ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು: ಸಿಎಲ್‌ಪಿ ಸಭೆ ನಡೆಯುತ್ತಿರುವ ಶಾಂಗ್ರಿ – ಲಾ ಹೊಟೇಲ್ ಮುಂದೆ ಡಿಕೆಶಿ-ಸಿದ್ದರಾಮಯ್ಯ ಬೆಂಬಲಿಗರ ಹೈಡ್ರಾಮಾ

ಬೆಂಗಳೂರು: ಇಂದು ಭಾನುವಾರ ಸಂಜೆ ಸಿಎಲ್‌ಪಿ ಸಭೆ ನಡೆಯುತ್ತಿರುವ ಶಾಂಗ್ರಿ – ಲಾ ಹೋಟೆಲ್ ಮುಂದೆ ಹೈಡ್ರಾಮಾ ನಡೆಯುತ್ತಿದೆ. ಸಿದ್ದರಾಮಯ್ಯ ಬೆಂಬಲಿಗರು ಹಾಗೂ ಡಿ.ಕೆ.ಶಿವಕುಮಾರ ಬೆಂಬಲಿಗರು ತಮ್ಮ ತಮ್ಮ ನಾಯಕರ ಪರವಾಗಿ ಘೋಷಣೆ ಕೂಗುತ್ತಿದ್ದಾರೆ.
ಸಿದ್ದರಾಮಯ್ಯ ಫೋಟೋ ಹಿಡಿದುಕೊಂಡು ಅವರ ಬೆಂಬಲಿಗರು ಸಿದ್ದು ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಿದ್ದರೆ, ಡಿ.ಕೆ.ಶಿವಕುಮಾರ ಬೆಂಬಲಿಗರು ಶಿವಕುಮಾರ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಆರಂಭಗೊಂಡಿದೆ. ಎಲ್ಲಾ ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಭೆಯಲ್ಲಿ ಮುಖ್ಯಮಂತ್ರಿ ಯಾರು ಎಂಬುದರ ಕುರಿತಾಗಿ ಶಾಸಕರ ಅಭಿಪ್ರಾಯ ಪಡೆಯಲಾಗುತ್ತಿದ್ದು, ಈ ಬಗ್ಗೆ ಮುಂದಿನ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ.
ಶಿವಕುಮಾರ್‌ ಮನೆಯಲ್ಲಿ ಸಭೆ
ಶಾಸಕಾಂಗ ಸಭೆಗೆ ಆಗಮಿಸಿದ ಬಹುತೇಕ ಶಾಂಗ್ರಿ-ಲಾ ಹೊಟೇಲಿಗೆ ತೆರಳುವ ಮೊದಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಸೇರಿ ಸಭೆ ನಡೆಸಿದ್ದಾರೆ ಎನ್ನಲಾಗಿದೆ. 15 ಕ್ಕೂ ಹೆಚ್ಚು ಶಾಸಕರು ಡಿ.ಕೆ.ಶಿವಕುಮಾರ ನಿವಾಸದಲ್ಲಿ ಸೇರಿ ಮಾತುಕತೆ ನಡೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement