ಸಮಾಜವಾದಿ ಪಕ್ಷದ ಅಜಂ ಖಾನಗೆ ದೊಡ್ಡ ರಿಲೀಫ್‌ : ದ್ವೇಷ ಭಾಷಣದ ಪ್ರಕರಣದಲ್ಲಿ ʼತಪ್ಪಿತಸ್ಥʼ ತೀರ್ಪು ರದ್ದುಪಡಿಸಿದ ಕೋರ್ಟ್‌

ನವದೆಹಲಿ: 2019ರ ದ್ವೇಷ ಭಾಷಣ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಅವರನ್ನು ಉತ್ತರ ಪ್ರದೇಶದ ನ್ಯಾಯಾಲಯ ಇಂದು, (ಮೇ ೨೪) ದೋಷಮುಕ್ತಗೊಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಗುರಿಯಾಗಿಸಿಕೊಂಡು ದ್ವೇಷಪೂರಿತ ಭಾಷಣ ಮಾಡಿದ್ದಕ್ಕಾಗಿ ಕಳೆದ ವರ್ಷ ಸಮಾಜವಾದಿ ನಾಯಕನನ್ನು ತಪ್ಪಿತಸ್ಥ ಎಂದು ಘೋಷಿಸಿದ್ದ ಕೆಳ ನ್ಯಾಯಾಲಯದ ತೀರ್ಪನ್ನು ರಾಂಪುರ ನ್ಯಾಯಾಲಯವು ರದ್ದುಗೊಳಿಸಿತು.
ದೇಶದಲ್ಲಿ ಮುಸ್ಲಿಮರು ಅಸ್ತಿತ್ವದಲ್ಲಿರಲು ಕಷ್ಟಪಡುವ ವಾತಾವರಣವನ್ನು ಪ್ರಧಾನಿ ನಿರ್ಮಿಸುತ್ತಿದ್ದಾರೆ ಎಂದು ಸಮಾಜವಾದಿ ನಾಯಕ ಆಜಂ ಖಾನ್‌ ಆರೋಪಿಸಿದ್ದರು. 2022 ರ ತೀರ್ಪಿನ ನಂತರ ಆಜಂ ಖಾನ್ ಶಾಸಕತ್ವದಿಂದ ಅನರ್ಹಗೊಂಡಿದ್ದರು.
ಖಾನ್ ಪರ ವಕೀಲ ವಿನೋದ್ ಶರ್ಮಾ, “ದ್ವೇಷ ಭಾಷಣ ಪ್ರಕರಣದಲ್ಲಿ ಆಜಂ ಖಾನ್‌ ಅವರನ್ನು ಖುಲಾಸೆಗೊಳಿಸಲಾಗಿದೆ, ನಮಗೆ ನ್ಯಾಯ ಸಿಕ್ಕಿರುವುದಕ್ಕೆ ನಮಗೆ ಸಂತೋಷವಾಗಿದೆ” ಎಂದು ಹೇಳಿದರು.
ಖಾನ್ ಅವರ ಶಾಸಕತ್ವ ಅನರ್ಹಗೊಳಿಸಿದ ನಂತರ, ರಾಂಪುರ ಸದರ್ ಸ್ಥಾನಕ್ಕೆ ಉಪಚುನಾವಣೆ ನಡೆಯಿತು. ಬಿಜೆಪಿ ಅಭ್ಯರ್ಥಿ ಆಕಾಶ ಸಕ್ಸೇನಾ ಅವರು ಚುನಾವಣೆಯಲ್ಲಿ ಆಜಂ ಖಾನ್ ಅವರ ನಿಕಟವರ್ತಿ ಸಮಾಜವಾದಿ ಪಕ್ಷದ ಅಸೀಮ್ ರಾಜಾ ಅವರನ್ನು ಸೋಲಿಸಿದರು.
2017 ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸಮಾಜವಾದಿ ನಾಯಕ ಆಜಂ ಖಾನ್‌ ಭ್ರಷ್ಟಾಚಾರ ಸೇರಿದಂತೆ ಅಕ್ರಮ ಭೂಕಬಳಿಕೆಯವರೆಗಿನ 87 ಪ್ರಕರಣಗಳನ್ನು ಎದುರಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಎಲ್​ಪಿಜಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement