“ನೀವು ತಮಾಷೆ ಮಾಡುತ್ತಿದ್ದೀರಾ?” : ತನ್ನ ಲಂಡನ್ ವಿಳಾಸ ʼ10 ಡೌನಿಂಗ್ ಸ್ಟ್ರೀಟ್‌ʼ ಎಂಬುದನ್ನು ನಂಬಲು ವಲಸೆ ಅಧಿಕಾರಿ ನಿರಾಕರಿಸಿದ ಪ್ರಸಂಗ ನೆನಪಿಸಿಕೊಂಡ ಸುಧಾ ಮೂರ್ತಿ

ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡ ಲೇಖಕಿ ಮತ್ತು ಇನ್ಫೊಸಿಸ್‌ ಫೌಂಡೇಶನ್‌ ಮಾಜಿ ಅಧ್ಯಕ್ಷೆ ಸುಧಾ ಮೂರ್ತಿ ಅವರು ’10 ಡೌನಿಂಗ್ ಸ್ಟ್ರೀಟ್’ ಎಂದು ಅಡ್ರೆಸ್‌ ಬರೆದಾಗ ವಲಸೆ ಅಧಿಕಾರಿಯೊಬ್ಬರು ಈ ವಿಳಾಸವನ್ನು ನಂಬಲು ನಿರಾಕರಿಸಿದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
10 ಡೌನಿಂಗ್ ಸ್ಟ್ರೀಟ್ ಯುನೈಟೆಡ್ ಕಿಂಗ್‌ಡಂನ ಪ್ರಧಾನ ಮಂತ್ರಿಯ ಅಧಿಕೃತ ನಿವಾಸ ಮತ್ತು ಕಚೇರಿಯಾಗಿದ್ದು, ಅಲ್ಲಿ ಅವರ ಅಳಿಯ ಮತ್ತು ಬ್ರಿಟನ್‌ ಪ್ರಧಾನ ಮಂತ್ರಿ ರಿಷಿ ಸುನಕ್ ಮತ್ತು ಮಗಳು ಅಕ್ಷತಾ ಮೂರ್ತಿ ಪ್ರಸ್ತುತ ವಾಸಿಸುತ್ತಿದ್ದಾರೆ.
“ಒಮ್ಮೆ ಲಂಡನ್‌ಗೆ ನಾನು ಹೋದಾಗ, ವಲಸೆ ಅಧಿಕಾರಿಗಳು ನನ್ನ ವಸತಿ ವಿಳಾಸವನ್ನು ಕೇಳಿದರು. ‘ಲಂಡನ್ನಿನಲ್ಲಿ ಎಲ್ಲಿ ತಂಗಿದ್ದೀರಾ?’ ಎಂದು ವಲಸೆ ಅಧಿಕಾರಿಗಳು ಪ್ರಶ್ನಿಸಿದರು. ನನ್ನ ಅಕ್ಕ ನನ್ನ ಜೊತೆಗಿದ್ದರು ಮತ್ತು ನಾನು ‘10 ಡೌನಿಂಗ್ ಸ್ಟ್ರೀಟ್’ ಎಂದು ಯಾಕೆ ಬರೆಯಬೇಕು ಎಂದು ಅಂದುಕೊಂಡೆ. ಯಾಕೆಂದರೆ ಅದು ಬ್ರಿಟನ್‌ ಪ್ರಧಾನಮಂತ್ರಿಯ ಅಧಿಕೃತ ನಿವಾಸವಾಗಿತ್ತು. ನನ್ನ ಮಗನೂ ಅಲ್ಲಿ (ಯುಕೆ) ವಾಸಿಸುತ್ತಾನೆ, ಆದರೆ ನನಗೆ ಅವನ ಸಂಪೂರ್ಣ ವಿಳಾಸ ನೆನಪಿರಲಿಲ್ಲ. ಹೀಗಾಗಿ ನಾನು ಅಂತಿಮವಾಗಿ ನನ್ನ ವಸತಿ ವಿಳಾಸವನ್ನು 10 ಡೌನಿಂಗ್ ಸ್ಟ್ರೀಟ್ ಎಂದು ಬರೆದೆ ಎಂದು ಮೂರ್ತಿ ಜನಪ್ರಿಯ ಕಾರ್ಯಕ್ರಮದಲ್ಲಿ ನೆನಪಿಸಿಕೊಂಡರು.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   2000 ನೋಟುಗಳ ವಿನಿಮಯ: ಆರ್‌ಬಿಐ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್‌

ಹಾಗೆ ಬರೆದಿದ್ದನ್ನು ನೋಡಿ ಇಮಿಗ್ರೇಷನ್ ಆಫೀಸರ್ (ವಲಸೆ ಅಧಿಕಾರಿ) ತನ್ನನ್ನು ನೋಡಿ “ನೀವು ತಮಾಷೆ ಮಾಡುತ್ತಿದ್ದೀರಾ?!” ಎಂದು ಪ್ರಶ್ನಿಸಿದ ಎಂದು ಸುಧಾಮೂರ್ತಿ ಹೇಳಿದರು. ಅದಕ್ಕೆ ಅವರು, “ನಹೀ, ಸಚ್ಚಿ ಬೋಲ್ತಿ ಹೂ (ಇಲ್ಲ, ನಾನು ನಿಮಗೆ ನಿಜ ಹೇಳುತ್ತಿದ್ದೇನೆ) ಎಂದು ಹೇಳಿದೆ. 72 ವರ್ಷದ, ಸರಳ ಮಹಿಳೆ ನಾನು ಬ್ರಿಟನ್‌ ಪ್ರಧಾನಿಯ ಅತ್ತೆಯಾಗಬಹುದು ಎಂದು ಯಾರೂ ನಂಬುವುದಿಲ್ಲ ಎಂದು ಘಟನೆಯನ್ನು ನೆನಪಿಸಿಕೊಂಡರು.
ತಮ್ಮ ಡ್ರೆಸ್‌ ಕಾರಣದಿಂದ ಇಬ್ಬರು ಬಿಸಿನೆಸ್ ಕ್ಲಾಸ್ ಪ್ರಯಾಣಿಕರು ತಮ್ಮನ್ನು ಪಕ್ಕಕ್ಕೆ ತಳ್ಳಿದ ಘಟನೆಯನ್ನೂ ನೆನಪಿಸಿಕೊಂಡರು.

ಸುಧಾಮೂರ್ತಿ ಅವರು ಸಲ್ವಾರ್-ಕಮೀಜ್ ಧರಿಸಲು ಆಯ್ಕೆ ಮಾಡಿಕೊಂಡಿದ್ದರಿಂದ “ಕ್ಯಾಟಲ್ ಕ್ಲಾಸ್” ಎಂದು ತಮ್ಮನ್ನು ಉಲ್ಲೇಖಿಸಲಾಗಿದೆ ಎಂದು ನೆನಪಿಸಿಕೊಂಡರು. ಅವರ ಅನುಭವದಲ್ಲಿ, ಸಲ್ವಾರ್ ಕಮೀಜ್ ಅಥವಾ ಸೀರೆಗಳನ್ನು ಧರಿಸಿದಾಗ ಅವರನ್ನು “ದೀದಿ” ಅಥವಾ “ಬೆಹೆನ್ಜಿ” ಎಂದು ಲೇಬಲ್ ಮಾಡಲಾಗಿದೆ.
ಸಂಚಿಕೆಯಲ್ಲಿ, ಇತ್ತೀಚೆಗೆ ತಮ್ಮ ‘ದಿ ಎಲಿಫೆಂಟ್ ವಿಸ್ಪರರ್ಸ್’ ಚಲನಚಿತ್ರಕ್ಕಾಗಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದ ನಿರ್ಮಾಪಕ ಗುನೀತ್ ಮೊಂಗಾ ಮತ್ತು ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ಪಡೆದ ನಟಿ ರವೀನಾ ಟಂಡನ್ ಅವರೊಂದಿಗೆ ಸೇರಿಕೊಂಡರು.
ಸುಧಾಮೂರ್ತಿ ಅವರಿಗೆ ಇತ್ತೀಚೆಗೆ ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು.

ಇಂದಿನ ಪ್ರಮುಖ ಸುದ್ದಿ :-   ಪ್ರಧಾನಿ ಮೋದಿ ಭೇಟಿ ಮಾಡಿದ ಚಾಟ್‌ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್‌ಮನ್ : ಭಾರತದಲ್ಲಿ ಕೃತಕಬುದ್ಧಿಮತ್ತೆ (AI) ಬಳಕೆಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

5 / 5. ಒಟ್ಟು ವೋಟುಗಳು 1

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement