ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು : 3 ತಿಂಗಳಲ್ಲಿ 3ನೇ ಚೀತಾ ಸಾವು

ಕುನೋ : ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ದಕ್ಷಿಣ ಆಫ್ರಿಕಾದಿಂದ ತಂದಿದ್ದ ಹೆಣ್ಣು ಚೀತಾವೊಂದು ಮೃತಪಟ್ಟಿದೆ ಎಂದು ವರದಿಯಾಗಿದೆ.
ದಕ್ಷಾ ಹೆಸರಿನ ಹೆಣ್ಣು ಚಿರತೆ ಉಳಿದ ಚೀತಾಗಳ ಜೊತೆ ನಡೆದ ಕಾದಾಟದಲ್ಲಿ ಮೃತಪಟ್ಟಿದೆ ಎಂದು ವರದಿಯಾಗಿದೆ. ಗಂಡು ಚೀತಾಗಳ ಜೊತೆ ನಡೆದ ಕಾದಾಟದಲ್ಲಿ ಈ ಹೆಣ್ಣು ಚೀತಾ ಸಾವಿಗೀಡಾಗಿದ್ದು, ದಕ್ಷಿಣ ಆಫ್ರಿಕಾ ಮತ್ತು ನಮೀಬಿಯಾದಿಂದ ಚೀತಾಗಳನ್ನು ತಂದ ನಂತರ ಕುನೋದಲ್ಲಿ ಮೃತಪಟ್ಟ ಮೂರನೇ ಚೀತಾ ಇದಾಗಿದೆ.
ಕಳೆದ ವರ್ಷದಿಂದ ಇಪ್ಪತ್ತು ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದ್ದು, ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ ಎರಡು ಚೀತಾಗಳು ಸಾವಿಗೀಡಾಗಿವೆ.
ಸಶಾ ಎಂಬ ಹೆಸರಿನ ಚೀತಾ ಭಾರತಕ್ಕೆ ಕರೆತರುವ ಮೊದಲು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿತ್ತು. ಎಪ್ರಿಲ್‌ನಲ್ಲಿ ಎರಡನೇ ಚೀತಾ ಉದಯ್ ರಾಷ್ಟ್ರೀಯ ಉದ್ಯಾನವನದಲ್ಲಿ ಅಸ್ವಸ್ಥಗೊಂಡಿತ್ತು ಹಾಗೂ ನಂತರ ಚಿಕಿತ್ಸೆ ವೇಳೆ ಸಾವಿಗೀಡಾಗಿತ್ತು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement