ಬಿಡುಗಡೆಗೆ ಮುನ್ನವೇ ‘ಆದಿಪುರುಷ’ ಸಿನೆಮಾ ವಿವಾದ : ಸಿಬಿಎಫ್‌ಸಿ ಮಂಡಳಿಯಲ್ಲಿ ದೂರು ದಾಖಲು

ಮುಂಬೈ: ಪ್ರಭಾಸ ಮತ್ತು ಕೃತಿ ಸನೂನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ʼಆದಿಪುರುಷʼ ಚಿತ್ರ ಜೂನ್‌ 16 ರಂದು ತೆರೆಕಾಣುತ್ತಿದೆ. ಆದರೆ ಚಿತ್ರ ಬಿಡುಗಡೆಗೆ ಮುನ್ನವೇ ಸಿನೆಮಾಕ್ಕೆ ಸಂಕಷ್ಟ ಎದುರಾಗಿದೆ.
ಕೆಲದಿನಗಳ ಹಿಂದೆ ಆದಿಪುರುಷ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿತ್ತು. ಇದರ ಬೆನ್ನಲ್ಲೇ ಸಂಜಯ ದೀನಾನಾಥ ತಿವಾರಿ ಎಂಬುವವರು ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಮಂಡಳಿಯಲ್ಲಿ ಚಲನಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಬಿಡುಗಡೆ ಮಾಡಲಾದ ಪೋಸ್ಟರ್‌ನಲ್ಲಿ ಚಲನಚಿತ್ರ ನಿರ್ಮಾಪಕ ಮತ್ತು ಕಲಾವಿದರು ಗಂಭೀರ ಎನಿಸುವಂತಹ ತಪ್ಪುಗಳನ್ನು ಎಸಗಿದ್ದಾರೆ. ಆದ್ದರಿಂದ ಇಂತಹ ಗಂಭೀರ ತಪ್ಪುಗಳು ಆದಿಪುರುಷ ಚಿತ್ರದಲ್ಲಿ ಮತ್ತೆ ಸಂಭವಿಸುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಚಲನಚಿತ್ರದಲ್ಲಿ ತೋರಿಸಿರುವ ದೃಶ್ಯಗಳು ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಸಾಧ್ಯತೆ ಇದೆ. ಅಲ್ಲದೆ ದೇಶದ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರಬಹುದು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಆದಿಪುರುಷ ಸಿನೆಮಾದ ಬಗ್ಗೆ…
ರಾಮಾಯಣವನ್ನು ಆಧರಿಸಿದ ಆದಿಪುರುಷ ಚಿತ್ರದಲ್ಲಿ ರಾಮನಾಗಿ ಪ್ರಭಾಸ್, ರಾವಣದ ಪಾತ್ರದಲ್ಲಿ ಸೈಫ್ ಅಲಿ ಖಾನ್, ಸೀತೆಯಾಗಿ ಕೃತಿ ಸನೋನ್ ಮತ್ತು ಲಕ್ಷ್ಮಣನಾಗಿ ಸನ್ನಿ ಸಿಂಗ್ ನಟಿಸಿದ್ದಾರೆ. ಚಿತ್ರದಲ್ಲಿ ದೇವದತ್ ನಾಗೆ ಹನುಮಾನ್ ಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಅಜಯ್-ಅತುಲ್ ಸಂಗೀತ ನೀಡಿದ್ದಾರೆ.

ಈ ಚಿತ್ರವು ಸಾಂಕ್ರಾಮಿಕ ರೋಗ ಮತ್ತು ದೀರ್ಘಕಾಲದ ವಿಳಂಬದ ನಂತರ, ಇದು ಅಂತಿಮವಾಗಿ ಜೂನ್ 16, 2023 ರಂದು ಥಿಯೇಟರ್‌ಗಳಿಗೆ ಬರಲು ಸಿದ್ಧವಾಗಿದೆ. ನಿರ್ದೇಶಕ ಓಂ ರಾವತ್​ ಅವರಿಗೆ ‘ಆದಿಪುರುಷ​’ ಚಿತ್ರ ನಿಜಕ್ಕೂ ಸವಾಲಿನ ಪ್ರಾಜೆಕ್ಟ್​. ಯಾಕೆಂದರೆ, ಈ ಸಿನಿಮಾದ ಮೊದಲ ಟೀಸರ್​ ಬಿಡುಗಡೆ ಆದಾಗ ಗ್ರಾಫಿಕ್ಸ್​ ಬಗ್ಗೆ ಟೀಕೆ ವ್ಯಕ್ತವಾಗಿತ್ತು. ಚಿತ್ರತಂಡವನ್ನು ಹಿಗ್ಗಾಮುಗ್ಗಾ ಟ್ರೋಲ್​ ಮಾಡಲಾಗಿತ್ತು. ಈ ಸಿನಿಮಾ 3ಡಿ ಆವೃತ್ತಿಯಲ್ಲಿ ಬಿಡುಗಡೆ ಆಗಲಿದೆ. ಅಭಿಮಾನಿಗಳನ್ನು ಇಂಪ್ರೆಸ್​ ಮಾಡಬೇಕು ಎಂಬ ಕಾರಣಕ್ಕೆ 3ಡಿ ಬಗ್ಗೆ ಚಿತ್ರತಂಡ ವಿಶೇಷ ಕಾಳಜಿ ವಹಿಸಿದೆ ಎಂದು ಹೇಳಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement