ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು 5 ಕೆಜಿ ಸುಧಾರಿತ ಸ್ಫೋಟಕ ಸಾಧನದೊಂದಿಗೆ (IED) ಉಗ್ರಗಾಮಿ ಸಹಚರನನ್ನು ಬಂಧಿಸಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭಾನುವಾರ ಸಂಭವನೀಯ ದೊಡ್ಡ ದುರಂತವೊಂದನ್ನು ತಪ್ಪಿಸಲಾಗಿದೆ ಎಂದು ಹೇಳಿದ್ದಾರೆ.
ಉಗ್ರಗಾಮಿ ಸಹಚರನನ್ನು ಬುದ್ಗಾಮ್‌ನ ಅರಿಗಮ್ ನಿವಾಸಿ ಇಶ್ಫಾಕ್ ಅಹ್ಮದ್ ವಾನಿ ಎಂದು ಗುರುತಿಸಲಾಗಿದೆ.
ಕಾಶ್ಮೀರ ವಲಯ ಪೊಲೀಸರ ಟ್ವೀಟ್, “ಪುಲ್ವಾಮಾ ಪೊಲೀಸರು ಭಯೋತ್ಪಾದಕರ ಸಹಚರ ಇಶ್ಫಾಕ್ ಅಹ್ಮದ್ ವಾನಿ ಬಂಧಿಸುವ ಮೂಲಕ ಮತ್ತು ಆತ ಹೇಳಿದ ಮಾಹಿತಿಯ ಮೇರೆಗೆ ಐಇಡಿ (ಸುಮಾರು 5-6 ಕೆಜಿ) ವಶಪಡಿಸಿಕೊಳ್ಳಲಾಗಿದ್ದು, ಇದರಿಂದ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ತಿಳಿಸಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕಳೆದ ಶುಕ್ರವಾರ ರಜೌರಿ ಸೆಕ್ಟರ್‌ನಲ್ಲಿ ಉಗ್ರರನ್ನು ಹೊರಹಾಕಲು ಪಡೆಗಳು ತೆರಳಿದಾಗ ಭಯೋತ್ಪಾದಕರು ಸ್ಫೋಟಕ ಸ್ಫೋಟಿಸಿದ ನಂತರ ಐವರು ಸೈನಿಕರು ಪ್ರಾಣ ಕಳೆದುಕೊಂಡಿದ್ದರು. ಶನಿವಾರ, ಒಬ್ಬ ಭಯೋತ್ಪಾದಕ ತನ್ನ ಸಹಚರರೊಂದಿಗೆ ಭದ್ರತಾ ಪಡೆಗಳೊಂದಿಗೆ ಮುಖಾಮುಖಿಯಾದಾಗ ಆತನನ್ನು ಹೊಡೆದುರುಳಿಸಲಾಯಿತು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ