ಒತ್ತಡಕ್ಕೆ ಮಣಿದು ಮುಸ್ಲಿಂ ಹುಡುಗನ ಜೊತೆ ನಿಗದಿಯಾಗಿದ್ದ ತನ್ನ ಮಗಳ ಮದುವೆ ರದ್ದುಗೊಳಿಸಿದ ಬಿಜೆಪಿ ನಾಯಕ

ನವದೆಹಲಿ: ಉತ್ತರಾಖಂಡದ ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರೊಬ್ಬರು ಹಿಂದುತ್ವ ಸಂಘಟನೆಗಳ ಒತ್ತಡಕ್ಕೆ ಮಣಿದು ಮುಸ್ಲಿಂ ವ್ಯಕ್ತಿಯೊಂದಿಗೆ ನಡೆಯಬೇಕಿದ್ದ ತಮ್ಮ ಮಗಳ ಮದುವೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿಯಾಗಿದೆ.
ಮೇ 28ರಂದು ಮದುವೆ ನಿಗದಿಯಾಗಿತ್ತು. ಪೌರಿ ಪುರಸಭೆ ಅಧ್ಯಕ್ಷ ಯಶಪಾಲ ಬೇನಮ್ ಅವರು ತಮ್ಮ ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿರುವ ಕಾರಣಕ್ಕೆ ಜನಸಾಮಾನ್ಯರಿಂದ ಟೀಕೆಗೆ ಗುರಿಯಾದ ನಂತರ ಮಗಳ ಮದುವೆಯನ್ನು ಮುಂದೂಡಿದರು.
ಬಿಜೆಪಿ ಮುಖಂಡರ ಮಗಳ ಮದುವೆ ಕಾರ್ಡ್‌ನ ಫೋಟೋ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.
ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ಬಿರುಗಾಳಿ ಎಬ್ಬಿಸಿದೆ. ಬಿಜೆಪಿಯ ಬೆಂಬಲಿಗರು ಮತ್ತು ವಿರೋಧಿಗಳು ಬೇನಾಮ್ ಅವರನ್ನು ಟೀಕಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಶಪಾಲ ಬೇನಮ್, ಮಗಳ ಸಂತೋಷಕ್ಕಾಗಿ ಮುಸ್ಲಿಂ ಯುವಕನೊಂದಿಗೆ ಮದುವೆ ಮಾಡಲು ಯೋಚಿಸಿದ್ದೆ. ಆದರೆ ಉದ್ದೇಶಿತ ಮದುವೆಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಸೇರಿದಂತೆ ಎಲ್ಲೆಡೆ ವ್ಯಕ್ತವಾದ ಪ್ರತಿಕ್ರಿಯೆ ಗಮನದಲ್ಲಿಟ್ಟುಕೊಂಡು ಅದನ್ನು ಮುಂದೂಡಲಾಗಿದೆ. ಈಗ ನಾನು ಸಾರ್ವಜನಿಕರ ಧ್ವನಿಯನ್ನೂ ಕೇಳಬೇಕಾಗಿದೆ ಎಂದು ಬೇನಾಮ್ ಹೇಳಿದರು. ಪೌರಿ ನಗರದಲ್ಲಿ ಮೇ 28 ರಂದು ನಡೆಯಲಿರುವ ಮದುವೆಯನ್ನು ಈಗ ರದ್ದುಗೊಳಿಸಲಾಗಿದೆ ಎಂದು ಅವರು ಹೇಳಿದರು.
ಶುಕ್ರವಾರ ಇಲ್ಲಿನ ಝಂಡಾ ಚೌಕದಲ್ಲಿ ಹಿಂದುತ್ವ ಸಂಘಟನೆಗಳು ಬಿಜೆಪಿ ಮುಖಂಡ ಬೇನಂ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು. ವಿಎಚ್‌ಪಿ, ಭೈರವ ಸೇನೆ ಮತ್ತು ಬಜರಂಗದಳ ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು. ಇಂತಹ ಮದುವೆಯನ್ನು ನಾವು ಬಲವಾಗಿ ವಿರೋಧಿಸುತ್ತೇವೆ ಎಂದು ಜಿಲ್ಲಾ ವಿಎಚ್‌ಪಿ ಕಾರ್ಯಾಧ್ಯಕ್ಷ ದೀಪಕ ಗೌಡ್‌ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement