ಮೈಸೂರು ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ

ಮೈಸೂರು: ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಸಾಧಿಸಿದ ಬೆನ್ನಲ್ಲೇ ಮೈಸೂರಿನ ರಂಗಾಯಣ ನಿರ್ದೇಶಕ ಸ್ಥಾನಕ್ಕೆ ಅಡ್ಡಂಡ ಕಾರ್ಯಪ್ಪ ರಾಜೀನಾಮೆ ನೀಡಿದ್ದಾರೆ. ನನ್ನನ್ನು ನಿರ್ದೇಶಕನನ್ನಾಗಿ ನೇಮಿಸಿದ ಸರ್ಕಾರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡಿದೆ. ಇದು ಜನಾದೇಶ, ಇದನ್ನು ಗೌರವಿಸುತ್ತೇನೆ. ಈ ಕಾರಣದಿಂದ ನೈತಿಕ ಹೊಣೆ ಹೊತ್ತು ನನ್ನ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಅಡ್ಡಂಡ … Continued

ಕರ್ನಾಟಕದ ಸಿಎಂ ಯಾರು..? : ಆಯ್ಕೆ ನಿರ್ಧಾರ ಖರ್ಗೆ ಹೆಗಲಿಗೆ, ಶಾಸಕಾಂಗ ಸಭೆಯಲ್ಲಿ ಒಂದು ಸಾಲಿನ ನಿರ್ಣಯ

ಬೆಂಗಳೂರು: ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಧಿಕಾರ ನೀಡುವ ಏಕ ಸಾಲಿನ ನಿರ್ಣಯವನ್ನು ಇಂದು ಭಾನುವಾರ ಸಂಜೆ ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇಂದು ಭಾನುವಾರ ಸಂಜೆ ಪಕ್ಷದ ಶಾಸಕಾಂಗ ಸಭೆ ನಗರದ ಹೊಟೇಲ್‌ ಶಾಂಗ್ರಿ-ಲಾದಲ್ಲಿ ನಡೆಯಿತು. ಈ ಸಭೆಯಲ್ಲಿ ಕರ್ನಾಟಕದ ಮುಂದಿನ ಮುಖ್ಯಮಂತ್ರಿಯನ್ನು ಆಯ್ಕೆ … Continued

ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು: ಸಿಎಲ್‌ಪಿ ಸಭೆ ನಡೆಯುತ್ತಿರುವ ಶಾಂಗ್ರಿ – ಲಾ ಹೊಟೇಲ್ ಮುಂದೆ ಡಿಕೆಶಿ-ಸಿದ್ದರಾಮಯ್ಯ ಬೆಂಬಲಿಗರ ಹೈಡ್ರಾಮಾ

ಬೆಂಗಳೂರು: ಇಂದು ಭಾನುವಾರ ಸಂಜೆ ಸಿಎಲ್‌ಪಿ ಸಭೆ ನಡೆಯುತ್ತಿರುವ ಶಾಂಗ್ರಿ – ಲಾ ಹೋಟೆಲ್ ಮುಂದೆ ಹೈಡ್ರಾಮಾ ನಡೆಯುತ್ತಿದೆ. ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಡಿ.ಕೆ.ಶಿವಕುಮಾರ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರವಾಗಿ ಘೋಷಣೆ ಕೂಗುತ್ತಿದ್ದಾರೆ. ಸಿದ್ದರಾಮಯ್ಯ ಫೋಟೋ ಹಿಡಿದುಕೊಂಡು ಅವರ ಬೆಂಬಲಿಗರು ಸಿದ್ದು ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಿದ್ದರೆ, ಡಿ.ಕೆ.ಶಿವಕುಮಾರ ಬೆಂಬಲಿಗರು ಶಿವಕುಮಾರ ಮುಖ್ಯಮಂತ್ರಿ ಎಂದು … Continued

ಕೇರಳ ಕರಾವಳಿಯಲ್ಲಿ ಹಡಗಿನಲ್ಲಿದ್ದ ₹ 12,000 ಕೋಟಿ ಮೌಲ್ಯದ ಡ್ರಗ್ಸ್ ವಶ: ಪಾಕಿಸ್ತಾನದ ವ್ಯಕ್ತಿಯ ಬಂಧನ

ನವದೆಹಲಿ : ಭಾರತೀಯ ನೌಕಾಪಡೆ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಜಂಟಿ ಕಾರ್ಯಾಚರಣೆಯಲ್ಲಿ ಸುಮಾರು ₹ 12,000 ಕೋಟಿ ಮೌಲ್ಯದ ಸುಮಾರು 2,500 ಕಿಲೋಗ್ರಾಂಗಳಷ್ಟು ಮೆಥಾಂಫೆಟಮೈನ್ ಡ್ರಗ್ಸ್‌ ಅನ್ನು ಕೇರಳ ಕರಾವಳಿಯ ಭಾರತೀಯ ಸಮುದ್ರ ಪ್ರದೇಶದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಸಂಸ್ಥೆ ತಿಳಿಸಿದೆ. ಇದು ದೇಶದಲ್ಲಿ ಮೆಥಾಂಫೆಟಮೈನ್‌ನ ಅತಿ ದೊಡ್ಡ ವಶವಾಗಿದೆ ಮತ್ತು ಇದಕ್ಕೆ ಸಂಬಂಧಿಸಿದಂತೆ … Continued

ಐಎನ್‌ಎಸ್ ಮರ್ಮಗೋವಾದಿಂದ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ಷಿಪಣಿ ಯಶಸ್ವಿ ಉಡಾವಣೆ ಮಾಡಿದ ನೌಕಾಪಡೆ

ನವದೆಹಲಿ: ಭಾರತೀಯ ನೌಕಾಪಡೆಯು ತನ್ನ ಮುಂಚೂಣಿ ನಿರ್ದೇಶಿತ ಕ್ಷಿಪಣಿ ನೌಕೆ ಐಎನ್‌ಎಸ್ ಮೊರ್ಮುಗೋವಾ ಬಳಸಿಕೊಂಡು ಭಾನುವಾರ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತನ್ನ ಚೊಚ್ಚಲ ಬ್ರಹ್ಮೋಸ್ ಸೂಪರ್‌ಸಾನಿಕ್ ಕ್ರೂಸ್ ಕ್ಷಿಪಣಿ “ಬುಲ್ಸ್ ಐ” ಅನ್ನು ಹೊಡೆದಿದ್ದಕ್ಕಾಗಿ ಐಎನ್‌ಎಸ್ ಮೊರ್ಮುಗೋವಾವನ್ನು ಅಧಿಕಾರಿ ಶ್ಲಾಘಿಸಿದರು. ಇದು ಭಾರತೀಯ ನೌಕಾಪಡೆಯಿಂದ ಬಳಸಲಾಗುವ ಇತ್ತೀಚಿನ … Continued

ಸಿಬಿಐ ನಿರ್ದೇಶಕರಾಗಿ ಕರ್ನಾಟಕದ ಡಿಜಿಪಿ ಪ್ರವೀಣ ಸೂದ್‌ ನೇಮಕ

ನವದೆಹಲಿ: ಕರ್ನಾಟಕ ಪೊಲೀಸ್‌ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ ಸೂದ್‌ ಅವರು ಕೇಂದ್ರ ತನಿಖಾ ದಳದ (ಸಿಬಿಐ) ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಈಗಿನ ಸಿಬಿಐ ನಿರ್ದೇಶಕ ಸುಬೋಧಕುಮಾರ ಜೈಸ್ವಾಲ್‌ ಅವರ ಎರಡು ವರ್ಷಗಳ ಅಧಿಕಾರವಧಿ ಇದೇ ತಿಂಗಳ 25ಕ್ಕೆ ಕೊನೆಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ, ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ … Continued

ರಾಜ್ಯ ವಿಧಾನಸಭೆ ಚುನಾವಣೆ : ಹಳೆ ಮೈಸೂರು ಭಾಗದಲ್ಲಿ ಅಬ್ಬರಿಸಿದ ಕಾಂಗ್ರೆಸ್‌, ಮಂಕಾದ ಜೆಡಿಎಸ್‌

ಬೆಂಗಳೂರು: ಒಕ್ಕಲಿಗರ ಪ್ರಾಬಲ್ಯವಿರುವ ಹಳೆ ಮೈಸೂರು ಮತ್ತು ಬೆಂಗಳೂರು ಭಾಗದ 11 ಜಿಲ್ಲೆಗಳಲ್ಲಿ ಕಾಂಗ್ರೆಸ್‌ ಬಲ ಹೆಚ್ಚಿಸಿಕೊಂಡಿದ್ದು, ಜೆಡಿಎಸ್‌ ಬಲ ಗಣನೀತವಾಗಿ ಕುಸಿದಿದೆ. 2018ರ ವಿಧಾನಸಭೆ ಚುನಾವಣೆಗೆ ಹೋಲಿಸಿದರೆ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ 14 ಸ್ಥಾನಗಳನ್ನು ಹೆಚ್ಚು ಪಡೆದಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಹಾಸನ, ಮಂಡ್ಯ, ರಾಮನಗರ, ಮೈಸೂರು, … Continued

ʼಸಿಎಂʼ ಅಭ್ಯರ್ಥಿ ಆಯ್ಕೆ ವಿಚಾರ : ದಿಢೀರ್‌ ದೆಹಲಿಗೆ ಹೊರಟ ಖರ್ಗೆ

ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಹುಮತದ ಗೆಲುವು ಸಾಧಿಸಿರುವ ಕಾಂಗ್ರೆಸ್‌ನಲ್ಲಿ ಈಗ ಮುಖ್ಯಮಂತ್ರಿ ಆಯ್ಕೆ ಮಾಡುವ ಕುರಿತು ಕಸರತ್ತು ಶುರುವಾಗಿದ್ದು, ಇಂದು, ಭಾನುವಾರ ಮಧ್ಯಾಹ್ನವೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಅವರು ದೆಹಲಿಗೆ ತೆರಳಲಿದ್ದಾರೆ. ರಾಜ್ಯ ಕಾಂಗ್ರೆಸ್ಸಿನಲ್ಲಿ ಮುಖ್ಯಮಂತ್ರಿ ಆಯ್ಕೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ನಡುವೆ ಪೈಪೋಟಿ … Continued

ಸಿಬಿಐ ಮುಖ್ಯಸ್ಥರ ಹುದ್ದೆಗೆ ಮೂವರ ಹೆಸರು ಶಾರ್ಟ್‌ಲಿಸ್ಟ್, ಕರ್ನಾಟಕದ ಡಿಜಿಪಿ ಮುಂಚೂಣಿಯಲ್ಲಿ : ಮೂಲಗಳು

ನವದೆಹಲಿ : ಪ್ರಧಾನ ಮಂತ್ರಿ, ಭಾರತದ ಮುಖ್ಯ ನ್ಯಾಯಮೂರ್ತಿ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ಕೇಂದ್ರೀಯ ತನಿಖಾ ದಳದ ಉನ್ನತ ಹುದ್ದೆಗೆ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಆಯ್ಕೆ ಮಾಡಿದೆ ಎಂದು ಮೂಲಗಳು ತಿಳಿಸಿವೆ. ಶನಿವಾರ ಸಂಜೆ ನಡೆದ ಉನ್ನತ ಮಟ್ಟದ ಸಮಿತಿ ಸಭೆಯ ನಂತರ ಹೆಸರುಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆ. … Continued

ಕೃಷ್ಣ ಸಾಗರ ಸರೋವರದಲ್ಲಿ ಮುಳುಗಿ 5 ಮಕ್ಕಳು ಸಾವು

ಗುಜರಾತ್‌ನ ಬೊಟಾಡ್ ಜಿಲ್ಲೆಯ ಕೃಷ್ಣ ಸಾಗರ ಸರೋವರದಲ್ಲಿ ಶನಿವಾರ ಕನಿಷ್ಠ ಐವರು ಮಕ್ಕಳು ಮುಳುಗಿ ಸಾವಿಗೀಡಾಗಿದ್ದಾರೆ. ವರದಿಗಳ ಪ್ರಕಾರ, ಇಬ್ಬರು ಮಕ್ಕಳು ಸರೋವರದಲ್ಲಿ ಈಜುತ್ತಿದ್ದಾಗ ಅವರು ಮುಳುಗಿದ್ದಾರೆ. ಸ್ಥಳದಲ್ಲಿದ್ದ ಇತರ ಮೂವರು ಮಕ್ಕಳು ಅವರನ್ನು ರಕ್ಷಿಸಲು ಕೆರೆಗೆ ಹಾರಿದ್ದಾರೆ. ಆದರೆ, ಅವರೂ ನೀರಿನಲ್ಲಿ ಮುಳುಗಿದ್ದಾರೆ. ಮೃತರೆಲ್ಲರೂ ಅಪ್ರಾಪ್ತರು. ಸಂಜೆ 4.30ರ ಸುಮಾರಿಗೆ ಸ್ಥಳೀಯರು ಈ ಬಗ್ಗೆ … Continued