ಧಾರವಾಡ: ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೋ) ದೂರ ಶಿಕ್ಷಣದ ಕೋರ್ಸುಗಳಿಗೆ ಜುಲೈ 2023ನೇ ಸಾಲಿಗೆ ಪ್ರವೇಶ ಪ್ರಾರಂಭವಾಗಿದೆ.
ಪ್ರವೇಶಕ್ಕಾಗಿ ಧಾರವಾಡ ಜೆ.ಎಸ್.ಎಸ್. ಕಾಲೇಜಿನಲ್ಲಿರುವ ಇಗ್ನೋದ ಧಾರವಾಡ ಅಧ್ಯಯನ ಕೇಂದ್ರದಿಂದ ಮಾಹಿತಿ ಪಡೆಯಬಹುದಾಗಿದೆ. ಇಗ್ನೋ ಧಾರವಾಡದ ಜೆ.ಎಸ್.ಎಸ್ ಕಾಲೇಜಿನಲ್ಲಿ, ಎಂಬಿಎ, ಎಂಸಿಎ, ಎಂ.ಕಾಂ, ಎಂ.ಎ.(ಇಂಗ್ಲಿಷ್) ಎಂ.ಎ.(ಇತಿಹಾಸ), ಎಂ.ಎ.(ಅರ್ಥಶಾಸ್ತ್ರ) ಮುಂತಾದ ಸ್ನಾತಕೋತ್ತರ ಕೋರ್ಸುಗಳು ಬಿಎ, ಬಿ.ಕಾಂ, ಬಿ.ಎಸ್ಸಿ, ಬಿಸಿಎ, ಬಿಲಿಬ್ ಸೈನ್ಸ್, ಬಿ.ಟಿ.ಎಸ್ ಮುಂತಾದ ಸ್ನಾತಕ ಕೋರ್ಸುಗಳು ಡಿಇಸಿಇ, ಡಿಟಎಸ್, ಡಿಎನ್‌ಎಚ್‌ಇ ಮುಂತಾದ ಡಿಪ್ಲೋಮಾ ಕೊರ್ಸುಗಳು, ಪಿಜಿಡಿಎಚ್‌ಇ, ಪಿಜಿಡಿಆರ್‌ಡಿ, ಪಿಜಿಸಿಇಡಿಎಸ್, ಪಿಜಿಡಿಇಡಿಎಸ್, ಪಿಜಿಡಿಇಎಸ್‌ಡಿ, ಪಿಜಿಡಿಇಎಸ್‌ಡಿ, ಪಿಜಿಡಿಎಲ್‌ಎಎನ್, ಮುಂತಾದ ಪಿಜಿ ಡಿಪ್ಲೋಮ ಕೋರ್ಸಗಳು, ಸಿಟಿಪಿಎಮ್, ಸಿಡಿಎಮ್, ಸಿಇಎಸ್,ಸಿಎಫ್‌ಎನ್, ಸಿಐಜಿ,ಸಿಆರ್‌ಡಿ ಮುಂತಾದ ಸರ್ಟಿಪಿಕೇಟ್ ಕೋರ್ಸುಗಳು ಸೇರಿದಂತೆ ಇಗ್ನೋ ಜೆ.ಎಸ.ಎಸ್.ಅಧ್ಯಯನ ಕೇಂದ್ರದಲ್ಲಿ ಸುಮಾರು ೩೮ ವಿವಿಧ ಕೊರ್ಸಗಳು ಅಧ್ಯಯನಕ್ಕೆ ಲಭ್ಯವಿದೆ.
ಹೆಚ್ಚಿನ ಮಾಹಿತಿಗಾಗಿ ಇಗ್ನೋ ಧಾರವಾಡ ಜೆ.ಎಸ್.ಎಸ್. ಅಧ್ಯಯನ ಕೇಂದ್ರ ವಿದ್ಯಾಗಿರಿ, ಧಾರವಾಡ, ಇವರ ದೂರವಾಣಿ ಸಂಖ್ಯೆ – 0836-2468999, 9980292705, 9845304811, 8951871481 ಸಂರ್ಪಕಿಸಬಹುದಾಗಿದೆ. ಪ್ರವೇಶ ಆನ್ ಲೈನ ಮೂಲಕ ಇದ್ದು www.ignou.ac.in ನಲ್ಲಿ ಲಭ್ಯವಿದೆ ಎಂದು ಧಾರವಾಡ ಇಗ್ನೋ ಅಧ್ಯಯನ ಕೇಂದ್ರ ಸಂಯೋಜಕರಾದ ಡಾ. ಸೂರಜ್ ಜೈನ್ ತಿಳಿಸಿದ್ದಾರೆ.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ