10, 2023 ಬುಧವಾರದಂದು ನಮ್ಮ ಅತ್ಯಮೂಲ್ಯ ಮತವನ್ನು ತಪ್ಪದೇ ಚಲಾಯಿಸಿದರಾಯಿತು.ಒಳೈಯದಾಗಲಿ. ನಮಸ್ಕಾರಗಳು.

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement