ವಿದ್ಯುತ್​ ಬಿಲ್ ವಸೂಲಿಗೆ ಹೋದ ಲೈನ್ ಮ್ಯಾನ್‌ಗೆ ಚಪ್ಪಲಿಯಿಂದ ಹಲ್ಲೆ..!

ಕೊಪ್ಪಳ: 200 ಯುನಿಟ್ ಕರೆಂಟ್ ಉಚಿತ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್‌ ಈಗ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಈಗ ಹಲವೆಡೆ ಜನ ವಿದ್ಯುತ್‌ ಬಿಲ್‌ ಕಟ್ಟುವುದಿಲ್ಲ ಎಂದು ಹೇಳುತ್ತಿದ್ದಾರೆ. ಕೊಪ್ಪಳದಲ್ಲಿ ವಿದ್ಯುತ್ ಬಿಲ್ ಸಂಗ್ರಹ ಮಾಡಲು ಬಂದ ಲೈನ್‌ ಮ್ಯಾನ್‌ ಮೇಲೆ ಹಲ್ಲೆ ಮಾಡಿರುವ ಘಟನೆ ವರದಿಯಾಗಿದೆ.
ಕೊಪ್ಪಳದ ಕುಕನಪಲ್ಲಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ ಮ್ಯಾನ್​ ಅವರಿಗೆ ಅವಾಚ್ಯ ಶಬ್ದದಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದು ಹಲ್ಲೆ ಮಾಡಿದ ಘಟನೆ ನಡೆದಿದೆ.
ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬಾತ ವಿದ್ಯುತ್​ ಬಿಲ್ ಬಾಕಿ ಉಳಿಸಿಕೊಂಡಿದ್ದು ಬಿಲ್​ ವಸೂಲಾತಿಗೆಂದು ಲೈನ್​ಮ್ಯಾನ್​ ಮಂಜುನಾಥ​ ಎಂಬವರು ತೆರಳಿದ್ದರು. ಈ ವೇಳೆ ಲೈನ್​ ಮ್ಯಾನ್ ಬಿಲ್​ ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಕೇಳಿದ್ದಾರೆ, ಆತ ನಾನು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್​ ಕಟ್ಟುವುದಿಲ್ಲ. ವಿದ್ಯುತ್​ ಉಚಿತ ಎಂದು ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದಿದ್ದಾನೆ. ಅದೆಲ್ಲ ಆಗಲ್ಲ ಬಾಕಿ ತುಂಬಲೇಬೇಕೆಂದು ಲೈನಮ್ಯಾನ್ ಮಂಜುನಾಥ ಹೇಳಿದ್ದಾರೆ. ನಂತರ ಚಂದ್ರಶೇಖರಯ್ಯ ಅವಾಚ್ಯ ಶಬ್ದಗಳಿಂದ ಮಂಜುನಾಥ ಅವರನ್ನು ನಿಂದಿಸಿ ಥಳಿಸಿದ್ದಾನೆ, ಅಲ್ಲದೆ, ಅವರತ್ತ ಚಪ್ಪಲಿ ಎಸೆದು ದುರ್ವರ್ತನೆ ತೋರಿದ ಘಟನೆಯೂ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿಯ ವಿರುದ್ಧ ಲೈನ್‌ಮ್ಯಾನ್‌ ಮಂಜುನಾಥ ಅವರು ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರಮುಖ ಸುದ್ದಿ :-   ಸಚಿವ ದಿನೇಶ ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನ' ಹೇಳಿಕೆ : ಬಿಜೆಪಿ ಶಾಸಕ ಯತ್ನಾಳ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement