ಸರ್ವರಿಗೂ ಕ್ರೋಧಿ ಸಂವತ್ಸರದ ಯುಗಾದಿಯ ಹಾರ್ದಿಕ ಶುಭಾಶಯಗಳು

ವಿಜಯಪುರದಲ್ಲಿ ಹಾಡಹಗಲೇ ಗುಂಡಿನ ಸದ್ದು: ಮಹಾನಗರ ಪಾಲಿಕೆಯ ಸದಸ್ಯೆಯ ಪತಿಯ ಹತ್ಯೆ

ವಿಜಯಪುರ : ವಿಜಯಪುರ ನಗರದಲ್ಲಿ ಹಾಡುಹಗಲೇ ಗುಂಡಿನ ದಾಳಿ ನಡೆದಿದೆ. ಮಹಿಳಾ ಪಾಲಿಕೆಯ ಮಹಿಳಾ ಸದಸ್ಯರೊಬ್ಬರ ಪತಿಯನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ರೌಡಿ ಶೀಟರ್ ಆಗಿದ್ದ ಹೈದರ್ ಅಲಿ ನದಾಫ್ ಎಂಬವರ ಮೇಲೆ ಏಕಾಏಕಿ ಗುಂಡಿನ ದಾಳಿ‌ ನಡೆದ ಪರಿಣಾಮ ಹೈದರ್ ನದಾಫ್ ಸ್ಥಳದಲ್ಲಿಯೇ ಮೃತಪಟ್ಟದ್ದಾನೆ ಎಂದು ವರದಿಯಾಗಿದೆ.
ವಿಜಯಪುರ ನಗರದಲ್ಲಿ ಚಾಂದ್‌ ಪುರ ಕಾಲೋನಿ ಬಳಿ‌ ಇರುವ ತನ್ನ ನಿವಾಸದಿಂದ ಹೊರ ಬಂದಾಗ ದುಷ್ಕರ್ಮಿಗಳು, ಹೈದರ್‌ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಿಂದ ತಪ್ಪಿಸಿಕೊಳ್ಳಲು ಹೈದರ್ ಓಡಿ ಹೋಗಲು ಯತ್ನಿಸಿದ್ದಾನೆ. ಆದರೆ ಬೆನ್ನಟ್ಟಿದ್ದ ದುಷ್ಕರ್ಮಿಗಳು 5 ರಿಂದ 6 ಸುತ್ತು ಗುಂಡಿನ ದಾಳಿ ನಡೆಸಿದ್ದಾರೆ. ಹಾಡಹಗಲೇ ಈ ಶೂಟೌಟ್ ನಡೆದಿದ್ದು ಜನರನ್ನು ಬೆಚ್ಚಿ ಬೀಳಿಸಿದೆ.
ಸ್ಥಳಕ್ಕೆ ಹಿರಿಯ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪಾಲಿಕೆ ಚುನಾವಣೆಯಲ್ಲಿ ಹೈದರ್ ನದಾಫ್ ವಾರ್ಡ್ ನಂ.19 ರಿಂದ ತಮ್ಮ ಪತ್ನಿ ನಿಶಾತ್ ನದಾಫ್ ಅವರನ್ನು ಪಕ್ಷೇತರವಾಗಿ ಕಣಕ್ಕಿಳಿಸಿ ಗೆಲುವು ಸಾಧಿಸಿದ್ದರು. ಆದರೆ ದಾಳಿಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಪ್ರಮುಖ ಸುದ್ದಿ :-   ಬೆಂಗಳೂರು : ಇಬ್ಬರು ಮಕ್ಕಳನ್ನು ಕೊಂದಿದ್ದ ತಾಯಿ ಜೈಲಿನಲ್ಲಿ ಆತ್ಮಹತ್ಯೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement