ಅದಾನಿ ಕಂಪೆನಿಗಳ ತನಿಖೆ 2016ರಿಂದ ನಡೆದಿಲ್ಲ : ವರದಿ ಸಲ್ಲಿಕೆಗೆ 6 ತಿಂಗಳು ಬೇಕು ಎಂದು ಸೆಬಿಯಿಂದ ಸುಪ್ರೀಂ ಕೋರ್ಟಿಗೆ ಮನವಿ

ನವದೆಹಲಿ: 2016ರಿಂದ ಅದಾನಿ ಸಮೂಹದ ಯಾವುದೇ ಕಂಪೆನಿಗಳನ್ನು ತನಿಖೆ ಮಾಡಿಲ್ಲ ಎಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ಸೋಮವಾರ ಅಫಿಡವಿಟ್ ಮೂಲಕ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. [
ಸಂಘಟಿತ ಸಂಸ್ಥೆಗಳ ವ್ಯವಹಾರಗಳ ತನಿಖೆ ಅತ್ಯಂತ ಸಂಕೀರ್ಣವಾಗಿರುವುದರಿಂದ ತನಿಖೆಗೆ ಅಧಿಕ ಸಮಯ ಅಗತ್ಯವಿದೆ ಎಂದು ಸೆಬಿ ಮನವಿ ಮಾಡಿದೆ. ಅದಾನಿ ಸಮೂಹದ ವಿರುದ್ಧ ನಡೆಸುತ್ತಿರುವ ತನಿಖೆಯನ್ನು ಪೂರ್ಣಗೊಳಿಸಲು ಇನ್ನೂ ಆರು ತಿಂಗಳ ಸಮಯಾವಕಾಶ ಬೇಕು ಎಂದು ಸೆಬಿ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಈ ಮನವಿಯಲ್ಲಿ ಸೆಬಿ, 2016ರಿಂದಲೂ ತಾನು ಅದಾನಿ ಸಮೂಹದ ಕುರಿತು ತನಿಖೆ ನಡೆಸುತ್ತಿದ್ದೇನೆ ಎಂಬುದು ಸತ್ಯವಲ್ಲ ಎಂದು ಹೇಳಿದೆ.
ಹಿಂಡೆನ್‌ಬರ್ಗ್ ವರದಿಯಲ್ಲಿ ಉಲ್ಲೇಖಿಸಲಾದ ಹನ್ನೆರಡು ವಹಿವಾಟುಗಳಿಗೆ ಸಂಬಂಧಿಸಿದ ತನಿಖೆಯು ವಿವಿಧ ಅಧಿಕಾರ ವ್ಯಾಪ್ತಿಯ ಅನೇಕ ಉಪ ವ್ಯವಹಾರಗಳನ್ನು ಒಳಗೊಂಡಿದೆ. ಈ ವಹಿವಾಟುಗಳ ಕಟ್ಟುನಿಟ್ಟಿನ ತನಿಖೆಗೆ ಪೂರಕ ದಾಖಲೆಗಳೊಂದಿಗೆ ಮೂಲ ಮಾಹಿತಿಯನ್ನು ಒಗ್ಗೂಡಿಸುವ ಅಗತ್ಯವಿದೆ. ಆ ಬಳಿಕ ವಿಶ್ಲೇಷಣೆ ನಡೆಸಿ ನಿರ್ಣಾಯಕ ಸಂಗತಿಗಳಿಗೆ ಬರಲಾಗುವುದು ಎಂದು ಸೆಬಿ ಹೇಳಿದೆ. ಹೀಗಾಗಿ ತನಿಖೆಗೆ ಇನ್ನೂ ಆರು ತಿಂಗಳ ಕಾಲಾವಕಾಶ ಬೇಕು ಎಂದು ಮನವಿ ಮಾಡಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   11 ವಿಧದ ವಿಷಯಗಳನ್ನು ನಿಷೇಧಿಸಲಿರುವ ಡಿಜಿಟಲ್ ಇಂಡಿಯಾ ಬಿಲ್: ಸಚಿವ ರಾಜೀವ ಚಂದ್ರಶೇಖರ

ಅದಾನಿ ಸಮೂಹ ಕಂಪನಿಗಳ ಬಗ್ಗೆ ಹಿಂಡೆನ್‌ಬರ್ಗ್ ನಡೆಸಿದ ಸಂಶೋಧನಾ ವರದಿಯ ಸುತ್ತಲಿನ ವಿವಾದ ಮತ್ತು ಸಂಘಟಿತ ಸಂಸ್ಥೆ ವಿರುದ್ಧದ ಆರೋಪಗಳ ತನಿಖೆಯನ್ನು ಪೂರ್ಣಗೊಳಿಸಲು ಸೆಬಿಗೆ ಕೇವಲ ಮೂರು ತಿಂಗಳ ಕಾಲಾವಕಾಶ ನೀಡಲು ನ್ಯಾಯಾಲಯ ಶುಕ್ರವಾರ ಮುಂದಾಗಿತ್ತು.
ತನಿಖೆ ಮುಂದುವರಿಸಲು ಸೆಬಿಗೆ ಮಾರ್ಚ್ 2 ರಂದು ನೀಡಿದ ಆದೇಶದಲ್ಲಿ, ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಮೇ 2ಕ್ಕೆ ತನಿಖೆ ಪೂರ್ಣಗೊಳ್ಳಬೇಕಿತ್ತು. ಹಗರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎ ಎಂ ಸಪ್ರೆ ನೇತೃತ್ವದ ಸಮಿತಿ ತನಿಖೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್‌ ನೀಡಿದ್ದ ಆದೇಶಕ್ಕೆ ಪೂರಕವಾಗಿ ಈ ತನಿಖೆ ನಡೆಯುತ್ತಿದೆ.
ಷೇರಿನ ಬೆಲೆಗಳನ್ನು ಅಕ್ರಮ ಮಾರ್ಗದ ಮೂಲಕ ಹೆಚ್ಚಿಸುವ ಮೂಲಕ ಅದಾನಿ ಸಂಸ್ಥೆ ವಂಚನೆ ಎಸಗಿದೆ ಎಂದು ಆರೋಪಿಸಿ ಹಿಂಡೆನ್‌ಬರ್ಗ್ ರಿಸರ್ಚ್ ಸಂಸ್ಥೆ ಪ್ರಕಟಿಸಿದ್ದ ವರದಿಗೆ ಸಂಬಂಧಿಸಿದಂತೆ ನಾಲ್ಕು ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ಹಿಂಡೆನ್‌ ಬರ್ಗ್‌ ನೀಡಿದ ವರದಿಯಿಂದಾಗಿ ಅದಾನಿ ಕಂಪೆನಿಗಳ ಮೌಲ್ಯ 100 ಬಿಲಿಯನ್ ಡಾಲರ್‌ ಕುಸಿತ ಕಂಡಿತು ಎಂದು ವರದಿಯಾಗಿತ್ತು.

ಇಂದಿನ ಪ್ರಮುಖ ಸುದ್ದಿ :-   2000 ನೋಟುಗಳ ವಿನಿಮಯ: ಆರ್‌ಬಿಐ ನಿರ್ಧಾರ ಪ್ರಶ್ನಿಸಿದ್ದ ಅರ್ಜಿಯ ತುರ್ತು ವಿಚಾರಣೆಗೆ ನಿರಾಕರಿಸಿದ ಸುಪ್ರೀಂ ಕೋರ್ಟ್‌

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement