ಮಾರ್ಚ್‌ ತ್ರೈಮಾಸಿಕದಲ್ಲಿ ಸ್ಟೇಟ್‌ ಬ್ಯಾಂಕ್‌ ಲಾಭದಲ್ಲಿ ಶೇ.83ರಷ್ಟು ಜಿಗಿತ : ₹16,694 ಕೋಟಿ ನಿವ್ವಳ ಲಾಭ

ನವದೆಹಲಿ: 2022-23ರ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ 83ರಷ್ಟು ಜಿಗಿತ ಕಂಡು ₹16,694.51 ಕೋಟಿಗೆ ತಲುಪಿದೆ ಎಂದು ಎಸ್‌ಬಿಐ ಗುರುವಾರ ವರದಿ ಮಾಡಿದೆ.
2021-22 ಹಣಕಾಸು ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿವ್ವಳ ಲಾಭವು ₹9,113.53 ಕೋಟಿಗಳಷ್ಟಿತ್ತು. 2022-23 ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ, ಬ್ಯಾಂಕ್‌ನ ಬಡ್ಡಿ ಆದಾಯವು ಶೇಕಡಾ 31 ರಷ್ಟು ಏರಿಕೆಯಾಗಿ ₹92,951 ಕೋಟಿಗೆ ತಲುಪಿದೆ ಎಂದು ಎಸ್‌ಬಿಐ ನಿಯಂತ್ರಕ ಫೈಲಿಂಗ್‌ನಲ್ಲಿ ತಿಳಿಸಿದೆ. ಮಾರ್ಚ್ ತ್ರೈಮಾಸಿಕದಲ್ಲಿ ಬ್ಯಾಂಕಿನ ಅನುತ್ಪಾದಕ ಸಾಲವು (ಎನ್‌ಪಿಎ) ಅರ್ಧದಷ್ಟು ಕಡಿಮೆಯಾಗಿದ್ದು 3,315.71 ಕೋಟಿ ರೂ.ಗಳಿಗೆ ಇಳಿಕೆ ಕಂಡಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 7.237.45 ಕೋಟಿ ರೂ. ಅನುತ್ಪಾದಕ ಸಾಲ ದಾಖಲಾಗಿತ್ತು.
ಪೂರ್ಣ 2022-23 ಹಣಕಾಸು ವರ್ಷದಲ್ಲಿ, ಎಸ್‌ಬಿಐ ನಿವ್ವಳ ಲಾಭವು ಶೇ 59 ರಷ್ಟು ಏರಿಕೆಯಾಗಿ ₹ 50,232.45 ಕೋಟಿಗೆ ತಲುಪಿದೆ. 2021-22ನೇ ಹಣಕಾಸು ವರ್ಷದಲ್ಲಿ ಲಾಭ ₹31,675.98 ಕೋಟಿಗಳಷ್ಟಾಗಿತ್ತು.
ಪ್ರತಿ ಷೇರಿಗೆ 11.30 ರೂ. ಡಿವಿಡೆಂಡ್
ಭಾರೀ ಲಾಭ ದಾಖಲಾದ ಹಿನ್ನೆಲೆಯಲ್ಲಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಆಡಳಿತ ಮಂಡಳಿಯು ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಪ್ರತಿ ಈಕ್ವಿಟಿ ಷೇರಿಗೆ 11.30 ರೂ. ಲಾಭಾಂಶ ನೀಡಲು ಶಿಫಾರಸು ಮಾಡಿದೆ. ಈ ಲಾಭಾಂಶವನ್ನು ಜೂನ್ 14 ರೊಳಗೆ ಪಾವತಿಸಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.

advertisement

ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ

2023-24 ನೇ ಸಾಲಿನ ಅಡ್ಮಿಷನ್ ಗಳು ಆರಂಭವಾಗಿವೆ

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 9535127775 , 9901837775 , 6364528715 , 0836-2775155

ಇಂದಿನ ಪ್ರಮುಖ ಸುದ್ದಿ :-   11 ವಿಧದ ವಿಷಯಗಳನ್ನು ನಿಷೇಧಿಸಲಿರುವ ಡಿಜಿಟಲ್ ಇಂಡಿಯಾ ಬಿಲ್: ಸಚಿವ ರಾಜೀವ ಚಂದ್ರಶೇಖರ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

0 / 5. ಒಟ್ಟು ವೋಟುಗಳು 0

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ನಿಮ್ಮ ಕಾಮೆಂಟ್ ಬರೆಯಿರಿ

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ವಾಟ್ಸಾಪ್ ಗ್ರೂಪ್ ಸೇರಿ
ಟೆಲಿಗ್ರಾಮ್ ಚಾನೆಲ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement