10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ವಾಹಗಳನ್ನು ನಿಷೇಧಿಸಿ: ಸರ್ಕಾರಕ್ಕೆ ತೈಲ ಸಚಿವಾಲಯ ಸಮಿತಿ ಶಿಫಾರಸು

ನವದೆಹಲಿ: ಭಾರತವು 2027 ರ ವೇಳೆಗೆ 10 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಡೀಸೆಲ್ ಚಾಲಿತ ನಾಲ್ಕು ಚಕ್ರ ವಾಹನಗಳ ಬಳಕೆಯನ್ನು ನಿಷೇಧಿಸಬೇಕು ಮತ್ತು ಎಲೆಕ್ಟ್ರಿಕ್ ಮತ್ತು ಅನಿಲ ಇಂಧನ ವಾಹನಗಳಿಗೆ ಬದಲಾಯಿಸಬೇಕು ಎಂದು ತೈಲ ಸಚಿವಾಲಯವು ನಿಯೋಜಿಸಿದ ಸಮಿತಿಯ ವರದಿ ಶಿಫಾರಸು ಮಾಡಿದೆ.
ಮಾಜಿ ತೈಲ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಸಮಿತಿಯ ವರದಿಯು 2035 ರ ವೇಳೆಗೆ ಆಂತರಿಕ ದಹನಕಾರಿ ಎಂಜಿನ್ ಹೊಂದಿರುವ ಮೋಟಾರ್‌ಸೈಕಲ್‌ಗಳು, ಸ್ಕೂಟರ್‌ಗಳು ಮತ್ತು ತ್ರಿಚಕ್ರ ವಾಹನಗಳನ್ನು ಹಂತಹಂತವಾಗಿ ನಿಲ್ಲಿಸುವಂತೆ ಸೂಚಿಸಿದೆ. ಸುಮಾರು 10 ವರ್ಷಗಳಲ್ಲಿ ನಗರ ಪ್ರದೇಶಗಳಲ್ಲಿ ಯಾವುದೇ ಡೀಸೆಲ್ ಬಳಕೆಯ ಸಿಟಿ ಬಸ್‌ಗಳನ್ನು ಹೊಸದಾಗಿ ಸೇರ್ಪಡೆ ಮಾಡಬಾರದು ಎಂದು ಹೇಳಿದೆ. ಸಮಿತಿಯು ಈ ವರ್ಷದ ಫೆಬ್ರವರಿಯಲ್ಲಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದು, ವರದಿಯನ್ನು ಸರ್ಕಾರ ಇನ್ನೂ ಅಂಗೀಕರಿಸಿಲ್ಲ.
2035 ರ ವೇಳೆಗೆ ಆಂತರಿಕ ದಹನಕಾರಿ ಎಂಜಿನ್ ಎರಡು / ಮೂರು ಚಕ್ರದ ವಾಹನಗಳನ್ನು ಹಂತಹಂತವಾಗಿ ಹೊರಹಾಕಲು ತಯಾರಿ ಮಾಡುವಲ್ಲಿ ಎಲೆಕ್ಟ್ರಿಕ್‌ ವಾಹನಗಳನ್ನು ಸೂಕ್ತ ಪರಿಹಾರವಾಗಿ ಪ್ರಚಾರ ಮಾಡಬಹುದು. ಮಧ್ಯಂತರ ಅವಧಿಯಲ್ಲಿ, ಎಥೆನಾಲ್ ಮಿಶ್ರಿತ ಇಂಧನಕ್ಕೆ ಒತ್ತು ನೀಡಬೇಕು ಎಂದು ವರದಿ ಹೇಳಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

ಪ್ರಯಾಣಿಕ ಕಾರುಗಳು ಮತ್ತು ಟ್ಯಾಕ್ಸಿಗಳು ಸೇರಿದಂತೆ ನಾಲ್ಕು-ಚಕ್ರ ವಾಹನಗಳನ್ನು ಭಾಗಶಃ ಎಲೆಕ್ಟ್ರಿಕ್‌ಗೆ ಮತ್ತು ಭಾಗಶಃ ಎಥೆನಾಲ್ ಮಿಶ್ರಿತ ಪೆಟ್ರೋಲ್‌ಗೆ ಪ್ರತಿ ವರ್ಗದಲ್ಲಿ ಸುಮಾರು 50 ಪ್ರತಿಶತದಷ್ಟು ಬದಲಾಯಿಸಲು ಅದು ಕರೆ ನೀಡಿದೆ. “ಡೀಸೆಲ್ ಚಾಲಿತ 4-ಚಕ್ರ ವಾಹನಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣ ಕಡಿಮೆ ಮಾಡಬಹುದು. ಆದ್ದರಿಂದ, ಎಲ್ಲಾ ಹತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ನಗರಗಳಲ್ಲಿ ಮತ್ತು ಹೆಚ್ಚಿನ ಮಾಲಿನ್ಯ ಹೊಂದಿರುವ ಎಲ್ಲಾ ಪಟ್ಟಣಗಳಲ್ಲಿ ಡೀಸೆಲ್ ಚಾಲಿತ ನಾಲ್ಕು-ಚಕ್ರ ವಾಹನಗಳ ನಿಷೇಧವನ್ನು ಐದು ವರ್ಷಗಳಲ್ಲಿ ಅಂದರೆ 2027 ರ ವೇಳೆಗೆ ಜಾರಿಗೊಳಿಸಬೇಕು ಎಂದು ವರದಿ ಹೇಳಿದೆ.
ಎಲೆಕ್ಟ್ರಿಕ್‌ ವಾಹನ(EV)ಗಳಿಗೆ ಪರಿವರ್ತನೆ ವೇಳೆ, CNG ಒಂದು ಪರಿವರ್ತನೆಯ ಇಂಧನವಾಗಿ (10-15 ವರ್ಷಗಳವರೆಗೆ) ಒತ್ತು ನೀಡಬೇಕು ಎಂದು ವರದಿ ಸೂಚಿಸಿದೆ.

ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಹೆಚ್ಚಿಸಲು, ಮಾರ್ಚ್ 31 ರ ನಂತರ ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳ ವೇಗದ ಅಡಾಪ್ಷನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (FAME) ಅಡಿಯಲ್ಲಿ ನೀಡಲಾದ ಪ್ರೋತ್ಸಾಹದ “ಉದ್ದೇಶಿತ ವಿಸ್ತರಣೆ” ಯನ್ನು ಸರ್ಕಾರ ಪರಿಗಣಿಸಬೇಕು ಎಂದು ವರದಿ ಹೇಳಿದೆ.
ವರದಿಯು 2024ರಿಂದ ವಿದ್ಯುತ್ ಚಾಲಿತ ನಗರ ವಿತರಣಾ ವಾಹನಗಳ ಹೊಸ ನೋಂದಣಿಗೆ ಒಲವು ತೋರಿತು ಮತ್ತು ಸರಕು ಸಾಗಣೆಗೆ ರೈಲ್ವೇ ಮತ್ತು ಅನಿಲ ಚಾಲಿತ ಟ್ರಕ್‌ಗಳ ಹೆಚ್ಚಿನ ಬಳಕೆ ಬಗ್ಗೆ ಒಲವು ಸೂಚಿಸಿದೆ. ಈ ಕ್ರಮಗಳು ಭಾರತವು 2070 ರ ವೇಳೆಗೆ ತನ್ನ ಇಂಗಾಲ ಹೊರಸೂಸುವಿಕೆಯನ್ನು ನಿವ್ವಳ ಶೂನ್ಯಕ್ಕೆ ಕಡಿತಗೊಳಿಸುವ ಗುರಿಯನ್ನು ಸಾಧಿಸಲು ಸಹಾಯ ಮಾಡುತ್ತದೆ.

ಪ್ರಮುಖ ಸುದ್ದಿ :-   ಪ್ರಜ್ವಲ್ ರೇವಣ್ಣ ವಿರುದ್ಧ 2ನೇ ಎಫ್ ಐ ಆರ್ ದಾಖಲು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement